ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜಯಭೇರಿ ಬಾರಿಸಿರುವ ಭಾರತ ತಂಡ ಇಂದು ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಆಡಿದ ಆಸಿಸ್ ತಂಡ ಬ್ಯಾಟ್ಸ್ಮನ್ಗಳ ಅಬ್ಬರದ ಆಟದೊಂದಿಗೆ 194/5 ರನ್ ಗಳಿಸಿತು. ಬೃಹತ್ ಮೊತ್ತದ ಬೆನ್ನತ್ತಿದ ಭಾರತ ತಂಡ ಕೊನೆಯ ಎರಡು ಎಸೆತ ಬಾಕಿ ಇರುವಾಗಲೇ ಭರ್ಜರಿ ಗೆಲುವು ಪಡೆದಿದೆ.
ಭಾರತಕ್ಕೆ ಅಷ್ಟೇನು ಉತ್ತಮ ಆರಂಭ ಸಿಗಲಿಲ್ಲವಾದರೂ ಮೂರನೇ ಓವರ್ನಲ್ಲಿ ಆಸಿಸ್ನ ಆಂಡ್ರ್ಯೂ ಟೈ ಎಸೆದ ನೋ ಬಾಲ್ ವರದಾನವಾಯಿತು. ಅಲ್ಲಿ ಸಿಕ್ಕ ಫ್ರೀ ಹಿಟ್ಗೆ ಕೆ.ಎಲ್.ರಾಹುಲ್ ಭರ್ಜರಿ ಸಿಕ್ಸ್ ಸಿಡಿಸಿದ ನಂತರ ಭಾರತದ ವೇಗ ಕೊಂಚ ಹೆಚ್ಚಿತು. ಪಂದ್ಯದಲ್ಲಿ ನಡುವಿನಲ್ಲಿ ಭರವಸೆ ಹೆಚ್ಚಿತ್ತಾದರೂ ಕೊನೆಗೆ ಒತ್ತಡದ ಸಂದರ್ಭ ಎದುರಾಗಿತ್ತು ಕೊನೆಯ ಓವರ್ನಲ್ಲಿ 14 ರನ್ ಅವಶ್ಯಕತೆ ಇದ್ದಾಗ ಶ್ರೇಯಸ್ ಅಯ್ಯರ್ ಮತ್ತು ಪಾಂಡ್ಯ ಜೊತೆಯಾಟದಲ್ಲಿದ್ದರು. ಇನ್ನೇನು ಗೆಲುವು ಕೈ ತಪ್ಪಿತು ಎನ್ನುವಾಗಲೇ ಪಾಂಡ್ಯ 2 ಸಿಕ್ಸರ್ ಸಿಡಿಸಿ ಕೊನೆಯ 2 ಎಸೆತ ಬಾಕಿ ಇರುವಾಗಲೇ ಗೆಲುವಿನ ಗುರಿ ಮುಟ್ಟಿಸಿದರು.
ಭಾರತ ತಂಡ: ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಟಿ. ನಟರಾಜನ್, ಯಜುವೇಂದ್ರ ಚಹಾಲ್.
ಆಸ್ಟ್ರೇಲಿಯಾ ತಂಡ: ಡಿ ಆರ್ಕಿ ಶಾರ್ಟ್, ಮಾರ್ಕಸ್ ಸ್ಟೊಯ್ನಿಸ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮೊಯಿಸೆಸ್ ಹೆನ್ರಿಕ್ವೆಸ್, ಮ್ಯಾಥ್ಯೂ ವೇಡ್ (ನಾಯಕ, ವಿಕೆಟ್ ಕೀಪರ್), ಡೇನಿಯಲ್ ಸ್ಯಾಮ್ಸ್, ಸೀನ್ ಅಬೊಟ್, ಮಿಚೆಲ್ ಸ್ವೆಪ್ಸನ್, ಆ್ಯಡಮ್ ಝಂಪಾ, ಆಂಡ್ರ್ಯೂ ಟೈ
Published On - 5:17 pm, Sun, 6 December 20