ಇನ್ಸ್ಟಾಗ್ರಾಂನಲ್ಲಿ ಹೊಸಹೊಸತು, ನಿಮಗೆಷ್ಟು ಗೊತ್ತು? ಬಳಸೋದು ಹೇಗೆ?
ಒಂದು ವಾರದ ಹಿಂದೆಯಷ್ಟೆ, ವಿಡಿಯೋ ಕರೆಯ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಇನ್ನಿತರ ವಿಡಿಯೋಗಳನ್ನು ಹಂಚಿಕೊಳ್ಳುವ ಫೀಚರ್ ನೀಡಿತ್ತು. ಈಚೆಗೆ ಇನ್ಸ್ಟಾಗ್ರಾಂ ಪರಿಚಯಿಸಿದ ಐದು ಹೊಸ ಆಪ್ಷನ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರಮುಖ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಕಾಲಕ್ಕೆ ತಕ್ಕಂತೆ ಹೊಸಹೊಸ ಆಪ್ಷನ್ಗಳನ್ನು ಪರಿಚಯಿಸುತ್ತಿದೆ. ಈ ಮೂಲಕ ಇನ್ನಷ್ಟು ಬಳಕೆದಾರರನ್ನು ಸೆಲೆಯುವ ಹುಕಿಯಲ್ಲಿ ಮುಂದುವರೆಯುತ್ತಿರುವ ಇನ್ಸ್ಟಾಗ್ರಾಂ, ಈಚೆಗೆ ಪರಿಚಯಿಸಿದ ಐದು ಹೊಸ ಆಪ್ಷನ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ನಿರ್ದಿಷ್ಟ ಸಂದೇಶಕ್ಕೆ ಉತ್ತರಿಸಿ ಒಂದು ವಾರದ ಹಿಂದಷ್ಟೆ, ನಿರ್ದಿಷ್ಟ ಸಂದೇಶಕ್ಕೆ ಪ್ರತಿಕ್ರಿಯಿಸುವ ನೀಡುವ ಹೊಸ ಆಯ್ಕೆಯನ್ನು ಇನ್ಸ್ಟಾಗ್ರಾಂ ನೀಡಿದೆ. ವಾಟ್ಸಾಪ್ನಲ್ಲಿ ಈ ಆಯ್ಕೆ ಈಗಾಗಲೇ ಇದೆ. ನಿರ್ದಿಷ್ಟ ಸಂದೇಶವೊಂದನ್ನು ಆಯ್ಕೆ ಮಾಡಿದಾಗ ಯಾರಿಗೆ ಫಾರ್ವರ್ಡ್ ಮಾಡಬೇಕು ಎಂಬುದನ್ನು ನಿರ್ಧರಿಸುವ ಅವಕಾಶವೂ ಈಗ ಲಭ್ಯವಿದೆ.
ಖಾತೆಯನ್ನು ಬದಲಿಸೋದು ಸುಲಭ ಬಳಕೆದಾರರು ಇನ್ಸ್ಟಾಗ್ರಾಂನಲ್ಲಿ ಎರಡು ಖಾತೆಗಳನ್ನು ಹೊಂದಿದ್ದು, ಎರಡೂ ಖಾತೆಗಳಿಂದ ಲಾಗ್ಇನ್ ಆಗಿದ್ದಲ್ಲಿ ಟ್ಯಾಪ್ ಮಾಡುವ ಮೂಲಕ ಸುಲಭವಾಗಿ ಖಾತೆಯನ್ನು ಬದಲಾಯಿಸಬಹುದು. ಎರಡು ಖಾತೆಗಳಲ್ಲಿ ನೀವು ಆಯ್ಕೆ ಮಾಡುವ ಖಾತೆಯನ್ನು ದೀರ್ಘವಾಗಿ ಒತ್ತಿದರೆ ಅದನ್ನೇ ಬಳಸಲು ಅವಕಾಶ ಪಡೆದುಕೊಳ್ಳುಬಹುದು.
ಕಣ್ಮರೆಯಾಗುವ ಫೋಟೊ / ವಿಡಿಯೋ ನಿರ್ದಿಷ್ಟ ಸಮಯದ ನಂತರ ಕಣ್ಮರೆಯಾಗುವಂತೆ ಫೋಟೊ ಅಥವಾ ವಿಡಿಯೋಗಳನ್ನು ಗುಂಪಿನಲ್ಲಿ ಅಥವಾ ವೈಯಕ್ತಿಕವಾಗಿ ನಿರ್ದಿಷ್ಟ ವ್ಯಕ್ತಿಗೆ ಕಳುಹಿಸುವ ಆಯ್ಕೆಯನ್ನು ಇನ್ಸ್ಟಾಗ್ರಾಂ ನೀಡುತ್ತಿದೆ. ಇನ್ಬಾಕ್ಸ್ನಲ್ಲಿ ಕ್ಯಾಮೆರಾ ಐಕಾನ್ ಒತ್ತಿದಾಗ, ಕ್ಯಾಮೆರಾ ಮತ್ತು ಫೋಟೋ ಗ್ಯಾಲರಿ ಆಯ್ಕೆ ಪಡೆಯಬಹುದು. ಕಳಿಸಿದ ಫೋಟೋ ಅಥವಾ ವಿಡಿಯೋ ನಿರ್ದಿಷ್ಟ ಸಮಯದ ನಂತರ ಕಣ್ಮರೆಯಾಗಲಿದೆ.
ಸಂದೇಶ ಅಥವಾ ಪೋಸ್ಟ್ ಮ್ಯೂಟ್ ಇತರರು ಪೋಸ್ಟ್ ಮಾಡುವ ಅಥವಾ ಕಳುಹಿಸುವ ಸಂದೇಶಗಳು ನಿಮಗೆ ಇಷ್ಟವಾಗದಿದ್ದಲ್ಲಿ ಮ್ಯೂಟ್ ಮಾಡುವ ಆಯ್ಕೆಯನ್ನು ಇನ್ಸ್ಟಾಗ್ರಾಂ ನೀಡಿದೆ. ಇತರ ಖಾತೆದಾರರ ಪ್ರೊಫೈಲ್ ಚಿತ್ರದ ಮೇಲೆ ದೀರ್ಘವಾಗಿ ಒತ್ತುವ ಮೂಲಕ ಅವರ ಖಾತೆಯ ಪೇಜ್ ತೆರೆಯಬಹುದು. ಈ ಮೂಲಕ ಮ್ಯೂಟ್ ಆಯ್ಕೆ ಬಳಸಬಹುದು. ಪೇಜಿನ ಕೊನೆಯಲ್ಲಿ ಮ್ಯೂಟ್ ಆಯ್ಕೆ ಸಿಗುತ್ತದೆ. ಮ್ಯೂಟ್ ಮಾಡಿದ ವ್ಯಕ್ತಿಗೆ ಯಾವುದೇ ಮಾಹಿತಿ ಸಿಗುವುದಿಲ್ಲ.
ಎಮೋಜಿಗಳು ಫೇಸ್ಬುಕ್, ವಾಟ್ಸಾಪ್ಗಳು ಈಗಾಗಲೇ ಎಮೋಜಿ ಆಯ್ಕೆಗಳನ್ನು ನೀಡಿದೆ. ಅಂತೆಯೇ ಇನ್ಸ್ಟಾಗ್ರಾಂ ಕೂಡಾ ಈ ಆಯ್ಕೆಯನ್ನು ಬಳಕೆದಾರರಿಗೆ ನೀಡುತ್ತಿದೆ. ಪೋಸ್ಟರ್ಗಳಲ್ಲಿ ಎಮೋಜಿಗಳನ್ನು ಬಳಸುವ ಮೂಲಕ ಪ್ರತಿಕ್ರಿಯೆ ನೀಡಬಹುದು. ಸ್ನೇಹಿತರು ಕಳುಹಿಸುವ ಪೋಸ್ಟ್ಗಳನ್ನು ದೀರ್ಘಕಾಲದವರೆಗೆ ಒತ್ತುವ ಮೂಲಕ ಎಮೋಜಿ ಆಯ್ಕೆಗಳು ಕಾಣಿಸುತ್ತವೆ. ಇದನ್ನು ಆಯ್ಕೆ ಮಾಡಬಹುದು. ಕೆಂಪು ಹೃದಯದ ಐಕಾನ್ ಬಳಸಲು ಪೋಸ್ಟ್ನ್ನು ಡಬಲ್ ಟ್ಯಾಪ್ ಮಾಡಬಹುದು.