AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಇಂದು ಹೊಸದಾಗಿ 4 ಪ್ರಕರಣ ಪತ್ತೆ! ರಾಜ್ಯದಲ್ಲಿ ಎಷ್ಟು?

ಬೆಂಗಳೂರು: ರಾಜಧಾನಿಯಲ್ಲಿ ಇಂದು ಹೊಸದಾಗಿ 4 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕರ್ನಾಟಕದಲ್ಲಿ ಇಂದು 12 ಜನರಿಗೆ ಕೊರೊನಾ ಪಾಸಿಟಿವ್ ಬಂದಂತಾಗಿದೆ. ಒಟ್ಟಾರೆಯಾಗಿ, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇದುವರೆಗೂ 601ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾಗೆ ಇದುವರೆಗೆ 25 ಜನರು ಸಾವನ್ನು ಕಂಡಿದ್ದಾರೆ. 601 ಸೋಂಕಿತರ ಪೈಕಿ, 271 ಜನ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದಲ್ಲಿ ಇಂದು 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ವಿವರ […]

ಬೆಂಗಳೂರಿನಲ್ಲಿ ಇಂದು ಹೊಸದಾಗಿ 4 ಪ್ರಕರಣ ಪತ್ತೆ! ರಾಜ್ಯದಲ್ಲಿ ಎಷ್ಟು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 02, 2020 | 5:51 PM

Share

ಬೆಂಗಳೂರು: ರಾಜಧಾನಿಯಲ್ಲಿ ಇಂದು ಹೊಸದಾಗಿ 4 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕರ್ನಾಟಕದಲ್ಲಿ ಇಂದು 12 ಜನರಿಗೆ ಕೊರೊನಾ ಪಾಸಿಟಿವ್ ಬಂದಂತಾಗಿದೆ. ಒಟ್ಟಾರೆಯಾಗಿ, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇದುವರೆಗೂ 601ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾಗೆ ಇದುವರೆಗೆ 25 ಜನರು ಸಾವನ್ನು ಕಂಡಿದ್ದಾರೆ. 601 ಸೋಂಕಿತರ ಪೈಕಿ, 271 ಜನ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಇಂದು 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ವಿವರ ಹೀಗಿದೆ: 1) 590ನೇ ಸೋಂಕಿತ ಬೀದರ್ ಜಿಲ್ಲೆಯ 82 ವರ್ಷದ ವೃದ್ಧ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. 2) 591ನೇ ಸೋಂಕಿತ ತುಮಕೂರು ಜಿಲ್ಲೆಯ 40 ವರ್ಷದ ವ್ಯಕ್ತಿ. 535, 553ನೇ ಸೋಂಕಿತರ ಸಂಪರ್ಕದಿಂದ ಈ ವ್ಯಕ್ತಿಗೆ ಸೋಂಕು ತಗುಲಿದೆ. 3) 592ನೇ ಸೋಂಕಿತೆ ತುಮಕೂರು ಜಿಲ್ಲೆ 29 ವರ್ಷದ ಮಹಿಳೆ. 535, 553ನೇ ಸೋಂಕಿತರ ಸಂಪರ್ಕದಿಂದ ಈ ವ್ಯಕ್ತಿಗೆ ಸೋಂಕು ಬಂದಿದೆ. 4) 593ನೇ ಸೋಂಕಿತ ಚಿಕ್ಕಬಳ್ಳಾಪುರ ಜಿಲ್ಲೆಯ 54 ವರ್ಷದ ವ್ಯಕ್ತಿ. 250ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಈ ಸೋಂಕು. 5) 594ನೇ ಸೋಂಕಿತ ವಿಜಯಪುರದ 22 ವರ್ಷದ ಯುವಕ. ಮತ್ತು 6) 595ನೇ ಸೋಂಕಿತ ವಿಜಯಪುರದ 45 ವರ್ಷದ ಪುರುಷ. ಇವರಿಬ್ಬರಿಗೂ ಇಬ್ಬರಿಗೂ 221ನೇ ಸೋಂಕಿತನ ಸಂಪರ್ಕದಿಂದ ಸೋಂಕು ಬಂದಿದೆ. 7) 596ನೇ ಸೋಂಕಿತ ಬೆಳಗಾವಿ ಜಿಲ್ಲೆಯ 23 ವರ್ಷದ ಯುವಕ. 128ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಈತನಿಗೆ ಸೋಂಕು ತಗುಲಿದೆ. 8) 597ನೇ ಸೋಂಕಿತೆ ಬಾಗಲಕೋಟೆಯ 45 ವರ್ಷದ ಮಹಿಳೆ. 381ನೇ ಸೋಂಕಿತನಿಂದ ಜಮಖಂಡಿ ಈ ಮಹಿಳೆಗೆ ಸೋಂಕು. 9) 598ನೇ ಸೋಂಕಿತೆ ಬೆಂಗಳೂರಿನ 32 ವರ್ಷದ ಮಹಿಳೆ. 444ನೇ ಸೋಂಕಿತನ ಸಂಪರ್ಕದಿಂದ ಈ ಮಹಿಳೆಗೆ ಸೋಂಕು. 10) 599ನೇ ಸೋಂಕಿತೆ ಬೆಂಗಳೂರಿನ 38 ವರ್ಷದ ಮಹಿಳೆ. 11) 600ನೇ ಸೋಂಕಿತೆ ಬೆಂಗಳೂರಿನ 26 ವರ್ಷದ ಮಹಿಳೆ. 12) 601ನೇ ಸೋಂಕಿತ ಬೆಂಗಳೂರಿನ 30 ವರ್ಷದ ಪುರುಷ. ಮೇಲಿನ ಈ ಮೂವರಿಗೂ 565ನೇ ಸೋಂಕಿತರಿಂದ ಸೋಂಕು ತಗುಲಿದೆ.

Published On - 5:48 pm, Sat, 2 May 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಯುವ ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಬಂದ ಪ್ರಭುದೇವಗೆ ಭರ್ಜರಿ ಸ್ವಾಗತ
ಯುವ ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಬಂದ ಪ್ರಭುದೇವಗೆ ಭರ್ಜರಿ ಸ್ವಾಗತ
ಟಿವಿ9 ವರದಿಯ ಪರಿಣಾಮ: ತೆಕ್ಕಲಕೋಟೆ ಆಸ್ಪತ್ರೆ ವಾರ್ಡ್‌ಗೆ ಹೊಸ UPS ಅಳವಡಿಕೆ
ಟಿವಿ9 ವರದಿಯ ಪರಿಣಾಮ: ತೆಕ್ಕಲಕೋಟೆ ಆಸ್ಪತ್ರೆ ವಾರ್ಡ್‌ಗೆ ಹೊಸ UPS ಅಳವಡಿಕೆ
ಪೊಲೀಸರ ಜೀಪನ್ನೇ ಅಲುಗಾಡಿಸಿ ವಿದ್ಯಾರ್ಥಿನಿಯರ ಆಕ್ರೋಶ
ಪೊಲೀಸರ ಜೀಪನ್ನೇ ಅಲುಗಾಡಿಸಿ ವಿದ್ಯಾರ್ಥಿನಿಯರ ಆಕ್ರೋಶ
ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ರದ್ದಾಗಲು ಪ್ರಭಾವಿ ವ್ಯಕ್ತಿ ಕರೆಯೇ ಕಾರಣ
ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ರದ್ದಾಗಲು ಪ್ರಭಾವಿ ವ್ಯಕ್ತಿ ಕರೆಯೇ ಕಾರಣ
ಇಂಡಿ ಮೈತ್ರಿಕೂಟದಿಂದ ಸುಪ್ರೀಂ ಚಲೋ ಮೆರವಣಿಗೆ
ಇಂಡಿ ಮೈತ್ರಿಕೂಟದಿಂದ ಸುಪ್ರೀಂ ಚಲೋ ಮೆರವಣಿಗೆ
ಅಜ್ಜಿಯ ಅಂತ್ಯಕ್ರಿಯೆಗೂ ಬಿಡಲಿಲ್ಲ ಎಂದ ಸಿಜೆಪಿ ನಾಯಕರಿಗೆ ವಿಡಿಯೋ ತಿರುಗೇಟು
ಅಜ್ಜಿಯ ಅಂತ್ಯಕ್ರಿಯೆಗೂ ಬಿಡಲಿಲ್ಲ ಎಂದ ಸಿಜೆಪಿ ನಾಯಕರಿಗೆ ವಿಡಿಯೋ ತಿರುಗೇಟು
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ
ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು