India vs England Test Series: ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ತೆಂಡೂಲ್ಕರ್-ಕುಕ್ ಟ್ರೋಫಿ ಅಂತ ಕರೆಯಬೇಕು: ಪನೆಸಾರ್

ಬಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುವ ಟೆಸ್ಟ್​ ಸರಣಿ ಉಭಯ ದೇಶಗಳ ಲೆಜೆಂಡರಿ ಬ್ಯಾಟ್ಸ್​ಮನ್​ಗಳಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ಅಲಸ್ಟೇರ್ ಕುಕ್ ಅವರ ಹೆಸರಿನಲ್ಲಿ ಆಡಿಸಬೇಕು ಅಂತ ಮಾಂಟಿ ಪನೆಸಾರ್ ತಮ್ಮ ಟ್ವೀಟ್​ನಲ್ಲಿ ಹೇಳಿದ್ದಾರೆ.

India vs England Test Series: ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ತೆಂಡೂಲ್ಕರ್-ಕುಕ್ ಟ್ರೋಫಿ ಅಂತ ಕರೆಯಬೇಕು: ಪನೆಸಾರ್
ಅಲಸ್ಟೇರ್ ಕುಕ್ ಮತ್ತು ಸಚಿನ್ ತೆಂಡೂಲ್ಕರ್

Updated on: Feb 11, 2021 | 10:18 PM

ಇಂಗ್ಲೆಂಡ್ 2012ರಲ್ಲಿ ಭಾರತ ಪ್ರವಾಸ ಬಂದಾಗ ಆಂಗ್ಲರು ಸರಣಿಯನ್ನು 2-1 ಅಂತರದಿಂದ ಗೆಲ್ಲುವಲ್ಲಿ ಸರಣಿಯಲ್ಲಿ 17 ವಿಕೆಟ್ ಪಡೆದ ಪನೆಸಾರ್ ನಿರ್ಣಾಯಕ ಪಾತ್ರ ವಹಿಸಿದ್ದರು. ತೆಂಡೂಲ್ಕರ್ ಅವರನ್ನು ವಿಶ್ವದ ಅತಿದೊಡ್ಡ ಲೆಜೆಂಡರಿ ಆಟಗಾರ ಅಂತ ಹೇಳುವ ಪನೆಸಾರ್, ಸಚಿನ್ ಮತ್ತು ಕುಕ್ ತಮ್ಮ ದೇಶಗಳ ಪರ ಅತಿ ಹೆಚ್ಚು ರನ್​ಗಳನ್ನು ಗಳಿಸಿದ್ದಾರಲ್ಲದೆ ಪರಸ್ಪರ ಎದುರಾಳಿಗಳಾಗಿ ಆಡಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ, ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್​ ಸರಣಿಯನ್ನು ತೆಂಡೂಲ್ಕರ್-ಕುಕ್ ಟ್ರೋಫಿ ಅಂತ ಕರೆಯಬೇಕು ಅಂದಿದ್ದಾರೆ.

‘ಇಂಗ್ಲೆಂಡ್ ಮತ್ತು ಇಂಡಿಯಾ ನಡುವೆ ಆಡಲಾಗುವ ಸರಣಿಯನ್ನು ತೆಂಡೂಲ್ಕರ್-ಕುಕ್ ಟ್ರೋಫಿ ಎಂದು ಕರೆಯಬೇಕು, ಯಾಕೆಂದರೆ ಅವರಿಬ್ಬರು ತಮ್ಮ ತಮ್ಮ ದೇಶಗಳ ಪರ ಅತಿಹೆಚ್ಚು ರನ್ ಗಳಿಸಿದ್ದಾರೆ. ಅವರು ಪರಸ್ಪರ ಎದುರಾಳಿಗಳಾಗಿ ಆಡಿದ್ದಾರೆ ಮತ್ತು ನಮಗೆಲ್ಲ ಗೊತ್ತಿರುವಂತೆ, ತೆಂಡೂಲ್ಕರ್ ಕ್ರೀಡೆಯ ಅತಿದೊಡ್ಡ ಲೆಜೆಂಡ್ ಆಗಿದ್ದರೂ ಅವರ ಹೆಸರಿನಲ್ಲಿ ಯಾವುದೇ ಸರಣಿ ನಡೆಯುತ್ತಿಲ್ಲ, ಎಂದು ಪನೆಸಾರ್ ಟ್ವೀಟ್ ಮಾಡಿದ್ದಾರೆ.

ಮಾಂಟಿ ಪನೆಸಾರ್

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 200 ಪಂದ್ಯಗಳನ್ನು ಆಡಿರುವ ಏಕಮಾತ್ರ ಅಟಗಾರನಾಗಿರುವ ಸಚಿನ್ ತೆಂಡೂಲ್ಕರ್ 51 ಶತಕಗಳ ಸಹಿತ 15,921 ರನ್ ಗಳಿಸಿ ವಿದಾಯ ಹೇಳಿದರು. ಈ ಫಾರ್ಮಾಟ್​ನಲ್ಲಿ ಅತಿಹೆಚ್ಚು ರನ್ ಗಳಿಸಿರುವ ಕೀರ್ತಿ ಸಹ ಭಾರತದ ಲಿಟ್ಲ್ ಮಾಸ್ಟರ್​ ಅವರದ್ದು. ಹಾಗೆಯೇ, ಇಂಗ್ಲೆಂಡ್​ ಪರ 161 ಟೆಸ್ಟ್​ಗಳನ್ನಾಡಿದ ಕುಕ್ 33 ಶತಕಗಳೊಂದಿಗೆ 12,472 ರನ್ ಗಳಿಸಿದ್ದಾರೆ.

ಇದನ್ನೂ ಓದಿ: India vs England Test Series: ಎರಡನೇ ಟೆಸ್ಟ್​ ಪಂದ್ಯವನ್ನೂ ಭಾರತ ಸೋತರೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ: ಮಾಂಟಿ ಪನೆಸಾರ್

ಪನೆಸಾರ್ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಒಬ್ಬ ಕ್ರಿಕೆಟ್ ಪ್ರೇಮಿ, ‘ಅದ್ಸರಿ ಸರಣಿಗೆ ಭಜ್ಜಿ-ಪನೆಸಾರ್ ಟ್ರೋಫಿ ಅಂತ ಯಾಕೆ ಕರೆಯಬಾರದು,’ ಅಂತ ಛೇಡಿಸಿದ್ದಾರೆ.

ಅವರಿಗೆ ಉತ್ತರಿಸಿರುವ ಪನೆಸಾರ್, ‘ನಾನು ಟೆಸ್ಟ್​ ಕ್ರಿಕೆಟ್​ನಲ್ಲಿ 300 ವಿಕೆಟ್​ಗಳನ್ನು ಪಡೆದಿದ್ದರೆ ಹರ್ಭಜನ್-ಪನೆಸಾರ್ ಟ್ರೋಫಿ ಎಂದು ಕರೆಯಬಹುದಿತ್ತು,’ ಅಂತ ಟ್ವೀಟ್ ಮಾಡಿದ್ದಾರೆ.

 

Published On - 6:25 pm, Thu, 11 February 21