ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ 3ನೇ ದಿನದಾಟ ನಡೆಯುತ್ತಿದ್ದು, ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 336 ರನ್ ಗಳಿಸಲಷ್ಟೇ ಶಕ್ತವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 33 ರನ್ಗಳ ಮುನ್ನಡೆ ಪಡೆದಿದೆ.
180 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್ ಅವರ ಶತಕದ ಜೊತೆಯಾಟ ಕೊಂಚ ನೆರವು ನೀಡಿತು. ಅಲ್ಲದೆ ಈ ಜೋಡಿ ವೈಯಕ್ತಿಕವಾಗಿ ಚೊಚ್ಚಲ ಅರ್ಧ ಶತಕ ಸಹ ಬಾರಿಸಿದರು.
ಡ್ರಿಂಕ್ಸ್ ವಿರಾಮಕ್ಕೂ ಮುನ್ನ 67 ರನ್ ಗಳಿಸಿದ್ದ ಶಾರ್ದೂಲ್ ಠಾಕೂರ್, ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರೆ, 62 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ವಾಷಿಂಗ್ಟನ್ ಸುಂದರ್ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. ಈ ಜೋಡಿಯ ನಂತರ ಬಂದ ಕೆಳಕ್ರಮಾಂಕದ ಆಟಗಾರರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬೇಗನೆ ವಿಕೆಟ್ ಒಪ್ಪಿಸಿದರು. ಪರಿಣಾಮವಾಗಿ ಟೀಂ ಇಂಡಿಯಾ 336 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಭಾರತದ ಪರ ರೋಹಿತ್ ಶರ್ಮ 44, ಶುಭ್ಮನ್ ಗಿಲ್ 7, ಚೇತೇಶ್ವರ್ ಪೂಜಾರ 27, ಅಜಿಂಕ್ಯಾ ರಹಾನೆ 37, ಮಾಯಾಂಕ್ ಅಗರ್ವಾಲ್ 38, ರಿಷಬ್ ಪಂತ್ 23, ವಾಷಿಂಗ್ಟನ್ ಸುಂದರ್ 62, ಶಾರ್ದೂಲ್ ಠಾಕೂರ್ 67, ನವ್ದೀಪ್ ಸೈನಿ 5, ಮಹಮದ್ ಸಿರಾಜ್ 13, ನಟರಾಜನ್ 1 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ಮಿಂಚಿದ ಜೋಶ್ ಹ್ಯಾಝಲ್ವುಡ್ 5 ವಿಕೆಟ್ ಪಡೆದರು. ಕಮಿನ್ಸ್ ಹಾಗೂ ಸ್ಟಾರ್ಕ್ ತಲಾ 2 ವಿಕೆಟ್ ಪಡೆದರೆ, ಲಿಯಾನ್ 1 ವಿಕೆಟ್ ಪಡೆದರು.
Published On - 12:48 pm, Sun, 17 January 21