IND vs ENG 1st ODI Live: ಭಾರತಕ್ಕೆ 66 ರನ್​ಗಳ ಸುಲಭ ಜಯ

| Updated By: ganapathi bhat

Updated on: Mar 23, 2021 | 9:50 PM

India vs England Score LIVE Updates: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 66 ರನ್​ಗಳ ವಿಜಯ ದಾಖಲಿಸಿದೆ. ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಗೆಲುವು ದಾಖಲಿಸಿದ್ದ ಭಾರತ ಈ ಮೂಲಕ ಏಕದಿನ ಸರಣಿಯನ್ನೂ ಗೆಲ್ಲುವ ಭರವಸೆ ನೀಡಿದೆ.

IND vs ENG 1st ODI Live: ಭಾರತಕ್ಕೆ 66 ರನ್​ಗಳ ಸುಲಭ ಜಯ
ಭಾರತಕ್ಕೆ ಗೆಲುವು

LIVE Cricket Score & Updates

  • 23 Mar 2021 09:35 PM (IST)

    ಭಾರತಕ್ಕೆ 66 ರನ್ ಜಯ

    ಭಾರತದ ಗೆಲುವಿನ ಓಟ ಒಂದು ದಿನದ ಪಂದ್ಯಗಳಲ್ಲೂ ಮುಂದುವರಿದಿದೆ, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸುಲಭವಾಗಿ  66 ರನ್​ಗಳಿಂದ ಸೋಲಿಸಿದೆ. ನಾಲ್ಕನೇ ಸ್ಪೆಲ್​ಗೆ ವಾಪಸ್ಸು ಬಂದ ಪ್ರಸಿಧ್ ಕ್ರಿಷ್ಣ ಟಾಮ್ ಕರನ್ ಅವರನ್ನು ಔಟ್​ ಮಾಡಿ ತಮ್ಮ 4ನೇ ವಿಕೆಟ್​ ಪಡೆದರು, ಅವರ ಬೌಲಿಂಗ್ ಅನಾಲಿಸಿಸ್ 8.1 -1-54-4

    ಅಂತಿಮ ಸ್ಕೋರ್:

    ಭಾರತ: 317/5 (50 ಓವರ್​ಗಳಲ್ಲಿ)

    ಇಂಗ್ಲೆಂಡ್​: 251/10 (42.1 ಓವರ್​ಗಳಲ್ಲಿ)

  • 23 Mar 2021 09:22 PM (IST)

    ಟಾಮ್ ಕರನ್​ಗೆ 4

    ಕುಲ್ದೀಪ್ ಯಾದವ್ ಅವರ ಎಸೆತವೊಂದನ್ನು ಟಾಮ್ ಕರನ್ ಬೌಂಡರಿಗಟ್ಟಿದ್ದಾರೆ, ಇಂಗ್ಲೆಂಡ್ 248/9

  • 23 Mar 2021 09:17 PM (IST)

    ರಾಶಿದ್ ಸಹ ಔಟ್​!

    ಇಂಗ್ಲೆಂಡ್ ತನ್ನ 9 ನೇ ವಿಕೆಟ್​ ಕಳೆದುಕೊಂಡಿದೆ, ಆದಿಲ್ ರಾಶಿದ್ ವಿಕೆಟ್​ ಕೀಪರ್ ರಾಹುಲ್​ಗೆ ಕ್ಯಾಚಿತ್ತು ಔಟಾಗಿದ್ದಾರೆ, ವಿಕೆಟ್​ ಪಡೆದ ಬೌಲರ್ ಭುವನೇಶ್ವರ್ ಕುಮಾರ್

  • 23 Mar 2021 09:13 PM (IST)

    8ನೇ ವಿಕೆಟ್ ಪತನ

    ಬ್ಯಾಟಿಂಗ್​ನಲ್ಲಿ ಮಿಂಚಿದ್ದ ಕೃಣಾಲ್ ಪಾಂಡ್ಯ ವಿಕೆಟ್ ಸಹ ಪಡೆದಿದ್ದಾರೆ. ಸ್ಯಾಮ್ ಕರನ್, ಡೀಪ್​ನಲ್ಲಿದ್ದ (ಸಬ್) ಫೀಲ್ಡರ್ ಶುಭಮನ್ ಗಿಲ್​ಗೆ ಕ್ಯಾಚ್​ ನೀಡಿ ಔಟಾಗಿದ್ದಾರೆ, ಇಂಗ್ಲೆಂಡ್​ ಸ್ಕೋರ್ 240/8

  • 23 Mar 2021 09:05 PM (IST)

    ಮೊಯೀನ್​ ಔಟ್​

    ಭುವನೇಶ್ವರ್ ಕುಮಾರ್ ತಮ್ಮ ಎರಡನೇ ಸ್ಪೆಲ್​ನ ಎರಡನೇ ಓವರ್​ನಲ್ಲಿ ಮೊಯೀನ್ ಅವರನ್ನು ಔಟ್​ ಮಾಡಿದ್ದಾರೆ, ಇಂಗ್ಲೆಂಡ್ 237/7

  • 23 Mar 2021 09:04 PM (IST)

    ಮೊಯೀನ್​ಗೆ 4

    ಕೃಣಾಲ್ ಪಾಂಡ್ಯ ಎಸೆತವನ್ನು ನೇರವಾಗಿ ಬಾರಿಸಿ ಮೊಯೀನ್ ಅಲಿ ಬೌಂಡರಿ ಗಿಟ್ಟಿಸಿದ್ದಾರೆ,ಇಂಗ್ಲೆಂಡ್ ಸ್ಕೋರ್ 237/6

  • 23 Mar 2021 09:01 PM (IST)

    ಕರನ್​ಗೆ ಬೌಂಡರಿ

    ಭುವನೇಶ್ವರ್ ಎಸೆತವೊಂದನ್ನು ಸ್ಯಾಮ್ ಕರನ್ ಮಿಡ್​ವಿಕೆಟ್​ ಬೌಂಡರಿ ಕಡೆ ಪುಲ್ ಮಾಡಿ 4 ರನ್ ಗಳಿಸಿದ್ದಾರೆ, ಇಂಗ್ಲೆಂಡ್ ಮೊತ್ತ 231/6

  • 23 Mar 2021 08:45 PM (IST)

    ಕ್ರಿಷ್ಣನಿಗೆ ಮತ್ತೊಂದು

    ಪ್ರಸಿಧ್ ಕ್ರಿಷ್ಣ ತಮ್ಮ ಮೂರನೇ ಸ್ಪೆಲ್​​ನಲ್ಲಿ ಮತ್ತೊಂದು ವಿಕೆಟ್ ಪಡೆದಿದ್ದಾರೆ, ಸ್ಯಾಮ್ ಬಿಲ್ಲಿಂಗ್ಸ್  ಭಾರತದ ನಾಯಕ ಕೊಹ್ಲಿಗೆ  ಕ್ಯಾಚ್​ ನೀಡಿ ಔಟಾಗಿದ್ದಾರೆ, ಇಂಗ್ಲೆಂಡ್​ 218/6

  • 23 Mar 2021 08:35 PM (IST)

    ಅಲಿಗೆ 4

    ಮೊಯೀನ್ ಅಲಿ, ಕುಲ್ದೀಪ್ ಯಾದವ್ ಅವರ ಎಸೆತವನ್ನು ಬೌಂಡರಿಗಟ್ಟಿದ್ದಾರೆ, ಅವರ ಸ್ಕೋರ್ 12, ಇಂಗ್ಲೆಂಡ್ 206/4

    ಇದೇ ಓವರ್​ನಲ್ಲಿ ಮೊಯೀನ್ ಮತ್ತೊಂದು ಬೌಂಡರಿ ಬಾರಿಸಿದ್ದಾರೆ

  • 23 Mar 2021 08:32 PM (IST)

    ಬಿಲ್ಲಿಂಗ್ಸ್​ಗೆ 4

    ಕುಲ್ದೀಪ್ ಯಾದವ್ ಅವರ ಎಸೆತವನ್ನು ಸ್ಯಾಮ್ ಬಿಲ್ಲಿಂಗ್ಸ್ ಬೌಂಡರಿಗಟ್ಟಿ 4 ರನ್ ಗಳಿಸಿದ್ದಾರೆ, ಇಂಗ್ಲೆಂಡ್​ 30 ಓವರ್​ಗಳಲ್ಲಿ 199/5

  • 23 Mar 2021 08:14 PM (IST)

    ಶಾರ್ದುಲ್​ಗೆ ಮತ್ತೊಂದು!

    ಇದೇ ಓವರ್​ನಲ್ಲಿ ಶಾರ್ದುಲ್ ಅಪಾಯಕಾರಿ ಬ್ಯಾಟ್ಸ್​ಮನ್ ಜೊಸ್ ಬಟ್ಲರ್ ಅವರನ್ನು ಎಲ್ ಬಿ ಬಲೆಗೆ ಕೆಡವಿದ್ದಾರೆ, ಇಂಗ್ಲೆಂಡ್​ ಸ್ಕೋರ್ 176/5,  ಶಾರ್ದುಲ್ ಬೌಲಿಂಗ್ ಅನಾಲಿಸಿಸ್ 5-0-33-3

  • 23 Mar 2021 08:08 PM (IST)

    ಮೊರ್ಗನ್ ಔಟ್!

    ನಾಯಕ ಅಯಾನ್ ಮೊರ್ಗನ್ ರೂಪದಲ್ಲಿ ಇಂಗ್ಲೆಂಡ್​ 4ನೇ ವಿಕೆಟ್​ ಕಳೆದುಕೊಂಡಿದೆ, ಮೊರ್ಗನ್ 22 ರನ್ ಗಳಿಸಿದರು, ಸ್ಕೋರ್ 175/4, ವಿಕೆಟ್ ಪಡೆದಿರೋದು ಶಾರ್ದುಲ್

  • 23 Mar 2021 08:06 PM (IST)

    ಬಟ್ಲರ್ ಆಗಮನ

    ಬೇರ್​ಸ್ಟೋ ಸ್ಥಾನದಲ್ಲಿ ಜೊಸ್ ಬಟ್ಲರ್ ಆಡಲು ಬಂದಿದ್ದಾರೆ,ಇಂಗ್ಲೆಂಡ್​ ಸ್ಕೋರ್ 24ನೇ ಓವರಿನಲ್ಲಿ 174/3, ಮೊರ್ಗನ್ 22

  • 23 Mar 2021 08:00 PM (IST)

    ಬೇರ್​ಸ್ಟೋ ಸಹ ಶತಕ ದಾಖಲಿಸಲಿಲ್ಲ!

    ಜಾನಿ ಬೇರ್​ಸ್ಟೋ ಸಹ ಭಾರತದ ಶಿಖರ್ ಧವನ್ ಅವರಂತೆ ಶತಕ ದಾಖಲಿಸಲು ವಿಫಲರಾಗಿದ್ದಾರೆ, ಅವರು 66 ಎಸೆತಗಳಲ್ಲಿ 94 ರನ್ ಬಾರಿಸಿ ಶಾರ್ದುಲ್​ಗೆ ವಿಕೆಟ್​ ಒಪ್ಪಿಸಿದ್ದಾರೆ, ಇಂಗ್ಲೆಂಡ್ 169/3

  • 23 Mar 2021 07:50 PM (IST)

    ಬೇರ್​ಸ್ಟೋಗೆ ಬೌಂಡರಿ

    ಜಾನಿ ಬೇರ್​ಸ್ಟೋ ಮತ್ತೊಂದು 4 ಬಾರಿಸಿ ತಮ್ಮ ಸ್ಕೋರನ್ನು 91 ಕ್ಕೆ ಒಯ್ದಿದ್ದಾರೆ, ಇಂಗ್ಲೆಂಡ್​ ಸ್ಕೋರ್ 158/2

  • 23 Mar 2021 07:48 PM (IST)

    ಮೊರ್ಗನ್​ಗೆ 6

    ಇಂಗ್ಲೆಂಡ್ ಟೀಮಿನ ನಾಯಕ ಅಯಾನ್ ಮೊರ್ಗನ್ ಕುಲ್ದೀಪ್ ಅವರ ಎಸೆತವೊಂದನ್ನು ಸ್ವೀಪ್ ಮಾಡಿ ಸಿಕ್ಸರ್​ಗೆ ಎತ್ತಿದ್ದಾರೆ, ಸ್ಕೋರ್ 150/2

  • 23 Mar 2021 07:46 PM (IST)

    19 ಓವರ್​ಗಳಲ್ಲಿ 145/2

    ಇಂಗ್ಲೆಂಡ್​ 19 ಓವರ್​​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 145 ರನ್ ಗಳಿಸಿದೆ, ಬೇರ್​ಸ್ಟೋ 86 ರನ್ ಗಳಿಸಿ ಆಡುತ್ತಿದ್ದಾರೆ

  • 23 Mar 2021 07:41 PM (IST)

    ಬೇರ್​ಸ್ಟೋ ಬಿರುಗಾಳಿ ವೇಗದ ಬ್ಯಾಟಿಂಗ್

    ಆರಂಭ ಆಟಗಾರ ಜಾನಿ ಬೇರ್​ಸ್ಟೋ ಮಿಂಚಿನ ವೇಗದಲ್ಲಿ ರನ್ ಗಳಿಸುತ್ತಿದ್ದಾರೆ, ಅವರ 83 ರನ್​ಗಳು ಕೇವಲ 55 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್​ನೊಂದಿಗೆ ಬಂದಿವೆ

  • 23 Mar 2021 07:37 PM (IST)

    ಕ್ರಿಷ್ಣನಿಗೆ ಮತ್ತೊಂದು ವಿಕೆಟ್​

    ಪ್ರಸಿಧ್​ ಕ್ರಿಷ್ಣ ಮತ್ತೊಂದು ವಿಕೆಟ್​ ಪಡೆದಿದ್ದಾರೆ, ಸ್ಟೋಕ್ಸ್ ನೀಡಿದ ಕ್ಯಾಚನ್ನು ಸಬ್ ಫೀಲ್ಡರ್ ಶುಭ್ಮನ್ ಗಿಲ್ ಹಿಡಿದಿದ್ದಾರೆ, ಇಂಗ್ಲಂಡ್ ಸ್ಕೋರ್ 138/2 (18 ನೇ ಓವರ್)

  • 23 Mar 2021 07:04 PM (IST)

    ಬೇರ್​ಸ್ಟೋ ಬ್ಯಾಟ್​ನಿಂದ 4

    ಶಾರ್ದುಲ್ ಅವರ ಎಸೆತವೊಂದನ್ನು ಬೇರ್​ಸ್ಟೋ ಬೌಂಡರಿಗಟ್ಟಿದ್ದಾರೆ, ಇಂಗ್ಲೆಂಡ್​ ಸ್ಕೋರ್ 93/0 (11 ನೇ ಓವರ್)

  • 23 Mar 2021 07:00 PM (IST)

    ಬೇರ್​ಸ್ಟೋ ಬ್ಯಾಟ್​ನಿಂದ 6

    ಶಾರ್ದುಕ್ ಠಾಕೂರ್ ಅವರ  ಎಸೆತವೊಂದರಲ್ಲಿ ಜಾನಿ ಬೇರ್​ಸ್ಟೋ ಸಿಕ್ಸ್ ಬಾರಿಸಿದ್ದಾರೆ. ಇಂಗ್ಲೆಂಡ್ ಸ್ಕೋರ್ 85/0

  • 23 Mar 2021 06:58 PM (IST)

    ಮತ್ತೊಂದು 4 ಹಾಗೂ 6

    ಕೃಣಾಲ್ ಪಾಂಡ್ಯ ಓವರ್​ನಲ್ಲಿ ರಾಯ್ ಮತ್ತೊಂದು ಸಿಕ್ಸ್ ಹಾಗೂ ಬೌಂಡರಿ ಬಾರಿಸಿದ್ದಾರೆ, ಇಂಗ್ಲೆಂಡ್ 77/0

  • 23 Mar 2021 06:56 PM (IST)

    ಕೃಣಾಲ್ ದಾಳಿಗೆ

    ಮೊದಲ ಪಂದ್ಯ ಆಡುತ್ತಿರುವ ಕೃಣಾಲ್ ಪಾಂಡ್ಯ ದಾಳಿಗಳಿದಿದ್ದಾರೆ, ಅವರ ಒಂದು ಎಸೆತವನ್ನು ಜೇಸನ್ ರಾಯ್ ಬೌಂಡರಿಗಟ್ಟಿದ್ದಾರೆ, ಇಂಗ್ಲೆಂಡ್ ಸ್ಕೋರ್ 71/0

  • 23 Mar 2021 06:45 PM (IST)

    ಇಂಗ್ಲೆಂಡ್ 50

    ಪ್ರವಾಸಿ ತಂಡದ ಮೊದಲ 50 ರನ್ 6ನೇ ಓವರ್​ನಲ್ಲಿ ಬಂದಿವೆ, 7ನೇ ಓವರ್ ಭುವಿ ಬೌಲ್ ಮಾಡುತ್ತಿದ್ದಾರೆ

  • 23 Mar 2021 06:43 PM (IST)

    ಮತ್ತೊಂದು ಸಿಕ್ಸ್

    ಜಾನಿ ಬೇರ್​ಸ್ಟೋ, ಕ್ರಿಷ್ಣ ಅವರ ಈ ಓವರಿನಲ್ಲಿ ಮತ್ತೊಂದು ಸಿಕ್ಸ್ ಹಾಗೂ ಎರಡು ಬೌಂಡರಿ ಬಾರಿಸಿದ್ದಾರೆ. ಅವರ ಸ್ಕೋರ್ 28, ಇಂಗ್ಲೆಂಡ್ 46/0, ಈ ಓವರ್​ನಲ್ಲಿ ಕ್ರಿಷ್ಣ 22 ರನ್ ನೀಡಿದರು

  • 23 Mar 2021 06:39 PM (IST)

    ಬೇರ್​ಸ್ಟೋಗೆ 6

    ಪ್ರಸಿಧ್ ಕ್ರಿಷ್ಣ ಅವರ ಓವರ್​ಪಿಚ್​ ಎಸೆತವನ್ನು ಜಾನಿ ಬೇರ್​​ಸ್ಟೋ ನೇರವಾಗಿ ಎತ್ತಿ ಬಾರಿಸಿ 6 ರನ್ ಗಳಿಸಿದ್ದಾರೆ, ಇಂಗ್ಲೆಂಡ್ 30/0

  • 23 Mar 2021 06:32 PM (IST)

    ರಾಯ್​ಗೆ 4

    ಜೇಸನ್ ರಾಯ್ ಅವರು ಕ್ರಿಷ್ಣಅವರ ಓವರ್​ಪಿಚ್​ ಎಸೆತವನ್ನು ಸ್ಟ್ರೇಟ್ ಡ್ರೈವ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಸ್ಕೋರ್ 21/0 (4 ಓವರ್​ಗಳು)

  • 23 Mar 2021 06:29 PM (IST)

    ಭಾವುಕರಾದ ಪಾಂಡ್ಯ ಸಹೋದರರು

    ತಾನಾಡಿದ ಮೊದಲ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲೇ ಭರ್ಜರಿ ಅರ್ಧ ಶತಕ ಬಾರಿಸಿದ ಕೃಣಾಲ್ ಪಾಂಡ್ಯ ಮೈದಾನದಲ್ಲಿ ತಮ್ಮ ಸಹೋದರ ಹಾರ್ದಿಕ್ ಅವರನ್ನು ತಬ್ಬಿಕೊಂಡು ತೀವ್ರ ಭಾವುಕರಾದರು

     

  • 23 Mar 2021 06:24 PM (IST)

    ಪ್ರಸಿಧ್ ಕ್ರಿಷ್ಣ ಓವರ್​ನಲ್ಲಿ 7 ರನ್

    ಪ್ರಸಿಧ್ ಕ್ರಿಷ್ಣ ತಮ್ಮ ಅಂತರರಾಷ್ಟ್ರೀಯ ಕರೀಯರ್​ನ ಮೊದಲ ಓವರ್​ನಲ್ಲಿ 7 ರನ್ ನೀಡಿದರು, ಸ್ಕೋರ್ 9/0

  • 23 Mar 2021 06:21 PM (IST)

    ಕ್ರಿಷ್ಣನಿಗೆ ಚೆಂಡೆಸದ ಕೊಹ್ಲಿ

    ಭಾರತದ ಪರ ಎರಡನೇ ಓವರ್ ಕನ್ನಡಿಗ ಪ್ರಸಿಧ್ ಕ್ರಿಷ್ಣ ಎಸೆಯುತ್ತಿದ್ದಾರೆ, ಇಂಗ್ಲೆಂಡ್ ಸ್ಕೋರ್ 2/0

  • 23 Mar 2021 06:18 PM (IST)

    ಮೊದಲ ಓವರ್​ನಲ್ಲಿ 2 ರನ್

    ಭುವನೇಶ್ವರ್ ಕುಮಾರ ತಮ್ಮ ಮೊದಲ ಓವರ್​ನಲ್ಲಿ 2 ರನ್ ನೀಡಿದರು, ಇಂಗ್ಲೆಂಡ್​ ಸ್ಕೋರ್ 2/0

  • 23 Mar 2021 06:15 PM (IST)

    ಇಂಗ್ಲೆಂಡ್​ ಇನ್ನಿಂಗ್ಸ್ ಆರಂಭವಾಗಿದೆ

    ಇಂಗ್ಲೆಂಡ್​ ಇನ್ನಿಂಗ್ಸ್ ಆರಂಭಿಸಲು ಜೇಸನ್ ರಾಯ್ ಮತ್ತು ಜಾನಿ ಬೇರ್​ಸ್ಟೋ ಬಂದಿದ್ದಾರೆ, ಭಾರತದ ದಾಳಿಯನ್ನು ಭುವನೇಶ್ವರ್ ಕುಮಾರ್ ಶುರುಮಾಡಿದ್ದಾರೆ

  • 23 Mar 2021 05:45 PM (IST)

    ಕೊನೆ ಎಸೆತದಲ್ಲಿ ಸಹ 4

    ಇನ್ನಿಂಗ್ಸ್ ಕೊನೆಯ ಎಸೆತವನ್ನು ರಾಹುಲ್ ಫೈನ್​ಲೆಗ್ ಬೌಂಡರಿ ಕಡೆ ಸ್ವಿಂಗ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಭಾರತದ ಆಂತಿಮ ಸ್ಕೋರ್ 317/5, ರಾಹುಲ್ ಅಜೇಯ 62 (4 ಬೌಂಡರಿ, 4 ಸಿಕ್ಸ್ ), ಕೃಣಾಲ್ ಅಜೇಯ 58 (7 ಬೌಂಡರಿ, 2 ಸಿಕ್ಸ್ )

  • 23 Mar 2021 05:41 PM (IST)

    ಪಾಂಡ್ಯಗೆ ಇನ್ನೊಂದು 4

    ಮಾರ್ಕ್ ವುಡ್​ ಎಸೆಯುತ್ತಿರುವ ಕೊನೆ ಓವರನಲ್ಲಿ ಪಾಂಡ್ಯ ಮತ್ತೊಂದು 4 ಬಾರಿಸಿದ್ದಾರೆ, ಭಾರತದ ಸ್ಕೋರ್ 308/5

  • 23 Mar 2021 05:39 PM (IST)

    ಜೊತೆಯಾಟ 100!

    ರಾಹುಲ್ ಮತ್ತು ಪಾಂಡ್ಯ ನಡುವೆ 6ನೇ ವಿಕೆಟ್​ಗೆ ಕೇವಲ 52 ಎಸೆತಗಳಲ್ಲಿ 100 ರನ್​​ಗಳ ಜೊತೆಯಾಟ ಬಂದಿದೆ

  • 23 Mar 2021 05:37 PM (IST)

    ರಾಹುಲ್ ಸಿಕ್ಸ್, ಭಾರತ 300+

    ರಾಹುಲ್ ಅವರ ಭರ್ಜರಿ ಸಿಕ್ಸ್​ನೊಂದಿಗೆ ಭಾರತದ ಸ್ಕೋರ್ 304/5 ಆಗಿದೆ, ಕೊನೆಯ ಓವರ್​ ಬಾಕಿಯುಳಿದಿದೆ

  • 23 Mar 2021 05:36 PM (IST)

    ರಾಹುಲ್​ಗೂ ಅರ್ಧ ಶತಕ

    ರಾಹುಲ್ ಸಹ ತಮ್ಮ ಅರ್ಧ ಶತಕ ಕೇವಲ 39 ಎಸೆತಗಳಲ್ಲಿ (3 ಬೌಂಡರಿ 3 ಸಿಕ್ಸ್) ಗಳಿಸಿದ್ದಾರೆ, ಭಾರತದ ಸ್ಕೋರ್ 298/5

  • 23 Mar 2021 05:33 PM (IST)

    ಪಾಂಡ್ಯ 50

    ಕೃಣಾಲ್ ಪಂಡ್ಯ ತಾನಾಡಿದ ಮೊದಲ ಒಡಿಐ ಪಂದ್ಯದಲ್ಲೇ ಮಿಂಚಿನ ಅರ್ಧ ಶತಕ ಬಾರಿಸಿದ್ದಾರೆ, ಅವರ 50 ರನ್ ಕೇವಲ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸ್​ನೊಂದಿಗೆ ಬಂದಿವೆ

  • 23 Mar 2021 05:29 PM (IST)

    ಪಾಂಡ್ಯಗೆ 4 ಮತ್ತು 6

    ಕೃಣಾಲ್ ಪಾಂಡ್ಯ ಅವರು ವುಡ್​ ದಾಳಿಯಲ್ಲಿ ಒಂದು 4 ಮತ್ತೊಂದು ಸಿಕ್ಸ್ ಬಾರಿಸಿ ತಮ್ಮ ಸ್ಕೋರನ್ನು 48ಕ್ಕೆ ಒಯ್ದಿದ್ದಾರೆ  (24 ಎಸೆತಗಳು), ಭಾರತ 290/5

  • 23 Mar 2021 05:26 PM (IST)

    ರಾಹುಲ್​ಗೆ ಸಿಕ್ಸ್

    ರಾಹುಲ್ ಅವರು ವುಡ್ ಎಸೆತವನ್ನು ಮಿಡ್​ವಿಕೆಟ್ ಮೇಲಿಂದ ಎತ್ತಿ ಬಾರಿಸಿ 6 ರನ್ ಗಿಟ್ಟಿಸಿದ್ದಾರೆ, ಅವರ ಸ್ಖೋರ್ 45, ಭಾರತ 278/5​

  • 23 Mar 2021 05:23 PM (IST)

    ಪಾಂಡ್ಯಗೆ 6

    ಕೃಣಾಲ್ ಪಾಂಡ್ಯ ಟಾಮ್ ಕರನ್ ಎಸೆತವನ್ನು ಮಿಡ್​ವಿಕೆಟ್ ಮೇಲಿಂದ ಸಿಕ್ಸರ್​ಗೆ ಬಾರಿಸಿದ್ದಾರೆ, ಅವರ ಸ್ಕೋರ್ 36, ಭಾರತ 269/5 ರಾಹುಲ್ 39 ಭಾರತ 271/5 (47 ಓವರ್)

  • 23 Mar 2021 05:18 PM (IST)

    ರಾಹುಲ್​ಗೆ ಇನ್ನೊಂದು ಬೌಂಡರಿ

    ರಾಶಿದ್ ಎಸೆತವನ್ನು ರಾಹುಲ್ ಸ್ವೀಪ್ ಮಾಡಿ ಬೌಂಡರಿ ಗಿಟ್ಟಿಸಿದ್ದಾರೆ, ಅವರ ಸ್ಕೋರ್ 36, ಭಾರತ 259/5 (46ನೇ ಓವರ್)

  • 23 Mar 2021 05:16 PM (IST)

    ರಾಹುಲ್​ಗೆ ಬೌಂಡರಿ

    ರಾಹುಲ್ ಅವರು ಕರನ್​ ಎಸೆತವನ್ನು ಕವರ್​ ಬೌಂಡರಿ ಮೇಲಿಂದ ಬಾರಿಸಿ 4 ರನ್ ಗಿಟ್ಟಿಸಿದ್ದಾರೆ, ಅವರ ಸ್ಕೋರ್ 31, ಭಾರತ 251/5

  • 23 Mar 2021 05:14 PM (IST)

    ಪಾಂಡ್ಯಗೆ 4

    ಕೃಣಾಲ್ ಪಾಂಡ್ಯ ಮತ್ತೊಂದಿ 4 ಬಾರಿಸಿದ್ದಾರೆ, ಅವರ ಸ್ಕೋರ್ 24, ಭಾರತದ ಸ್ಕೋರ್ 245/5, ರಾಹುಲ್ 27

  • 23 Mar 2021 05:10 PM (IST)

    44 ಓವರ್​​ಗಳ ನಂತರ 238/5

    44 ಓವರ್​ಗಳ ನಂತರ ಭಾರತದ ಸ್ಕೋರ್ 238/5, ರಾಹುಲ್ 25 , ಕೃಣಾಲ್ 19, ಟಾಮ್ ಕರನ್ ಆಕ್ರಮಣ ನಡೆಸಲು ಬಂದಿದ್ದಾರೆ.

  • 23 Mar 2021 05:07 PM (IST)

    ರಾಹುಲ್​ಗೆ ಸಿಕ್ಸ್

    ರಾಹುಲ್ ಅವರು ರಾಶಿದ್ ಎಸೆತವನ್ನು ನೇರವಾಗಿ ಎತ್ತಿ ಬಾರಿಸಿ 6 ರನ್ ಗಳಿಸಿದ್ದಾರೆ, ಅವರ ಸ್ಕೋರ್ 22, ಭಾರತ 233/5

  • 23 Mar 2021 05:05 PM (IST)

    ಪಾಂಡ್ಯಗೆ ಮತ್ತೊಂದು 3

    ಬೆನ್ಸ್ ಸ್ಟೋಕ್ಸ್ ಎಸೆತವನ್ನು ಪಾಂಡ್ಯ ಬೌಂಡರಿಗಟ್ಟಿದ್ದಾರೆ, ಅವರ ಸ್ಕೋರ್ 19, ಭಾರತ 227/5

  • 23 Mar 2021 05:02 PM (IST)

    ಒಂದು ಓವರ್​ನಲ್ಲಿ ಪಾಂಡ್ಯಗೆ 3 ಫೋರ್

    ಸ್ಯಾಮ್ ಕರನ್ ಅವರ ಓವರನಲ್ಲಿ ಕೃಣಾಲ್ ಪಾಂಡ್ಯ 3 ಬೌಂಡರಿಗಳನ್ನು ಬಾರಿಸಿದ್ದಾರೆ, ಭಾರತದ ಸ್ಕೊರ್ 218/4

  • 23 Mar 2021 04:57 PM (IST)

    ಕೃಣಾಲ್ ಮೊದಲ 4

    ಕೃಣಾಲ್ ಪಾಂಡ್ಯ ಒಡಿಐಗಳಲ್ಲಿ  ತಮ್ಮ ಮೊದಲ 4 ಬಾರಿಸಿದ್ದಾರೆ, ನಂತರದ ಎಸೆತವನ್ನೂ ಬೌಂಡಿಗಟ್ಟಿದ್ದಾರೆ, ಅವರ ಸ್ಕೋರ್ 9, ಭಾರತ 214/5  (42ನೇ ಓವರ್)

  • 23 Mar 2021 04:52 PM (IST)

    ಪಾಂಡ್ಯ ಔಟ್

    ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ನಿರಾಶೆಗೊಳಿಸಿದ್ದಾರೆ, ಕೇವಲ 1 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದ್ದಾರೆ, ಅವರ ಸ್ಥಾನದಲ್ಲಿ ಆಡಲು ಸಹೋದರ ಕೃಣಾಲ್ ಪಾಂಡ್ಯ ಬಂದಿದ್ದಾರೆ, ಭಾರತದ ಸ್ಕೋರ್ 206/5

  • 23 Mar 2021 04:47 PM (IST)

    ರಾಹುಲ್​ಗೆ 6

    ರಾಹುಲ್ ಅವರು ಸ್ಯಾಮ್​ ಕರನ್ ಎಸೆತವನ್ನು ಮಿಡ್​ವಿಕೆಟ್ ಮೇಲೆ 6 ರನ್​ಗಳಿಗೆ ಪುಲ್ ಮಾಡಿದ್ದಾರೆ​, ಅವರ ಸ್ಕೋರ್ 13,

    40 ನೇ ಓವರ್​ನಲ್ಲಿ ಭಾರತದ ಸ್ಕೋರ್ 205/ 4

  • 23 Mar 2021 04:38 PM (IST)

    ಧವನ್ ಔಟ್

    ಶಿಖರ್ ಧವನ್ ಶತಕದಂಚಿನಲ್ಲಿ ಔಟಾಗಿದ್ದಾರೆ, ಅವರ 98 ರನ್ 106 ಎಸೆತಗಳಲ್ಲಿ ಬಂದಿವೆ, ಇದರಲ್ಲಿ 11 ಬೌಂಡರಿ ಮತ್ತು 2 ಸಿಕ್ಸ್ ಸೇರಿವೆ, ಬಾರತದ ಸ್ಕೋರ್ 197/4 (39 ನೇ ಓವರ್ ಜಾರಿಯಲ್ಲಿದೆ)

  • 23 Mar 2021 04:32 PM (IST)

    ಧವನ್ 98

    ಧವನ್​ ಶತಕಕ್ಕೆ ಹತ್ತಿರವಾಗಿದ್ದಾರೆ, ಅವರ ಸ್ಕೋರ್ 98 ಆಗಿದೆ, ಭಾರತದ ಸ್ಕೋರ್ 197/3, 38ನೇ ಓವರ್​ ಜಾರಿಯಲ್ಲಿದೆ

    ಇದು ಇಂಗ್ಲೆಂಡ್ ವಿರುದ್ಧ ಅವರ ಗರಿಷ್ಠ ಸ್ಕೋರ್ ಆಗಿದೆ

  • 23 Mar 2021 04:26 PM (IST)

    ರಾಹುಲ್​ಗೆ ಮೊದಲ 4

    ರಾಹುಲ್ ಸ್ಯಾಮ್ ಕರನ್​ ಅವರ ಎಸೆತವನ್ನು ಥರ್ಡ್​ಮ್ಯಾನ್​ ಬೌಂಡರಿಗೆ ಗೈಡ್​ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಭಾರತದ ಸ್ಕೋರ್ 193/3, ಧವನ್ 95

  • 23 Mar 2021 04:19 PM (IST)

    ಅಯ್ಯರ್ ಔಟ್

    ಶ್ರೇಯಸ್ ಅಯ್ಯರ್ 6ರನ್ ಗಳಿಸಿ ಔಟಾಗಿದ್ದಾರೆ, ವುಡ್​ಗೆ ಅವರು ವಿಕೆಟ್​ ಒಪ್ಪಿಸಿದ್ದಾರೆ, ಭಾರತದ ಸ್ಕೋರ್ 187/3 (35ನೇ ಓವರ್)

    ಅಯ್ಯರ್ ಸ್ಥಾನದಲ್ಲಿ ಕೆ ಎಲ್ ರಾಹುಲ್ ಆಡಲು ಬಂದಿದ್ದಾರೆ

  • 23 Mar 2021 04:16 PM (IST)

    ಅಯ್ಯರ್​ಗೆ ಮೊದಲ 4

    ಅಯ್ಯರ್ ಅವರಿ ವುಡ್​ ಎಸೆತವನ್ನು ಪುಲ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಅವರ ಸ್ಕೋರ್ 6,  ಭಾರತ 187/2 (35ನೇ ಓವರ್)

  • 23 Mar 2021 04:14 PM (IST)

    ಧವನ್​ಗೆ ಇನ್ನೊಂದು 4

    ಧವನ್ ಇನ್ನೊಂದು ಬೌಂಡರಿ ಬಾರಿಸಿ ತಮ್ಮ ಸ್ಕೋರನ್ನು 95ಕ್ಕೆ ಏರಿಸಿಕೊಂಡಿದ್ದಾರೆ, ಭಾರತದ ಸ್ಕೋರ್ 183/2ಮ ಅಯ್ಯರ್ 2

  • 23 Mar 2021 04:09 PM (IST)

    ಧವನ್​ಗೆ 4

    ಶಿಖರ್ ಧವನ್ ಮತ್ತೊಂದು 4 ಬಾರಿಸಿ 90ರಲ್ಲಿ ಪ್ರವೇಶಿಸಿದ್ದಾರೆ, ಅವರ ಸ್ಕೋರ್ 91, ಭಾರತ 178/2, ಕೊಹ್ಲಿ ಜಾಗದಲ್ಲಿ ಶ್ರೇಯಸ್ ಅಯ್ಯರ್ ಆಡಲು ಬಂದಿದ್ದಾರೆ

  • 23 Mar 2021 04:03 PM (IST)

    ಕೊಹ್ಲಿ ಔಟ್!

    ನಾಯಕ ವಿರಾಟ್​ ಕೊಹ್ಲಿ 60 ಎಸೆತಗಳಲ್ಲಿ 56 ರನ್ ಬಾರಿಸಿ ಔಟಾಗಿದ್ದಾರೆ, ಅವರ ಸ್ಕೋರಿನಲ್ಲಿ 6 ಬೌಂಡರಿಗಳಿದ್ದವು, ಭಾರತದ ಸ್ಕೋರ್ 169/2

  • 23 Mar 2021 03:57 PM (IST)

    100 ರನ್ ಜೊತೆಯಾಟ

    ಶಿಖರ್ ಧವನ್ (81) ಮತ್ತು ವಿರಾಟ್​ ಕೊಹ್ಲಿ (54) ಅವರ ನಡುವೆ ಮುರಿಯದ ಎರಡನೇ ವಿಕೆಟ್​ ಜೊತೆಯಾಟದಲ್ಲಿ 100 ರನ್ ಬಂದಿವೆ, ಭಾರತದ ಸ್ಕೋರ್ 166/1​

  • 23 Mar 2021 03:53 PM (IST)

    ಧವನ್​ಗೆ 4

    ಧವನ್ ಅವರು ವುಡ್ ಎಎತವನ್ನು ಬೌಂಡರಿಗಟ್ಟಿ 4 ರನ್ ಗಳಿಸಿದ್ದಾರೆ, ಅವರ ಸ್ಕೋರ್ 81, ಭಾರತ 164/1, ಕೊಹ್ಲಿ 53

  • 23 Mar 2021 03:47 PM (IST)

    ಕೊಹ್ಲಿ 50

    ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಸಹ ಅರ್ಧ ಶತಕ ಪೂರೈಸಿದ್ದಾರೆ, ಅವರ 50 ರನ್ 50 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಬಂದಿವೆ, ಭಾರತದ ಸ್ಕೋರ್ 153/1,  ಕೊಹ್ಲಿ-ಶಿಖರ್ ಜೊತೆಯಾಟ ಶತಕದ ಗಡಿ ಸಮೀಪಿಸಿದೆ

  • 23 Mar 2021 03:44 PM (IST)

    ಧವನ್​ಗೆ ಸಿಕ್ಸ್ ಮತ್ತು ಬೌಂಡರಿ

    ಮೊಯೀನ್ ಅವರ ಈ ಓವರ್​ನಲ್ಲಿ ಧವನ್ 1 ಸಿಕ್ಸ್ ಮತ್ತು 1 ಫೋರ್ ಬಾರಿಸಿದ್ದಾರೆ, ಭಾರತದ ಸ್ಕೋರ್ 150/1, ಕೊಹ್ಲಿ 49

  • 23 Mar 2021 03:38 PM (IST)

    ಮೊಯೀನ್ ಓವರ್ನಲ್ಲಿ 5 ರನ್

    ಮೊಯೀನ್ ಅವರ ಓವರ್​ನಲ್ಲಿ 5 ರನ್ ಬಂದಿವೆ, ಭಾರತದ ಸ್ಕೋರ್ 129/1, ಕೊಹ್ಲಿ 42, ಧವನ್ 59, 28ನೇ ಓವರ್ ಜಾರಿಯಲ್ಲಿದೆ

  • 23 Mar 2021 03:34 PM (IST)

    ಕೊಹ್ಲಿಗೆ ಬೌಂಡರಿ

    ವಿರಾಟ್ ಕೊಹ್ಲಿ ಅವರು ರಾಶಿದ್ ಎಸೆತವನ್ನು ಬೌಂಡಿರಿಗಟ್ಟಿದ್ದಾರೆ, ಅವರ ಸ್ಕೋರ್ 38, ಭಾರತ 125/1, ಧವನ್ 57, 26 ಓವರ್​ಗಳ ಆಟ ಮುಗಿದಿದೆ

  • 23 Mar 2021 03:30 PM (IST)

    ಧವನ್ ಅರ್ಧ ಶತಕ

    ಶಿಖರ್ ಧವನ್ ಅರ್ಧ ಶತಕ ಪೂರೈಸಿದ್ದಾರೆ, ಅವರ 50 ರನ್​ಗಳು 70 ಎಸೆತಗಳಲ್ಲಿ ಬಂದಿವೆ, ಧವನ್ ಸ್ಕೋರ್​ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸ್​ಗಳಿವೆ

  • 23 Mar 2021 03:14 PM (IST)

    ಕೊಹ್ಲಿಗೆ ಮೊದಲ ಬೌಂಡರಿ

    ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ತಮ್ಮ ಮೊದಲ ಬೌಂಡರಿ ಬಾರಿಸಿದ್ದಾರೆ. ಆದಿಲ್ ರಾಶಿದ್ ಅವರ ಎಸೆತವನ್ನು ಎಕ್ಸ್​ಟ್ರಾ ಕವರ್ ಡ್ರೈವ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಭಾರತದ ಸ್ಕೋರ್ 88/1

  • 23 Mar 2021 03:02 PM (IST)

    17 ಓವರ್​ಗಳಲ್ಲಿ ಭಾರತ 75/1

    17 ಓವರ್​ಗಳ ನಂತರ ಭಾರತದ ಸ್ಕೋರ್ 75/1, ಶಿಖರ್ ಧವನ್ 41, ಕೊಹ್ಲಿ 5, ಈ ಪಂದ್ಯದಲ್ಲಿ ಮೊದಲ ಬಾರಿಗೆ ಸ್ಪಿನ್ನರ್ ದಾಳಿಗಿಳಿದಿದ್ದಾರೆ, ಆದಿಲ್ ರಾಶಿದ್​​ರನ್ನು ದಾಳಿಗಿಳಿಸಲಾಗಿದೆ

  • 23 Mar 2021 02:57 PM (IST)

    ಧವನ್​ಗೆ ಬೌಂಡರಿ

    ಬೆನ್ ಸ್ಟೋಕ್ಸ್ ಅವರ ಓವರ್​ನ  ಕೊನೆಯ ಎಸೆತವನ್ನು ಧವನ್ ಬೌಂಡರಿಗಟ್ಟಿ 4 ರನ್ ಗಿಟ್ಟಿಸಿದ್ದಾರೆ, ಅವರ ಸ್ಕೋರ್ 39, ಭಾರತ 71/1, ಕೊಹ್ಲಿ 2

  • 23 Mar 2021 02:55 PM (IST)

    ರೋಹಿತ್ ಔಟ್

    ಆರಂಭ ಆಟಗಾರ ರೋಹಿತ್ ಶರ್ಮ 42ಎಸೆತಗಳಲ್ಲಿ 28 ರನ್ ಗಳಿಸಿ (4 ಬೌಂಡರಿ) ಬೆನ್ ಸ್ಟೋಕ್ಸ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ, ಭಾರತದ ಸ್ಕೋರ್ 65/1, ಅವರ ಸ್ಥಾನದಲ್ಲಿ ವಿರಾಟ್​ ಕೊಹ್ಲಿ ಆಡಲು ಬಂದಿದ್ದಾರೆ

  • 23 Mar 2021 02:49 PM (IST)

    15ನೇ ಓವರ್ ಆರಂಭ

    ಇಂಗ್ಲೆಂಡ್​ ಪರ ಟಾಮ್ ಕರನ್ 15 ನೇ ಓವರ್ ಆರಂಭಿಸಿದ್ದಾರೆ, ಭಾರತದ ಸ್ಕೋರ್ 58/0, ರೋಹಿತ್ 23, ಧವನ್ 33. ಕರನ್ ಅವರ ಮೂರನೇ ಎಸೆತವನ್ನು ರೋಹಿತ್ ಬೌಂಡರಿಟ್ಟಿದ್ದಾರೆ, ಅವರ ಸ್ಕೋರ್ 27, ಭಾರತ 63/0

  • 23 Mar 2021 02:44 PM (IST)

    ಶಿಖರ್​​ಗೆ ಬೌಂಡರಿ

    ಬೆನ್ ಸ್ಟೋಕ್ಸ್​ ಅವರ ಶಾರ್ಟ್​ ಎಸೆತವನ್ನು ಫೈನಲೆಗ್ ಬೌಂಡರಿಗೆ ಹುಕ್ ಮಾಡಿ ಧವನ್ 4 ರನ್ ಗಿಟ್ಟಿಸಿದ್ದಾರೆ, ಅವರ ಸ್ಕೊರ್ 33, ರೋಹಿತ್ 23, ಭಾರತ 57/0, 13ನೇ ಓವರ್ ಜಾರಿಯಲ್ಲಿದೆ

  • 23 Mar 2021 02:36 PM (IST)

    ಭಾರತದ 50

    13ನೇ ಓವರ್​ನಲ್ಲಿ ಭಾರತದ 50 ರನ್ ಪೂರ್ತಿಗೊಂಡಿವೆ

  • 23 Mar 2021 02:30 PM (IST)

    ಬೌಲಿಂಗ್​ನಲ್ಲಿ ಮೊದಲ ಬದಲಾವಣೆ

    ಮೊದಲ ಬೌಲಿಂಗ್​ ಪರಿವರ್ತನೆಯಾಗಿ ಸ್ಯಾಮ್ ಅವರ ಸಹೋದರ ಟಾಮ್ ಕರನ್ ದಾಳಿಗಿಳಿದಿದ್ದಾರೆ

  • 23 Mar 2021 02:26 PM (IST)

    10 ಓವರ್ 39 ರನ್

    ಮೊದಲ 10 ಓವರ್​ಗಳಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೆ 39 ರನ್ ಗಳಿಸಿದೆ, ಧವನ್ 20, ರೋಹಿತ್ 19

  • 23 Mar 2021 02:22 PM (IST)

    ರೋಹಿತ್ ಮತ್ತೊಂದು ಆಕರ್ಷಕ ಹೊಡೆತ

    ಈ ಬಾರಿ ರೋಹಿತ್ ಅಷ್ಟೇ ಮನಮೋಹಕವಾಗಿ ಚೆಂಡನ್ನು ಸ್ಟ್ರೇಟ್ ಡ್ರೈವ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಭಾರತದ ಸ್ಕೋರ್ 34/0

  • 23 Mar 2021 02:20 PM (IST)

    ರೋಹಿತ್ ಭರ್ಜರಿ ಹೊಡೆತ

    ರೋಹಿತ ಬ್ಯಾಟ್​ನಿಂದ ಇಂದಿನ ಮೊದಲ ಅಕ್ರಮಣಕಾರಿ ಮತ್ತು ಅಧಿಕಾರಯುತ ಹೊಡೆ್ತ, ಕವರ್ ಫೀಲ್ಡರ್ ತಲೆ ಮೇಲಿಂದ ಬೌಂಡರಿಗೆ ಚಿಮ್ಮಿದ ಚೆಂಡು, ಭಾರತ 30/0

  • 23 Mar 2021 02:12 PM (IST)

    ಧವನ್​ಗೆ ಜೀವದಾನ

    ಧವನ್ ಅವರ ಶಕ್ತಿಯುತವಾಗಿ ಗಾಳಿಯಲ್ಲಿ ಬಾರಿಸಿದ ಚೆಂಡನ್ನು ಪಾಯಿಂಟ್​ನಲ್ಲಿದ್ದ ಫೀಲ್ಡರ್ ಕ್ಯಾಚ್ ಮಾಡಲು ವಿಫಲರಾದರು, ಭಾರತದ ಸ್ಕೋರ್ 25/0 (8ನೇ ಓವರ್)

  • 23 Mar 2021 02:10 PM (IST)

    ಧವನ್​ಗೆ ಮತ್ತೊಂದು ಬೌಂಡರಿ

    ವುಡ್​ ಅವರ ಓವರ್​ಪಿಚ್​ ಎಸೆತವನ್ನು ಕವರ್ ಡ್ರೈವ್ ಮಾಡಿ ಧವನ್ ಈ ಓವರ್​ನಲ್ಲಿ ಮತ್ತೊಂದು 4 ಗಿಟ್ಟಿಸಿದ್ದಾರೆ, ಅವರ ಸ್ಕೋರ್ 16, ಭಾರತ 24/0

  • 23 Mar 2021 02:07 PM (IST)

    ಧವನ್​ಗೆ ಬೌಂಡರಿ

    ಧವನ್ ಅವರು ವುಡ್​ ಎಸೆತವನ್ನು ಮತ್ತೊಮ್ಮೆ ಪಾಯಿಂಟ್​ ಬೌಂಡರಿಗೆ ಅಟ್ಟಿ 4 ರನ್ ಪಡೆದಿದ್ದಾರೆ

  • 23 Mar 2021 02:04 PM (IST)

    ರೋಹಿತ್​​ಗೆ ಮೊದಲ 4

    ಕರನ್ ಅವರ ಎಸೆತವನ್ನು ಫೈನ್​ಲೆಗ್​ಗೆ ಫ್ಲಿಕ್ ಮಾಡಿ ರೋಹಿತ್ ತಮ್ಮ ಮೊದಲ ಬೌಂಡರಿ ಗಿಟ್ಟಿಸಿದ್ದಾರೆ, ಭಾರತದ ಸ್ಕೋರ್ 15/0 (6 ಓವರ್​)

  • 23 Mar 2021 02:02 PM (IST)

    ರನ್ ಗಳಿಸಲು ಪರದಾಟ

    ಭಾರತದ ಆರಂಭ ಆಟಗಾರರು ರನ್​ ಗಳಿಸಲು ಪರದಾಡುತ್ತಿದ್ದಾರೆ

  • 23 Mar 2021 02:01 PM (IST)

    ಭಾವುಕ ಕ್ಷಣ

    ಒಂದು ದಿನದ ಪಂದ್ಯಗಳಿಗೆ ಇಂದು ಪದಾರ್ಪಣೆ ಮಾಡಿದ ಅಣ್ಣ ಕೃಣಾಲ್ ಪಾಂಡ್ಯ ಅವರನ್ನು ಸಂತಸದಿಂದ ತಬ್ಬಿಕೊಂಡಿರುವ ಹಾರ್ದಿಕ್ ಪಾಂಡ್ಯ!

     

  • 23 Mar 2021 01:58 PM (IST)

    ರೋಹಿತ್ ಮೊಣಕೈಗೆ ಪೆಟ್ಟು

    ವುಡ್​ ಅವರ 148 ಕಿ ಮೀ ವೇಗದ ಎಸೆತವೊಂದು ರೋಹಿತ್​ ಅವರ ಮೊಣಕೈಗೆ ಅಪ್ಪಳಿಸಿದೆ, ಅವರಿಗೆ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ

  • 23 Mar 2021 01:54 PM (IST)

    ಸ್ಯಾಮ್ ಮೇಡನ್ ಓವರ್

    ಸ್ಯಾಮ್ ಕರನ್ ಎರಡನೇ ಓವರ್ ಮೇಡನ್ ಆಗಿದೆ, ಭಾರತ 10/0

  • 23 Mar 2021 01:51 PM (IST)

    ಸ್ಯಾಮ್ ದಾಳಿ ಮುಂದುವರಿಸಿದ್ದಾರೆ

    ಮತ್ತೊಂದು ತುದಿಯಿಂದ ಸ್ಯಾಮ್ ಕರನ್ ತಮ್ಮ ಎರಡನೇ ಓವರ್​ ಬೌಲ್ ಮಾಡುತ್ತಿದ್ದಾರೆ, ಭಾರತ 10/0

  • 23 Mar 2021 01:47 PM (IST)

    ಚೆಂಡಿನ ಆಕಾರ ಬದಲು

    ಶಿಖರ್ ಅವರ ಹೊಡೆತಕ್ಕೆ ಚೆಂಡಿನ ಆಕಾರ ಬದಲಾಗಿದ್ದರಿಂದ ಅದನ್ನು ಬದಲಾಯಿಸಲಾಗಿದೆ, 3ನೇ ಓವರ್​ ಮುಗಿದಿದೆ, ಭಾರತ 10/0

  • 23 Mar 2021 01:45 PM (IST)

    ಶಿಖರ್​ಗೆ ಮೊದಲ 4

    ಮಾರ್ಕ್ ವುಡ್ ಶಾರ್ಟ್​ ಎಸೆತವನ್ನು ಪಾಂಯಿಂಟ್​ ಬೌಂಡರಿ ಕಡೆ ಸ್ಕ್ವೇರ್ ಡ್ರೈವ್ ಮಾಡಿ ಶಿಖರ್ 4 ರನ್ ಗಿಟ್ಟಿಸಿದ್ದಾರೆ, ಭಾರತ 9/0

  • 23 Mar 2021 01:42 PM (IST)

    ಭಾರತ 5/0

    ಎರಡು ಓವರ್​ಗಳ ನಂತರ ಭಾರತದ ಸ್ಖೋರ್ 5/0, ಶಿಖರ್ ಧವನ್ 1, ರೋಹಿತ್ ಶರ್ಮ 4

  • 23 Mar 2021 01:36 PM (IST)

    ಶಿಖರ್- ಶರ್ಮ ಓಪನರ್ಸ್

    ಭಾರತದ ಪರ ರೋಹಿತ್ ಶರ್ಮ ಮತ್ತು ಶಿಖರ್​ ಧವನ್ ಇನ್ನಿಂಗ್ಸ್ ಆರಂಭಿಸಲು ಬಂದಿದ್ದಾರೆ. ಮಾರ್ಕ್​ ವುಡ್ ಬೌಲಿಂಗ್ ದಾಳಿ ಆರಂಭಿಸಿದ್ದಾರೆ

  • 23 Mar 2021 01:34 PM (IST)

    ಟಾಸ್ ಗೆದ್ದ ಇಂಗ್ಲೆಂಡ್

    ಮೊದಲ ಒಡಿಐನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡ್​ ಮಾಡುವ ನಿರ್ಣಯ ತೆಗೆದುಕೊಂಡಿದೆ

ಪುಣೆ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 66 ರನ್​ಗಳ ವಿಜಯ ದಾಖಲಿಸಿದೆ. ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಗೆಲುವು ದಾಖಲಿಸಿದ್ದ ಭಾರತ ಈ ಮೂಲಕ ಏಕದಿನ ಸರಣಿಯನ್ನೂ ಗೆಲ್ಲುವ ಭರವಸೆ ನೀಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಭಾರತ ಗೆಲುವಿನ ದಾಪುಗಾಲು ಇಟ್ಟಿದೆ. 318 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 251 ರನ್​ ಗಳಿಸುವಷ್ಟರಲ್ಲಿ ಸುಸ್ತಾಗಿದೆ. ಆರಂಭಿಕರಾದ ಜೇಸನ್ ರಾಯ್, ಬೇರ್​ಸ್ಟೋ ಹೊರತುಪಡಿಸಿ ಉಳಿದ ಆಟಗಾರರು 30 ರನ್ ಗಡಿ ದಾಟಲು ಕೂಡ ವಿಫಲರಾಗಿದ್ದಾರೆ. ಭಾರತದ ಪರ ಪ್ರಸಿದ್ಧ್ ಕೃಷ್ಣ 4, ಶಾರ್ದುಲ್ ಠಾಕುರ್ 3 ಹಾಗೂ ಭುವನೇಶ್ವರ್ ಕುಮಾರ್ 2 ವಿಕೆಟ್ ಕಬಳಿಸಿ ಗೆಲುವಿಗೆ ನೆರವಾಗಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಒಂದು ದಿನದ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಅತಿಥೇಯರು ನಿಗದಿತ 50 ಓವರ್​ಗಳಲ್ಲಿ ಭಾರಿ ಎನ್ನಬಹುದಾದ 317/5 ಮೊತ್ತ ಗಳಿಸಿದರು. ಆರಂಭ ಆಟಗಾರ ಶಿಖರ್ ಧವನ್ ಕೇವಲ 2 ರನ್​ಗಳಿಂದ ಶತಕ ಬಾರಿಸುವುದನ್ನು ತಪ್ಪಿಸಿಕೊಂಡರು.

ಆದರೆ ಭಾರತದ ಮೊತ್ತ 300 ಗಡಿ ದಾಟಲು, ಕೆ ಎಲ್ ರಾಹುಲ್ ರಾಹುಲ್ ಅಜೇಯ 62 (4 ಬೌಂಡರಿ, 4 ಸಿಕ್ಸ್ ) ಮತ್ತು ಡೆಬ್ಯುಟಂಟ್ ಕೃಣಾಲ್ ಪಾಂಡೆ  ಅಜೇಯ 58 (7 ಬೌಂಡರಿ, 2 ಸಿಕ್ಸ್ ) ಅವರು 6ನೇ ವಿಕೆಟ್​ಗೆ ಕೇವಲ 57 ಎಸೆತಗಳಲ್ಲಿ 112 ರನ್ ಸೇರಿಸಿದ್ದು ಪ್ರಮುಖ ಕಾರಣವಾಯಿತು. ಮೊದಲ ಪಂದ್ಯವಾಡುತ್ತಿದ್ದರೂ ಮೈ ಚಳಿ ಬಿಟ್ಟವರಂತೆ ಆಡಿದ ಕೃಣಾಲ್ ಕ್ರಿಕೆಟ್​ ಅಭಿಮಾನಿಗಳ ಮನ ಗೆದ್ದರು.

ಭಾರತಕ್ಕೆ ಧವನ್ ಮತ್ತು ರೋಹಿತ್ ಶರ್ಮ ಮೊದಲ ವಿಕೆಟ್​ಗೆ 64 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ರೋಹಿತ್ 42 ಎಸೆತಗಳಲ್ಲಿ 28 ರನ್ (4 ಬೌಂಡರಿ) ಬಾರಿಸಿ ಔಟಾದರು.

ನಂತರ ಧವನ್ ಮತ್ತು ನಾಯಕ ವಿರಾಟ್ ಕೊಹ್ಲಿ ಎರಡನೇ ವಿಕೆಟ್​ಗೆ ಸುಮಾರು 16 ಓವರ್​ಗಳಲ್ಲಿ 105 ರನ್ ಸೇರಿಸಿದರು. 60 ಎಸೆತಗಳಲ್ಲಿ 56 ರನ್ (6 ಬೌಂಡರಿ) ಬಾರಿಸಿದ ಕೊಹ್ಲಿ ಮಾರ್ಕ್ ವುಡ್​ಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅವರ ಬ್ಯಾಟ್​ನಿಂದ ಉತ್ತಮ ಕಾಣಿಕೆ ಬರಲಿಲ್ಲ.

ಧವನ್ (98, 106 ಎಸೆತ, 11 ಬೌಂಡರಿ, 2 ಸಿಕ್ಸ್  ) ಶತಕ ಬಾರಿಸಿಸುವುದು ಖಚಿತ ಅನ್ನೋ ಸಂದರ್ಭದಲ್ಲಿ ವಿಕೆಟ್ ಚೆಲ್ಲಿದರು. ಅವರು ಔಟಾದಾಗ ಭಾರತದ ಸ್ಕೋರ್ 197/4 ಆಗಿತ್ತು. ಪಾಂಡ್ಯ ಸಹೋದರರಲ್ಲಿ ಕಿರಿಯರಾಗಿರುವ ಹಾರ್ದಿಕ್ ಇವತ್ತು ಕಮಾಲ್ ತೋರಿಸದೆ ಔಟಾದರು. ಆದರೆ ಆ ಕೊರತೆಯನ್ನು ಅಣ್ಣ ಕೃಣಾಲ್ ನೀಗಿದರು.

ಕೃಣಾಲ್ ಮತ್ತು ರಾಹುಲ್ ಆಂಗ್ಲ ಬೌಲರ್​ಗಳನ್ನು ನಿರ್ದಯತೆಯಿಂದ ಚಚ್ಚಿದರು.

ಇಂಗ್ಲೆಂಡ್ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಬೆನ್ ಸ್ಟೋಕ್ಸ್ 8 ಓವರ್​ಗಳಲ್ಲಿ ಕೇವಲ 34 ರನ್ ನೋಡಿ 3 ವಿಕೆಟ್​ ಪಡೆದರು. ಮಾರ್ಕ್ ವುಡ್​ 75 ರನ್​ಗೆ 2 ವಿಕೆಟ್​ ಪಡೆದರು.

ಕೃಣಾಲ್ ಪಾಂಡ್ಯ ಜೊತೆ ಕರ್ನಾಟಕದ ಪ್ರಸಿಧ್ ಕ್ರಿಷ್ಣ ಅವರು ಈ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: Ind vs Eng 1st ODI: ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಕೃನಾಲ್ ಪಾಂಡ್ಯ ಭಾವುಕರಾಗಿ ಅತ್ತುಬಿಟ್ಟರು!

Published On - 9:35 pm, Tue, 23 March 21

Follow us on