ಅಲ್ಪಾವಧಿಗೆ ರಿಟರ್ನ್ಸ್ ಬಯಸುವವರು ಷೇರುಗಳಲ್ಲಿ ಹಣ ಹೂಡಲೇಬಾರದು ಎನ್ನುತ್ತಾರೆ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್
ಅಲ್ಪಾವಧಿಯಲ್ಲಿ ಲಾಭ ಬಯಸುವರು ಸರ್ವಥಾ ಷೇರುಗಳಲ್ಲಿ ಹಣ ಹೂಡಬಾರದು ಅಂತ ಅವರು ಹೇಳುತ್ತಾರೆ. ತಾಳ್ಮೆಯುಳ್ಳವರು ಮಾತ್ರ ಇಲ್ಲಿ ಹಣ ಹೂಡುವ ಬಗ್ಗೆ ಯೋಚಿಸಬೇಕು.
ಷೇರು ಮಾರುಕಟ್ಟೆ ಅಂದರೆ ನಮ್ಮಲ್ಲಿ ಬೆಚ್ಚಿ ಬೀಳುವವರೆ ಜಾಸ್ತಿ. ಅದರ ಸಹವಾಸವೇ ಬೇಡಪ್ಪ, ಷೇರುಗಳಲ್ಲಿ ಹಾಕಿದ ಸಾವಿರಗಟ್ಟಲೆ ಹಣ ಮುಳುಗಿ ಹೋಯಿತು ಅಂತ ದಿನವಿಡೀ ಶಪಿಸುವವರನ್ನು ನೀವು ನೋಡಿರಬಹುದು. ಇನ್ನೂ ಕೆಲವರು ಹಣ ಹೂಡಿ, ಅದು ದ್ವಿಗುಣಗೊಂಡು ಯಾವಾಗ ತಮ್ಮ ಕೈಗೆ ಸಿಗುತ್ತದೆಯೋ ಅಂತ ಆಕಾಶದ ಕಡೆ ನೋಡುತ್ತಾರೆ. ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿ ಜಿ ಅವರು ಹೇಳುವ ಪ್ರಕಾರ ಷೇರುಗಳಲ್ಲಿ ಹಣ ತೊಡಗಿಸುವ ಬಗ್ಗೆ ನಮ್ಮಲ್ಲಿ ತಪ್ಪು ಕಲ್ಪನೆಗಳಿವೆ. ದುಡ್ಡು ಇನ್ವೆಸ್ಟ್ ಮಾಡಿದ ಒಂದು ವರ್ಷದಲ್ಲೇ ಹಣ ದ್ವಿಗುಣಗೊಳ್ಳಬೇಕು ಅಂತ ಅಂದುಕೊಂಡರೆ ಹಾಗೆ ಅಂದುಕೊಳ್ಳುವುದು ಮೂರ್ಖತನ ಎಂದು ಉದಾಹರಣೆಗಳ ಮೂಲಕ ಹೇಳುತ್ತಾರೆ.
ಅಲ್ಪಾವಧಿಯಲ್ಲಿ ಲಾಭ ಬಯಸುವರು ಸರ್ವಥಾ ಷೇರುಗಳಲ್ಲಿ ಹಣ ಹೂಡಬಾರದು ಅಂತ ಅವರು ಹೇಳುತ್ತಾರೆ. ತಾಳ್ಮೆಯುಳ್ಳವರು ಮಾತ್ರ ಇಲ್ಲಿ ಹಣ ಹೂಡುವ ಬಗ್ಗೆ ಯೋಚಿಸಬೇಕು. ದೀರ್ಘಾವಧಿ ಲಾಭದ ಬಗ್ಗೆ ಯೋಚಿಸುವವರು ಮಾತ್ರ ಷೇರು ಮಾರ್ಕೆಟ್ ಹಣ ಹೂಡುವುದು ಸರಿ ಎಂದು ಅವರು ಹೇಳುತ್ತಾರೆ.
ಯಾವುದೇ ಬ್ಯಾಂಕ್ನಲ್ಲಿ ನಾವು ಫಿಕ್ಸೆಡ್ ಡಿಪಾಸಿಟ್ ಮಾಡಿದರೂ ಅದು ಡಬಲ್ ಆಗಲು 10 ವರ್ಷ ಕಾಯಬೇಕು ಎಂದು ಡಾ ರಾವ್ ಹೇಳುತ್ತಾರೆ. ಅಂದರೆ, ನಾವು 10,000 ರೂ. ಗಳನ್ನು ಬ್ಯಾಂಕ್ನಲ್ಲಿ ಡಿಪಾಸಿಟ್ ಮಾಡಿದರೆ, ದಶಕದ ನಂತರ ಅದು 20,000 ರೂ. ಆಗುತ್ತದೆ.
ಅದರೆ, ಷೇರು ಮಾರುಕಟ್ಟೆಯಲ್ಲಿ ಹೂಡಿದ ಯಾವ ಮಟ್ಟಿಗೆ ಹೆಚ್ಚುತ್ತಾ ಹೋಗುತ್ತದೆ ಅನ್ನೋದನ್ನು ಡಾ ರಾವ್ ಉದಾಹರಣೆಗಳ ಸಮೇತ ವಿವರಿಸಿದ್ದಾರೆ.
ಅಮರಾನ್ ಬ್ಯಾಟರಿ ಕಂಪನಿಯ 100 ಷೇರುಗಳನ್ನು ನೀವು 10 ವರ್ಷಗಳ ಹಿಂದೆ 23,400 ರೂ ಕೊಟ್ಟು ಖರೀದಿಸಿದ್ದರೆ ಇಂದು ನಿಮಗೆ ರೂ. 1.50 ಲಕ್ಷ ರಿಟರ್ನ್ಸ್ ನೀಡುತ್ತಿತ್ತು. ಅಪೊಲ್ಲೋ ಹಾಸ್ಪಿಟಲ್ಸ್ 100 ಷೇರುಗಳಲ್ಲಿ ಹತ್ತು ವರ್ಷ ಹಿಂದೆ ಹೂಡಿದ್ದ ರೂ. 52,000 ಇವತ್ತು ರೂ. 4.80 ಲಕ್ಷ ಆಗಿರುತಿತ್ತು. ಬಾಟಾ ಕಂಪನಿಯಲ್ಲಿ ಹೂಡಿದ ರೂ. 66,000 ಹಣ ಇಂದು ರೂ. 3.50 ಲಕ್ಷ ಆಗಿರುತಿತ್ತು.
ಕರ್ನಾಟಕದ ಕ್ಯಾನ್ಫಿನೋಸ್ ನಲ್ಲಿ ಹೂಡಿದ ರೂ. 10,000 ಇವತ್ತಿಗೆ ರೂ. 2.5 ಲಕ್ಷ ಆಗಿರೋದು. ಸಿಯೆಟ್ ಟೈರ್ ಕಂಪನಿ ಹೂಡಿದ ರೂ. 10,000 ಹಣ ಇವತ್ತು ರೂ. 1.20 ಲಕ್ಷ ಆಗಿರುತಿತ್ತು. ಹಾಗೆಯೇ, ಸಿಪ್ಲಾ ಔಷಧಿ ಕಂಪನಿಯಲ್ಲಿ ಅದೇ 100 ಷೇರುಗಳನ್ನು ರೂ. 30,000 ಕೊಟ್ಟು ಖರೀದಿಸಿದ್ದರೆ ಅದು ಇವತ್ತು ನಿಮಗೆ ರೂ 1.05 ಲಕ್ಷ ಹಣ ದುಡಿದು ಕೊಟ್ಟಿರುತಿತ್ತು ಎಂದು ರಾವ್ ಹೇಳುತ್ತಾರೆ.
ಇದನ್ನೂ ಓದಿ: ತನ್ನದೇ ಭಾಷೆಯಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ ರಾಯನ್ ರಾಜ್ ಸರ್ಜಾ; ವಿಡಿಯೋ ನೋಡಿ