ಸಾರಿಗೆ ಇಲಾಖೆ ಎಡವಟ್ಟಿಗೆ ರಾತ್ರಿಯಿಡೀ ಮೆಜೆಸ್ಟಿಕ್ನಲ್ಲೇ ಕಾರ್ಮಿಕರ ಪರದಾಟ
ಬೆಂಗಳೂರು: ತುತ್ತಿನ ಚೀಲ ತುಂಬಿಸಿಕೊಳ್ಳೋಕೆ ಬೆಂಗ್ಳೂರಿಗೆ ಬಂದಿರೋ ಕಾರ್ಮಿಕರ ಬವಣೆ ಒಂದೆರಡಲ್ಲ. ಇಷ್ಟು ದಿನ ಊಟ ಇಲ್ದೆ ಪರದಾಡಿದ್ರೆ, ಇದೀಗ ಊರುಗಳಿಗೆ ಹೋಗಲು ಬಸ್ಗಳಿಲ್ಲದೆ ಪರದಾಡೋ ಸ್ಥಿತಿ ಬಂದೊದಗಿದೆ. ಸರ್ಕಾರದ ಹೊಣೆಗೇಡಿತನದ ನಿರ್ಧಾರದಿಂದ ರಾತ್ರಿಯಿಡಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪಡಬಾರದ ಕಷ್ಟಪಟ್ಟಿದ್ದಾರೆ. ಪುಟ್ಟ ಪುಟ್ಟ ಮಕ್ಕಳು.. ಮಹಿಳೆಯರು.. ಗರ್ಭಿಣಿಯರು.. ವೃದ್ಧರು.. ಹೀಗೆ ಎಲ್ಲರಿಗೂ ಬಸ್ ಸ್ಟ್ಯಾಂಡೇ ಗತಿ. ಇಲ್ಲಿರೋ ಕುರ್ಚಿಗಳೇ ಹಾಸಿಗೆ. ಊರಿಗೊಗೋಕೆ ಬಸ್ ಇಲ್ಲ. ಮಕ್ಳುಮರಿಯನ್ನ ಕಟ್ಕೊಂಡು ಪರದಾಡೋಕಾಗ್ತಿಲ್ಲ. ಇದು ಒಬ್ಬರು ಇಬ್ಬರ ಕಷ್ಟ ಅಲ್ಲ. […]
ಬೆಂಗಳೂರು: ತುತ್ತಿನ ಚೀಲ ತುಂಬಿಸಿಕೊಳ್ಳೋಕೆ ಬೆಂಗ್ಳೂರಿಗೆ ಬಂದಿರೋ ಕಾರ್ಮಿಕರ ಬವಣೆ ಒಂದೆರಡಲ್ಲ. ಇಷ್ಟು ದಿನ ಊಟ ಇಲ್ದೆ ಪರದಾಡಿದ್ರೆ, ಇದೀಗ ಊರುಗಳಿಗೆ ಹೋಗಲು ಬಸ್ಗಳಿಲ್ಲದೆ ಪರದಾಡೋ ಸ್ಥಿತಿ ಬಂದೊದಗಿದೆ. ಸರ್ಕಾರದ ಹೊಣೆಗೇಡಿತನದ ನಿರ್ಧಾರದಿಂದ ರಾತ್ರಿಯಿಡಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪಡಬಾರದ ಕಷ್ಟಪಟ್ಟಿದ್ದಾರೆ.
ಪುಟ್ಟ ಪುಟ್ಟ ಮಕ್ಕಳು.. ಮಹಿಳೆಯರು.. ಗರ್ಭಿಣಿಯರು.. ವೃದ್ಧರು.. ಹೀಗೆ ಎಲ್ಲರಿಗೂ ಬಸ್ ಸ್ಟ್ಯಾಂಡೇ ಗತಿ. ಇಲ್ಲಿರೋ ಕುರ್ಚಿಗಳೇ ಹಾಸಿಗೆ. ಊರಿಗೊಗೋಕೆ ಬಸ್ ಇಲ್ಲ. ಮಕ್ಳುಮರಿಯನ್ನ ಕಟ್ಕೊಂಡು ಪರದಾಡೋಕಾಗ್ತಿಲ್ಲ. ಇದು ಒಬ್ಬರು ಇಬ್ಬರ ಕಷ್ಟ ಅಲ್ಲ. ಸರ್ಕಾರ ಮಾಡಿರೋ ಎಡವಟ್ಟಿಗೆ ಸಾವಿರಾರು ಮಂದಿ ಅನುಭವಿಸ್ತಿರೋ ಸಂಕಷ್ಟ. ನಡುರಾತ್ರಿಯಲ್ಲಿ ನಡುಬೀದಿಯಲ್ಲಿ ಪಡ್ತಿರೋ ನರಕಯಾತನೆ.
ಮೆಜೆಸ್ಟಿಕ್ನಲ್ಲಿ ರಾತ್ರಿಯಿಡೀ ವಲಸೆ ಕಾರ್ಮಿಕರ ಪರದಾಟ! ಕಷ್ಟ ಅಂದ್ರೆ ಕೇಳೋರಿಲ್ಲ. ಸಹಾಯಹಸ್ತ ಚಾಚೋರಿಲ್ಲ. ಬಸ್ ಸ್ಟ್ಯಾಂಡ್ನಲ್ಲಿ ಕಾಲಕಳಿಯೋದು ಬಿಟ್ರೆ ಬೇರೆ ವಿಧಿಯೇ ಇಲ್ಲ. ಏನಾದ್ರೂ ಸರಿ ಊರು ಸೇರಲೇಬೇಕು ಅಂತಾ ನಡುರಾತ್ರಿಯಲ್ಲೂ ಮೆಜೆಸ್ಟಿಕ್ನತ್ತ ವಲಸೆ ಕಾರ್ಮಿಕರು ಬರ್ತಿದ್ರು. ಆದ್ರೆ ಬೆಳಗ್ಗೆ 10 ಗಂಟೆಯವರೆಗೂ ಬಸ್ಗಳ ಓಡಾಟ ಇಲ್ಲದಿರೋದ್ರಿಂದ ಎಲ್ರೂ ಬಸ್ಸ್ಟ್ಯಾಂಡ್ನಲ್ಲೇ ಮಲಗಿದ್ರು. ಯಾವುದೋ ಸಂಘ ಸಂಸ್ಥೆಗಳು ಕೊಟ್ಟ ಊಟ ತಿಂದ್ರು. ಈ ವೇಳೆ ಕಾರ್ಮಿಕರು ಪಡ್ತಿರೋ ಕಷ್ಟ ಅಯ್ಯೋ ಪಾಪ ಅನ್ನಿಸುವಂತಿದೆ.
ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗರ್ಭಿಣಿಗೆ ಸಂಕಷ್ಟ! ಇನ್ನು ಬನ್ನೇರುಘಟ್ಟ ರಸ್ತೆಯಿಂದ ಮೂರ್ತಿ ಎಂಬಾತ ಗರ್ಭಿಣಿ ಪತ್ನಿ ಜೊತೆ ಮೆಜೆಸ್ಟಿಕ್ಗೆ ಬಂದಿದ್ದ. ಆದ್ರೆ ರಾಯಚೂರಿಗೆ ಹೋಗೋಕೆ 30 ಮಂದಿ ಕಾರ್ಮಿಕರು ಇಲ್ಲ ಅಂತಾ ಕೆಎಸ್ಆರ್‌ಟಿಸಿ ಸಿಬ್ಬಂದಿ ಬಸ್ ಬಿಟ್ಟಿಲ್ಲ. ಇದ್ರಿಂದ ಮನೆಗೆ ವಾಪಸ್ ಹೋಗೋಕಾಗ್ದೆ, ಮೆಜೆಸ್ಟಿಕ್ನಲ್ಲಿ ಇರೋಕಾಗ್ದೆ ಗರ್ಭಿಣಿ ಪರದಾಡಿದ್ರು.
ಆಸ್ಪತ್ರೆಗೆ ಬಂದು ಲಾಕ್ ಆದ ಕ್ಯಾನ್ಸರ್ ರೋಗಿ! ಅತ್ತ ಗರ್ಭಿಣಿಯದ್ದು ಒಂದು ಕಥೆಯಾದ್ರೆ, ಇತ್ತ ಕ್ಯಾನ್ಸರ್ ರೋಗಿಯದ್ದು ಮತ್ತೊಂದು ವ್ಯಥೆ. ರಾಯಚೂರಿನ ಸಣ್ಣ ಫಕೀರಪ್ಪ ಎಂಬಾತ ಕೀಮೋಥೆರಪಿ ಚಿಕಿತ್ಸೆಗಾಗಿ ಬಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ ಚಿಕಿತ್ಸೆ ಮುಗಿದ್ರೂ ಲಾಕ್ಡೌನ್ನಿಂದ ತಮ್ಮೂರಿಗೆ ಹೋಗೋಕೆ ಸಾಧ್ಯವಾಗಿರಲಿಲ್ಲ. ಇನ್ನೇನ್ ಬಸ್ ಬಿಟ್ರು ಅಂತಾ ಖುಷಿಯಲ್ಲಿ ಮೆಜೆಸ್ಟಿಕ್ಗೆ ಬಂದಿದ್ರು. ಆದ್ರೆ ರಾಯಚೂರಿಗೆ ಬಸ್ ಬಿಡದಿದ್ದಕ್ಕೆ ಫ್ಯಾಮಿಲಿಯ 6 ಮಂದಿಯೂ ಬಸ್ ಸ್ಟ್ಯಾಂಡಲ್ಲೇ ಇರಬೇಕಾಯ್ತು.
ಜೆ.ಪಿ ನಗರದಿಂದ ಮೆಜೆಸ್ಟಿಕ್ನತ್ತ ಕಾರ್ಮಿಕರ ಕಾಲ್ನಡಿಗೆ! ಇನ್ನು ಕಳೆದ 15 ದಿನಗಳಿಂದ ತುತ್ತು ಅನ್ನಕ್ಕೂ ಪರದಾಡಿದ್ದ ಬಳ್ಳಾರಿ, ಕಲಬುರಗಿ ಜಿಲ್ಲೆಯ ಕಾರ್ಮಿಕರೆಲ್ಲಾ ಊರಿಗೋದ್ರೆ ಸಾಕಪ್ಪಾ ಅನ್ನೋ ತವಕದಲ್ಲಿದ್ರು. ಹೀಗಾಗಿ ಗಂಟು ಮೂಟೆ ಕಟ್ಕೊಂಡು ರಾತ್ರೋರಾತ್ರಿ ಬಿಟಿಎಂ ಲೇಔಟ್ ಹಾಗೂ ಜೆ.ಪಿ ನಗರದಿಂದ ಕಾರ್ಮಿಕರು ಕಾಲ್ನಡಿಗೆಯಲ್ಲೇ ಮೆಜೆಸ್ಟಿಕ್ಗೆ ಬಂದಿದ್ದಾರೆ.
30 ಜನರನ್ನ ಕರೆತರಲು ₹3500 ಪಡೆದ ಚಾಲಕ! ಇತ್ತ ಅಂಜಿನಾಪುರದಿಂದ ಮೆಜೆಸ್ಟಿಕ್ಗೆ ಜೇವರ್ಗಿ ತಾಲೂಕಿನ 30 ಮಂದಿ ಕಾರ್ಮಿಕರು ಟ್ರಕ್ನಲ್ಲಿ ಬಂದಿದ್ದಾರೆ. ಈ ವೇಳೆ 30 ಮಂದಿ ಕಾರ್ಮಿಕರನ್ನ ಕರೆತರಲು ಟ್ರಕ್ ಡ್ರೈವರ್ ಮೂರೂವರೆ ಸಾವಿರ ಹಣ ಪೀಕಿದ್ದಾನೆ.
ಬಿಹಾರ ಮೂಲದ ಕಾರ್ಮಿಕರಿಗೆ ರೈಲು ವ್ಯವಸ್ಥೆ! ಇನ್ನು ಬಿಹಾರ ಮೂಲದ ಕಾರ್ಮಿಕರನ್ನ ತಮ್ಮ ತಮ್ಮ ಊರಿಗಳಿಗೆ ಕಳಿಸೋಕೆ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ವೈಟ್ಫೀಲ್ಡ್ ಹಾಗೂ ಇತರೆಡೆ ಕೆಲ್ಸ ಮಾಡ್ತಿದ್ದವರಿಗೆ ರೈಲು ವ್ಯವಸ್ಥೆ ಮಾಡಲಾಗಿದೆ. ಈಗಾಗ್ಲೇ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ ರೈಲು ಟಿಕೆಟ್ ನೀಡಲಾಗಿದೆ. ಬೆಳಗ್ಗೆ ಎಂಟೂವರೆಗೆ ಚಿಕ್ಕಬಾಣಾವರದ ರೈಲು ನಿಲ್ದಾಣದಿಂದ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ಬಿಹಾರಕ್ಕೆ ಹೊರಡಲಿದ್ದಾರೆ.
ಮೆಡಿಕಲ್ ಚೆಕಪ್ ಬಳಕವೇ ಪ್ರಯಾಣಕ್ಕೆ ಅನುಮತಿ! ಊರಿಗಳಿಗೆ ತೆರಳೋ ಕಾರ್ಮಿಕರಿಗೆ ಸೋಂಕು ಇದ್ರೆ ಹೇಗೆ ಅನ್ನೋದೇ ಹಲವರ ಚಿಂತೆಯಾಗಿದೆ. ಹೀಗಾಗಿ ಪ್ರತಿಯೊಬ್ಬ ಕಾರ್ಮಿಕನಿಗೂ ಮೆಡಿಕಲ್ ಚೆಕಪ್ ಮಾಡಲಾಗ್ತಿದೆ. ಥರ್ಮಲ್ ಸ್ಕ್ರೀನಿಂಗ್ ಬಳಿಕವೇ ಪ್ರಯಾಣಕ್ಕೆ ಅನುಮತಿ ನೀಡಲಾಗ್ತಿದೆ.
ಇದೆಲ್ಲದರ ನಡುವೆ ಸಾವಿರಾರು ಕಾರ್ಮಿಕರು ಮೆಜೆಸ್ಟಿಕ್ಗೆ ಬರ್ತಿರೋದ್ರಿಂದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸಿಕ್ಕಾಪಟ್ಟೆ ರಶ್ ಆಗಲಿದೆ. ಇದ್ರಿಂದ ಸಾಮಾಜಿಕ ಅಂತರ ಕಾಪಾಡೋ ಸಲುವಾಗಿ KSRTC ನಿಲ್ದಾಣ ಬದಲು BMTC ನಿಲ್ದಾಣದಲ್ಲಿ ಬಸ್ ವ್ಯವಸ್ಥೆ ಮಾಡೋದಾಗಿ ಕೆಎಸ್ಆರ್‌ಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಅದೇನೆ ಇರ್ಲಿ, ಸರಿಯಾದ ಪ್ಲ್ಯಾನಿಂಗ್ ಇಲ್ಲದೆ ಸರ್ಕಾರ ಮಾಡಿರೋ ಎಡವಟ್ಟಿಗೆ ಬಡ ಕಾರ್ಮಿಕರು ಎಲ್ಲಿಲ್ಲದ ಸಂಕಷ್ಟ ಅನುಭವಿಸಿದ್ರು. ಕೊರೊನಾ ಹಾವಳಿ ನಡುವೆಯೂ ರಾತ್ರಿಯಿಡೀ ಬೀದಿಯಲ್ಲೇ ಸಮಯ ಕಳೆದಿದ್ದಾರೆ.