ಸಂಬಳ ವಿಚಾರ: ಇತ್ಯರ್ಥಕ್ಕೆಂದು ಕರೆದವರು ಕೊಂದೇಬಿಟ್ರು, ಆದರೆ ಕೊಂದಿದ್ಯಾರನ್ನ?

ಸಂಬಳ ವಿಚಾರ: ಇತ್ಯರ್ಥಕ್ಕೆಂದು ಕರೆದವರು ಕೊಂದೇಬಿಟ್ರು, ಆದರೆ ಕೊಂದಿದ್ಯಾರನ್ನ?

ನೆಲಮಂಗಲ: ಸಂಬಳ ಕೊಡಿಸುವ ವಿಚಾರದಲ್ಲಿ ಮಧ್ಯವರ್ತಿಯಾಗಿ ಹೋಗಿದ್ದವನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಸಮೀಪದ ಸಾಯಿ ಲೇಔಟ್​ನಲ್ಲಿ ನಡೆದಿದೆ. ತುಮಕೂರಿನ ಕೊರಟಗೆರೆ ಮೂಲದ ಸತೀಶ್(26)ಕೊಲೆಯಾದ ಯುವಕನಾಗಿದ್ದು, ಪ್ರದೀಪ್ ಎಂಬ ಯುವಕನಿಗೆ ಐದು ತಿಂಗಳಿಂದ ಬರೀ ಅಡ್ವಾನ್ಸ್ ಹಣ ಕೊಟ್ಟು ಸಂಬಳ ಕೊಡದೆ ದುಡಿಸಿ ಕೊಳ್ಳತ್ತಿದ್ದ ಬಸ್ ಒನರ್ ಬಳಿ ಚಾಲಕ ಪ್ರದೀಪ್, ಜೊತೆಗೆ ಇರಲಿ ಅಂತ ಮಧ್ಯವರ್ತಿಯಾಗಿ  ಸತೀಶ್ ನನ್ನ ಜೊತೆಗೆ ಕರೆತಂದಿದ್ದ. ತಡರಾತ್ರಿ ಸಂಬಳ ಕೊಡುವ ವಿಚಾರವಾಗಿ ಬಸ್ […]

sadhu srinath

|

Sep 19, 2020 | 7:45 AM

ನೆಲಮಂಗಲ: ಸಂಬಳ ಕೊಡಿಸುವ ವಿಚಾರದಲ್ಲಿ ಮಧ್ಯವರ್ತಿಯಾಗಿ ಹೋಗಿದ್ದವನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಸಮೀಪದ ಸಾಯಿ ಲೇಔಟ್​ನಲ್ಲಿ ನಡೆದಿದೆ.

ತುಮಕೂರಿನ ಕೊರಟಗೆರೆ ಮೂಲದ ಸತೀಶ್(26)ಕೊಲೆಯಾದ ಯುವಕನಾಗಿದ್ದು, ಪ್ರದೀಪ್ ಎಂಬ ಯುವಕನಿಗೆ ಐದು ತಿಂಗಳಿಂದ ಬರೀ ಅಡ್ವಾನ್ಸ್ ಹಣ ಕೊಟ್ಟು ಸಂಬಳ ಕೊಡದೆ ದುಡಿಸಿ ಕೊಳ್ಳತ್ತಿದ್ದ ಬಸ್ ಒನರ್ ಬಳಿ ಚಾಲಕ ಪ್ರದೀಪ್, ಜೊತೆಗೆ ಇರಲಿ ಅಂತ ಮಧ್ಯವರ್ತಿಯಾಗಿ  ಸತೀಶ್ ನನ್ನ ಜೊತೆಗೆ ಕರೆತಂದಿದ್ದ.

ತಡರಾತ್ರಿ ಸಂಬಳ ಕೊಡುವ ವಿಚಾರವಾಗಿ ಬಸ್ ಒನರ್ ಹರೀಶ್​ ಚಾಲಕ ಪ್ರದೀಪ್​ನನ್ನು ಕರೆಸಿದ್ದರು. ಸಂಬಳ ಕೊಡ್ತೀನಿ ಅಂತ ಹೇಳಿದ ಬಳಿಕ ಎಲ್ರೂ ಸೇರಿ ಎಣ್ಣೆ ಹೊಡೆದ್ರು. ಬಳಿಕ ಮತ್ತೆ ಗಲಾಟೆ ಆರಂಭಿಸಿ ಮಧ್ಯವರ್ತಿಯಾಗಿ ಬಂದಿದ್ದವನ ಮೇಲೆ ಬಿಯರ್ ಬಾಟಲಿಯಿಂದ ಒನರ್ ಹರೀಶ್ ಮತ್ತು ಇತನ ಸಹಚರರಾದ ಮಲ್ಲೇಶ್,ಸಿದ್ದು, ಸೇರಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.

ಹಲ್ಲೆಗೊಳಗಾಗಿದ್ದ ಸತೀಶನಿಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಬಳಕ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಆ್ಯಂಬುಲೆನ್ಸ್​ ಮುಖಾಂತರ ರವಾನೆ ಮಾಡಲಾಗಿದೆ. ಆದರೆ ನಿಮಾನ್ಸ್​ನಲ್ಲಿ ಬೆಡ್ ಸಿಗದ ಕಾರಣ ವಾಪಸ್ ನೆಲಮಂಗಲಕ್ಕೆ ಕರೆತಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada