
ತುಮಕೂರು: ನಿನ್ನೆ ತಡರಾತ್ರಿ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ಇನೋವಾ ಕಾರು ಡಿಕ್ಕಿಯಾಗಿ ಸ್ಥಳದಲ್ಲಿಯೇ ಇಬ್ಬರು ಸಾವಿಗೀಡಾಗಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಇನೋವಾ ಕಾರು ಬೆಂಗಳೂರಿನಿಂದ ಹೋಗುತ್ತಿತ್ತು:
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಂದ್ರಬಾವಿ ಬಳಿ ನಿನ್ನೆ ತಡರಾತ್ರಿ ಈ ದುರ್ಘಟನೆ ನಡೆದಿದೆ. ಇನೋವಾ ಕಾರು ಬೆಂಗಳೂರಿನಿಂದ ಹೋಗುತ್ತಿತ್ತು. ಮೃತರು ಪಾವಗಡ ಮೂಲದವರು ಎಂದು ತಿಳಿದುಬಂದಿದೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:02 am, Sat, 19 September 20