ಬೆಂಗಳೂರಿನಲ್ಲಿ 154 ವಾರ್ಡ್​​ಗಳು ಗ್ರೀನ್ ಝೋನ್​​ನಲ್ಲಿವೆ! ಮುಂದೇನು?

|

Updated on: May 02, 2020 | 5:05 PM

ಬೆಂಗಳೂರು: ಕೊರೊನಾ ಆಕ್ರಮಣ ಕಾಲದಲ್ಲಿ ಬೆಂಗಳೂರಿಗರಿಗೆ ದೊಡ್ಡ ಸಮಾಧಾನಕರ ಸಂಗತಿಯೊಂದಿದೆ. ರಾಜಧಾನಿ ಬೆಂಗಳೂರು ಬಹುತೇಕ Green Zone ನಲ್ಲಿದೆ. ಆದ್ರೆ ಕೆಲವೇ Red Zone ಗಳಿಂದಾಗಿ ಇಡೀ ಬೆಂಗಳೂರಿನ ಮೇಲೆ ಅತಂಕದ ಛಾಯೆ ಕಾಣಿಸಿಕೊಂಡಿದೆ. ಬೆಂಗಳೂರಿನ 198 ವಾರ್ಡ್ ಗಳ ಪೈಕಿ 154 ವಾರ್ಡ್ ಗಳು ಗ್ರೀನ್ ಝೋನ್ ನಲ್ಲಿವೆ. ಈ ಗ್ರೀನ್ ಝೋನ್ ಗಳಲ್ಲಿ ಯಾವುದೇ ‌ಕೊರೊನಾ‌ ಸೋಂಕಿತರು‌ ಪತ್ತೆಯಾಗಿಲ್ಲ. ಇನ್ನುಳಿದ25 ವಾರ್ಡ್ ಗಳು ಕಂಟೇನ್ಮೆಂಟ್ ಝೋನ್ ಗಳಾಗಿವೆ. ಇವುಗಳದೇ ಕಾಟ/ ಕಂಟಕವಾಗಿರುವುದು. ಈ ಅಂಕಿ […]

ಬೆಂಗಳೂರಿನಲ್ಲಿ 154 ವಾರ್ಡ್​​ಗಳು ಗ್ರೀನ್ ಝೋನ್​​ನಲ್ಲಿವೆ! ಮುಂದೇನು?
ಬಿಬಿಎಂಪಿ ಮುಖ್ಯ ಕಚೇರಿ
Follow us on

ಬೆಂಗಳೂರು: ಕೊರೊನಾ ಆಕ್ರಮಣ ಕಾಲದಲ್ಲಿ ಬೆಂಗಳೂರಿಗರಿಗೆ ದೊಡ್ಡ ಸಮಾಧಾನಕರ ಸಂಗತಿಯೊಂದಿದೆ. ರಾಜಧಾನಿ ಬೆಂಗಳೂರು ಬಹುತೇಕ Green Zone ನಲ್ಲಿದೆ. ಆದ್ರೆ ಕೆಲವೇ Red Zone ಗಳಿಂದಾಗಿ ಇಡೀ ಬೆಂಗಳೂರಿನ ಮೇಲೆ ಅತಂಕದ ಛಾಯೆ ಕಾಣಿಸಿಕೊಂಡಿದೆ.

ಬೆಂಗಳೂರಿನ 198 ವಾರ್ಡ್ ಗಳ ಪೈಕಿ 154 ವಾರ್ಡ್ ಗಳು ಗ್ರೀನ್ ಝೋನ್ ನಲ್ಲಿವೆ. ಈ ಗ್ರೀನ್ ಝೋನ್ ಗಳಲ್ಲಿ ಯಾವುದೇ ‌ಕೊರೊನಾ‌ ಸೋಂಕಿತರು‌ ಪತ್ತೆಯಾಗಿಲ್ಲ. ಇನ್ನುಳಿದ25 ವಾರ್ಡ್ ಗಳು ಕಂಟೇನ್ಮೆಂಟ್ ಝೋನ್ ಗಳಾಗಿವೆ. ಇವುಗಳದೇ ಕಾಟ/ ಕಂಟಕವಾಗಿರುವುದು.

ಈ ಅಂಕಿ ಅಂಶಗಳನ್ನು ಗಂಭೀರವಾಗಿ ತಾಳೆಹಾಕಿ ನೋಡಿರುವ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್ ಕೂಡಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಬೆಂಗಳೂರಿನ ಗ್ರೀನ್ ಜೋನ್ ವಾರ್ಡ್​ಗಳಿಗೆ ಲಾಕ್​ಡೌನ್​ ಮಾರ್ಗಸೂಚಿಗಳಲ್ಲಿ ಸಡಿಲಿಕೆ ನೀಡುವಂತೆ ಮನವಿ ಮಾಡಲು ಮುಂದಾಗಿದ್ದಾರೆ.

ಆದ್ರೆ ಕಂಟೇನ್ಮೆಂಟ್ ಝೋನ್ ಗಳಲ್ಲಿ ಯಾವುದೇ ಲಾಕ್​ಡೌನ್​ ನಿಯಮಗಳು ಸಡಿಲಿಕೆ ಇರೋಲ್ಲ. ಗ್ರೀನ್ ಜೋನ್ ವಾರ್ಡ್ ಗಳಲ್ಲಿ ಮಾತ್ರ ಸಡಿಲಿಕೆ ನೀಡುವಂತೆ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆಯೂ ಅವರು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.