ಹುಬ್ಬಳ್ಳಿ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ರೂ ಉನ್ನತ ಖಾಕಿ ಅಧಿಕಾರಿಗಳ ನಡುವಣ ಒಳಜಗಳ ನಿಲ್ಲುತ್ತಿಲ್ಲ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ದಿಲೀಪ್ ಮತ್ತು ಡಿಸಿಪಿ ಕೃಷ್ಣಕಾಂತ್ ನಡುವೆ ಒಳಜಗಳ ಮುಂದುವರಿದಿದೆ.
ಮತ್ತೆ ಡಿಸಿಪಿಗೆ ನೋಟಿಸ್ ನೀಡಿದ ಕಮಿಷನರ್ ದಿಲೀಪ್!
ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋಹಾಗೆ.. ಈ ಇಬ್ಬರು ಉನ್ನತ ಐಪಿಎಸ್ ಅಧಿಕಾರಿಗಳ ಕಿತ್ತಾಟಕ್ಕೆ ಪೊಲೀಸರು ಸುಸ್ತೋ ಸುಸ್ತು ಹೊಡೆದಿದ್ದಾರೆ. ಇಷ್ಟೆಲ್ಲಾ ಒಳಜಗಳಗಳ ಮಧ್ಯೆ ಸಾರ್ವಜನಿಕರ ಗೋಳು ಕೇಳೋರು ಯಾರು? ಜೊತೆಗೆ, ಈಗಿನ ನೋಟಿಸ್ ನೋಡಿದರೆ ಅವಳಿ ನಗರದ ಖಾಕಿ ಪಡೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆಯಾ ಎಂಬ ಅನುಮಾನ ಹೋಗಿ, ನಿಜಾನಾ ಅನ್ನುವತ್ತ ಸಾಗಿದೆ.
ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುತ್ತಿದ್ದೀರಿ: ಡಿಸಿಪಿ ಕೃಷ್ಣಕಾಂತ್ ಮಾರುತ್ತರ
ಡಿಸಿಪಿ ಕೃಷ್ಣಕಾಂತ್ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ನೋಟಿಸ್‌ಗೆ ಮಾರುತ್ತರ ಪತ್ರದ ಮೂಲಕ ತಿರುಗೇಟು ನೀಡಿದ್ದಾರೆ. ನೀವು ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ ಎಂದೂ ಡಿಸಿಪಿ ಕೃಷ್ಣಕಾಂತ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Published On - 11:45 am, Fri, 9 October 20