ಬೆಂಗಳೂರು: ಮಕ್ಕಳಾಡುವ ಟೆಡ್ಡಿ ಬೇರ್ನಲ್ಲಿ ಮಾದಕ ವಸ್ತುವಿಟ್ಟು ಮಾರಾಟ ಮಾಡುತ್ತಿದ್ದ ಅಂತರ್ ರಾಜ್ಯ ಡ್ರಗ್ ಪೆಡ್ಲರ್ನನ್ನು ರಾಜಧಾನಿಯಲ್ಲಿ ಹಲಸೂರು ಪೊಲೀಸರು ಬಂಧಿಸಿದ್ದಾರೆ. ಸಕೀರ್ ಹುಸೇನ್(34) ಬಂಧಿತ ಡ್ರಗ್ ಪೆಡ್ಲರ್.
ಯಾರಿಗೂ ಅನುಮಾನ ಬರದಂತೆ ಡ್ರಗ್ಸ್ ಅನ್ನು ಗೊಂಬೆಗಳಲ್ಲಿಟ್ಟುಕೊಂಡು ರೈಲಿನಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಮಾದಕವಸ್ತು ಮಾರಾಟ ಮಾಡುತ್ತಿದ್ದ ಅಂತರ್ರಾಜ್ಯ ಡ್ರಗ್ ಪೆಡ್ಲರ್ ಹುಸೇನ್ ಅಸ್ಸಾಂ ಮೂಲದ ವ್ಯಕ್ತಿ. ಈತ ಬೆಂಗಳೂರಿನ ಕೊತ್ತನೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ.
ಮಕ್ಕಳಾಡುವ ಗೊಂಬೆಗಳನ್ನು ಬಳಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಸದ್ಯ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತನಿಂದ 28 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 2200 MDMA ಟ್ಯಾಬ್ಲೆಟ್ಸ್, 71 ಗ್ರಾಂ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಒಂದು MDMA ಮಾತ್ರೆ 3-4 ಸಾವಿರಕ್ಕೆ ಮಾರಾಟ ಮಾಡ್ತಿದ್ದ.
ನಟ ನಟಿಯರಿಗೆ ಡ್ರಗ್ಸ್ ಸಪ್ಲೇ ಮಾಡ್ತಿದ್ದ ಮತ್ತೊಬ್ಬ ಉದ್ಯಮಿ ಕಮ್ ಡ್ರಗ್ ಪೆಡ್ಲರ್ ಅರೆಸ್ಟ್