ಗಣಿ ಸಚಿವರ ತವರಲ್ಲೇ ತುಂಗಭದ್ರಾ ಒಡಲು ಬಗೆದ ದಂಧೆಕೋರರು
ಗದಗ: ಗಣಿ ಸಚಿವ ಸಿ.ಸಿ.ಪಾಟೀಲ್ ತವರಲ್ಲೇ ಅಕ್ರಮ ದಂಧೆಯೊಂದು ಬೆಳಕಿಗೆ ಬಂದಿದೆ. ಕಾನೂನನ್ನು ಗಾಳಿಗೆ ತೂರಿ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ತುಂಗಭದ್ರಾ ನದಿ ನೀರಿನಲ್ಲಿ ಜೆಸಿಬಿಗಳ ಘರ್ಜನೆ ಹೆಚ್ಚಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗ್ರಾಮಗಳಾದ ಹೆಸರೂರು, ಸೀರನಳ್ಳಿ, ಗಂಗಾಪುರ, ಕಕ್ಕೂರ, ಸಿಂಗಟಾಲೂರ, ಕೊರ್ಲಹಳ್ಳಿ ಬಳಿ ನದಿ ತೀರದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ. ಕಾನೂನು ಪ್ರಕಾರ ನದಿಯ ನೀರಿನಲ್ಲಿ ಮರಳು ತೆಗೆಯುವಂತಿಲ್ಲ. ಆದ್ರೆ, ನಿಯಮ ಗಾಳಿಗೆ ತೂರಿ ಮರಳು ತೆಗೆದು ಸಾಗಾಟ ಮಾಡಲಾಗುತ್ತಿದೆ. ಇದ್ರಿಂದ […]
ಗದಗ: ಗಣಿ ಸಚಿವ ಸಿ.ಸಿ.ಪಾಟೀಲ್ ತವರಲ್ಲೇ ಅಕ್ರಮ ದಂಧೆಯೊಂದು ಬೆಳಕಿಗೆ ಬಂದಿದೆ. ಕಾನೂನನ್ನು ಗಾಳಿಗೆ ತೂರಿ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ತುಂಗಭದ್ರಾ ನದಿ ನೀರಿನಲ್ಲಿ ಜೆಸಿಬಿಗಳ ಘರ್ಜನೆ ಹೆಚ್ಚಾಗಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗ್ರಾಮಗಳಾದ ಹೆಸರೂರು, ಸೀರನಳ್ಳಿ, ಗಂಗಾಪುರ, ಕಕ್ಕೂರ, ಸಿಂಗಟಾಲೂರ, ಕೊರ್ಲಹಳ್ಳಿ ಬಳಿ ನದಿ ತೀರದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ. ಕಾನೂನು ಪ್ರಕಾರ ನದಿಯ ನೀರಿನಲ್ಲಿ ಮರಳು ತೆಗೆಯುವಂತಿಲ್ಲ. ಆದ್ರೆ, ನಿಯಮ ಗಾಳಿಗೆ ತೂರಿ ಮರಳು ತೆಗೆದು ಸಾಗಾಟ ಮಾಡಲಾಗುತ್ತಿದೆ. ಇದ್ರಿಂದ ತುಂಗಭದ್ರಾ ಒಡಲು ಮಲೀನವಾಗುತ್ತಿದೆ. ಈ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ.
ಆದರೆ ಇಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎನ್ನಲಾಗುತ್ತಿದ್ದು, ನದಿ ನೀರಿನಲ್ಲಿ ಮರಳು ತೆಗೆಯಬಾರದು ಎಂಬ ನಿಯಮವಿತ್ತು. ಕಾನೂನನ್ನು ಉಲ್ಲಂಘಿಸಿ ದಂಧೆಕೋರರು ತುಂಗಭದ್ರಾ ಒಡಲನ್ನು ಬಗೆಯುತ್ತಿದ್ದಾರೆ. ಅಲ್ಲದೆ ಗಣಿ ಇಲಾಖೆ ನಿಗದಿ ಮಾಡಿದ್ದಕಿಂತ ಹೆಚ್ಚಾಗಿ ಜೆಸಿಬಿ ಹಾಗೂ ವಾಹನಗಳ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.