ಬದುಕಿನ ಬಂಡಿ ತಳ್ಳೋಕೆ ಜನರ ವೃತ್ತಿಯನ್ನೇ ಬದಲಿಸಿದ ಕ್ರೂರಿ ಕೊರೊನಾ!
ಮಡಿಕೇರಿ: ಕೊರೊನಾ ಅನ್ನೋ ಹೆಮ್ಮಾರಿ ಬಡವರ ತುತ್ತೂಟವನ್ನೂ ಕಸಿದುಕೊಂಡಿದೆ. ಹೊಟ್ಟೆಪಾಡಿಗೆ ಬದುಕು ಕಟ್ಟಿಕೊಂಡಿದ್ದೋರ ಜೀವನಕ್ಕೆ ಕೊಳ್ಳಿ ಇಟ್ಟಿದೆ. ಖುಷಿ ಖುಷಿಯಲ್ಲಿದ್ದ ಸಣ್ಣಪುಟ್ಟ ಕುಟುಂಬಗಳಲ್ಲಿ ಕಾರ್ಮೋಡ ಆವರಿಸಿದೆ. ಕೊರೊನಾ ಏಟಿಗೆ ಅದೆಷ್ಟೋ ಜನರ ವೃತ್ತಿಯೇ ಬದಲಾಗಿದೆ. ಸ್ಟೇರಿಂಗ್ ಹಿಡಿದಿದ್ದ ಕೈಗಳು ಇದೀಗ ತರಕಾರಿ ಮಾರ್ತಿವೆ. ಹೋಟೆಲ್ನಲ್ಲಿ ತುತ್ತು ಅನ್ನ ನೀಡಿದ್ದ ಮನಸ್ಸು ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದೆ. ಬದುಕಿನ ಬಂಡಿ ತಳ್ಳೋಕೆ ಕಂಡು ಕೊಂಡಿದ್ದೇ ಈ ಹೊಸ ದಾರಿ. ಜನರ ವೃತ್ತಿಯನ್ನೇ ಬದಲಿಸಿದ ಕ್ರೂರಿ ಕೊರೊನಾ! ಮಡಿಕೇರಿ ಜಿಲ್ಲೆ […]
ಮಡಿಕೇರಿ: ಕೊರೊನಾ ಅನ್ನೋ ಹೆಮ್ಮಾರಿ ಬಡವರ ತುತ್ತೂಟವನ್ನೂ ಕಸಿದುಕೊಂಡಿದೆ. ಹೊಟ್ಟೆಪಾಡಿಗೆ ಬದುಕು ಕಟ್ಟಿಕೊಂಡಿದ್ದೋರ ಜೀವನಕ್ಕೆ ಕೊಳ್ಳಿ ಇಟ್ಟಿದೆ. ಖುಷಿ ಖುಷಿಯಲ್ಲಿದ್ದ ಸಣ್ಣಪುಟ್ಟ ಕುಟುಂಬಗಳಲ್ಲಿ ಕಾರ್ಮೋಡ ಆವರಿಸಿದೆ.
ಕೊರೊನಾ ಏಟಿಗೆ ಅದೆಷ್ಟೋ ಜನರ ವೃತ್ತಿಯೇ ಬದಲಾಗಿದೆ. ಸ್ಟೇರಿಂಗ್ ಹಿಡಿದಿದ್ದ ಕೈಗಳು ಇದೀಗ ತರಕಾರಿ ಮಾರ್ತಿವೆ. ಹೋಟೆಲ್ನಲ್ಲಿ ತುತ್ತು ಅನ್ನ ನೀಡಿದ್ದ ಮನಸ್ಸು ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದೆ. ಬದುಕಿನ ಬಂಡಿ ತಳ್ಳೋಕೆ ಕಂಡು ಕೊಂಡಿದ್ದೇ ಈ ಹೊಸ ದಾರಿ.
ಜನರ ವೃತ್ತಿಯನ್ನೇ ಬದಲಿಸಿದ ಕ್ರೂರಿ ಕೊರೊನಾ! ಮಡಿಕೇರಿ ಜಿಲ್ಲೆ ಸುತ್ತಮುತ್ತಲಿನ ಹಳ್ಳಿಯ ನಿವಾಸಿಗಳು ತರಕಾರಿ ಮಾರಾಟದಲ್ಲಿ ಬ್ಯಸಿಯಾಗಿದ್ದಾರೆ. ಆದರೆ ತರಕಾರಿ ಮಾರುತ್ತಿರುವವಱರು ತಮ್ಮ ವೃತ್ತಿಯಲ್ಲಿ ತರಕಾರಿ ವ್ಯಾಪಾರಸ್ತರಲ್ಲ. ಪ್ರವಾಸಿ ಟ್ಯಾಕ್ಸಿಗಳನ್ನ ಓಡಿಸ್ಕೊಂಡು ಖಾಸಗಿ ಬಸ್ ಡ್ರೈವರ್ಸ್, ಬಸ್ ಏಜೆಂಟರ್ಗಳು, ನಿರ್ವಾಹಕರು, ಸಣ್ಣ ಸಣ್ಣ ಹೋಟೆಲ್, ಸೌಂಡ್ ಸಿಸ್ಟಮ್ ವೃತ್ತಿ ನಡೆಸ್ಕೊಂಡು ಇದ್ದೋರು.
ಆದ್ರೆ, ಕೊರೊನಾ ಲಾಕ್ಡೌನ್ ಇವರ ಬದುಕಿಗೆ ಕೊಳ್ಳೀ ಇಟ್ಟಿದೆ. ಕೆಲಸ ಕಾರ್ಯವಿಲ್ದೇ ಇವರು ಕಂಗೆಟ್ಟಿದ್ರು. ಹೀಗಾಗಿ ಕುಟುಂಬವನ್ನ ಸಾಕೋಕೆ, ಮನೆ ಬಾಡಿಗೆ ಕಟ್ಟೋಕೆ, ಒಪ್ಪೊತ್ತಿನ ಊಟಕ್ಕೆ ತಕರಾರಿ ವ್ಯಾಪಾರ ಮಾಡೋ ಪರಿಸ್ಥಿತಿ ಎದುರಾಗಿದೆ.
ಇಲ್ಲಿ ತರಕಾರಿ ವ್ಯಾಪಾರ ಮಾಡ್ತಿರೋರದ್ದು ಒಂದೊಂದೆ ನೋವಿನ ಕಥೆ. ಖಾಸಗಿ ಬಸ್ ಏಜೆಂಟ್ ಆಗಿದ್ದ ಸತೀಶ್ ಎಂಬುವವರು ಇದೀಗ ಮರಗೆಣಸು ಮಾರಾಟದಲ್ಲಿ ತೊಡಗಿದ್ದಾರೆ. ಯುವಕ ವಿನೋದ್ ಅಂದು ಸಣ್ಣ ಕ್ಯಾಂಟೀನ್ ನಡೆಸ್ತಿದ್ರಂತೆ. ಆದ್ರೀಗ ಕೊರೊನಾ ಲಾಕ್ಡೌನ್ನಿಂದಾಗಿ ತರಕಾರಿ ಮಾರ್ತಿದ್ದಾರೆ. ಕಟ್ಟಿಕೊಂಡ ಕನಸು, ಬದುಕಿನ ಲೆಕ್ಕಾಚಾರವೆಲ್ಲಾ ಬುಡುಮೇಲಾಗಿದೆ. ಈ ಬಗ್ಗೆ ಇವರನ್ನ ಕೇಳಿದ್ರೆ, ಏನ್ ಮಾಡೋದು ಸಾರ್, ಹೊಟ್ಟೆಪಾಡು. ಹೀಗಾಗಿ ತರಕಾರಿ ವ್ಯಾಪಾರ ಮಾಡ್ತಿದ್ದೇವೆ. ಜೀವನ ನಡೀಬೇಕಲ್ಲ ಅಂತ ತಮ್ಮ ಸಂಕಷ್ಟದ ಪರಿಸ್ಥಿತಿ ತೋಡಿಕೊಂಡಿದ್ದಾರೆ.
ಒಟ್ನಲ್ಲಿ, ಕೊರೊನಾ ಅನ್ನೋ ವೈರಿ ಜನರ ಬದುಕಿನ ಶೈಲಿಯನ್ನೇ ಬದಲಾಯಿಸಿದೆ. ಪ್ರಕೃತಿಯಲ್ಲಿ ಹಲವು ಬದಲಾವಣೆ ತಂದು ಕೆಲವರಿಗೆ ಬದುಕಿನ ಪಾಠ ಕಲಿಸಿದೆ. ಲಾಕ್ಡೌನ್ನಿಂದಾಗಿ ಅದೆಷ್ಟೋ ಬಡ ಜೀವಗಳು, ಕೂಲಿ ಕಾರ್ಮಿಕರು, ನಿರ್ಗತಿಕರು ತುತ್ತಿನ ಚೀಲ ತುಂಬಿಸಿಕೊಳ್ಳೋಕೆ ಕಷ್ಟ ಪಡ್ತಿದ್ದಾರೆ. ಜನರ ವೃತಿ ಜೀವನಕ್ಕೆ ದೊಡ್ಡ ಕುತ್ತು ತಂದಿರೋ ಕೊರೊನಾ ಮತ್ತೊಂದು ಕೆಲಸದತ್ತ ದೂಡ್ತಿರೋದು ನಿಜಕ್ಕೂ ದುರಂತ.