ಬೆಳಗಾವಿಯಲ್ಲಿ ನಾಯಿಯ ಜೀವ ಉಳಿಸಲು ಹೋಗಿ ಪ್ರಾಣ ತೆತ್ತ ಪಿಎಸ್ಐ
ಬೆಳಗಾವಿ: ಕೊರೊನಾ ಭದ್ರತೆಗೆ ತೆರಳುತ್ತಿದ್ದಾಗ ಅಡ್ಡಬಂದ ನಾಯಿಯ ಜೀವ ಉಳಿಸಲು ಹೋಗಿ PSI ಎಂ.ಜಿ.ಗಣಾಚಾರಿ ಮೃತಪಟ್ಟಿರುವ ಘಟನೆ ಯಳ್ಳೂರು ಗ್ರಾಮದ ಬಳಿ ನಡೆದಿದೆ. ಯಳ್ಳೂರು ಗ್ರಾಮದಿಂದ ಪೊಲೀಸ್ ಠಾಣೆಗೆ ಬರುವಾಗ ರಸ್ತೆಯಲ್ಲಿ ನಾಯಿ ಅಡ್ಡಬಂದಿದೆ. ಈ ವೇಳೆ ನಾಯಿಯ ಜೀವ ಉಳಿಸಲು ಹೋಗಿ ಬೈಕ್ ಸ್ಕಿಡ್ ಆಗಿದೆ. ಬೈಕ್ನಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಎಂ.ಜಿ.ಗಣಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ […]
ಬೆಳಗಾವಿ: ಕೊರೊನಾ ಭದ್ರತೆಗೆ ತೆರಳುತ್ತಿದ್ದಾಗ ಅಡ್ಡಬಂದ ನಾಯಿಯ ಜೀವ ಉಳಿಸಲು ಹೋಗಿ PSI ಎಂ.ಜಿ.ಗಣಾಚಾರಿ ಮೃತಪಟ್ಟಿರುವ ಘಟನೆ ಯಳ್ಳೂರು ಗ್ರಾಮದ ಬಳಿ ನಡೆದಿದೆ. ಯಳ್ಳೂರು ಗ್ರಾಮದಿಂದ ಪೊಲೀಸ್ ಠಾಣೆಗೆ ಬರುವಾಗ ರಸ್ತೆಯಲ್ಲಿ ನಾಯಿ ಅಡ್ಡಬಂದಿದೆ. ಈ ವೇಳೆ ನಾಯಿಯ ಜೀವ ಉಳಿಸಲು ಹೋಗಿ ಬೈಕ್ ಸ್ಕಿಡ್ ಆಗಿದೆ.
ಬೈಕ್ನಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಎಂ.ಜಿ.ಗಣಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 9:06 am, Sat, 18 April 20