ದೆಹಲಿ: ಬಿಜೆಪಿ ರಾಷ್ಟ್ರ ನಾಯಕರಾದ ಅಮಿತ್ ಶಾ, ನಡ್ಡಾ ಹಾಗೂ ಅರುಣ್ ಕುಮಾರ್ ಜೊತೆ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚರ್ಚೆ ನಡೆಸಿದ ವೇಳೆ ಸಂಪುಟ ವಿಸ್ತರಣೆಗಿಂತಲೂ ನಾಯಕತ್ವ ಬದಲಾವಣೆಯ ಬಗ್ಗೆ ಅಮಿತ್ ಶಾ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಚಿವ ಸಂಪುಟ ವಿಸ್ತರಣೆಗಿಂತಲೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ, ಯಡಿಯೂರಪ್ಪ ಒಂದು ವೇಳೆ ಸಿಎಂ ಸ್ಥಾನ ತ್ಯಜಿಸಿದರೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆ ಸಹ ನಡೆದಿರುವ ಮಾಹಿತಿ ದೊರೆತಿದೆ.
ಮೀಟಿಂಗ್ ವೇಳೆ, ಸಿಎಂ ಸ್ಥಾನದ ಬದಲಾಗಿ ಯಡಿಯೂರಪ್ಪಗೆ ದಕ್ಷಿಣ ಭಾರತದಲ್ಲೇ ಉನ್ನತ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ, BSY ತಮ್ಮ ನಿರ್ಧಾರ ತಿಳಿಸುವಂತೆ ವರಿಷ್ಠರು ಸೂಚಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇದಲ್ಲದೆ, ಸಂಸದ ಬಿ.ವೈ.ರಾಘವೇಂದ್ರಗೆ ಕೇಂದ್ರದಲ್ಲಿ ರಾಜ್ಯ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಮುಂದೆ ಪ್ರಸ್ತಾಪಿಸಿರುವ ಬಗ್ಗೆ ಮಾಹಿತಿ ಸಹ ಸಿಕ್ಕಿದೆ.ರಾಘವೇಂದ್ರ ಮೂಲಕ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಕರ್ನಾಟಕದ ಕೇಂದ್ರ ಸಚಿವ ಕೋಟಾವನ್ನು ಭರ್ತಿ ಮಾಡುವ ಲೆಕ್ಕಾಚಾರ ನಡೆದಿದೆ ಎಂದು ಹೇಳಲಾಗಿದೆ. ಮುಂದಿನ ವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಸಾಧ್ಯತೆ ಇರುವ ಬಗ್ಗೆಯೂ ಮಾಹಿತಿ ದೊರೆತಿದೆ.
ಮೀಟಿಂಗ್ ಸಂತೋಷ ತಂದಿದೆ.. ಸಚಿವ ಸಂಪುಟದ ಬಗ್ಗೆ ಆದಷ್ಟು ಬೇಗ ಗುಡ್ ನ್ಯೂಸ್ ಸಿಗಲಿದೆ -ಸಿಎಂ BSY
Published On - 5:21 pm, Sun, 10 January 21