ತನ್ನದೇ ಭಾಷೆಯಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ ರಾಯನ್ ರಾಜ್ ಸರ್ಜಾ; ವಿಡಿಯೋ ನೋಡಿ

Raayan Raj Sarja: ರಾಯನ್ ರಾಜ್ ಸರ್ಜಾಗೆ 11 ತಿಂಗಳು ಪೂರೈಸಿದ ಸಂದರ್ಭದಲ್ಲಿ ವಿಶೇಷ ವಿಡಿಯೋವೊಂದನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ.

ತನ್ನದೇ ಭಾಷೆಯಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ ರಾಯನ್ ರಾಜ್ ಸರ್ಜಾ; ವಿಡಿಯೋ ನೋಡಿ
ಮೇಘನಾ ಸರ್ಜಾ, ರಾಯನ್ ರಾಜ್ ಸರ್ಜಾ

ನಟಿ ಮೇಘನಾ ರಾಜ್ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. ಜೊತೆಗೆ ಪುತ್ರ ರಾಯನ್ ತುಂಟಾಟಗಳನ್ನು, ಮುದ್ದು ಚಿತ್ರಗಳನ್ನೂ ಅವರು ಹಂಚಿಕೊಳ್ಳುತ್ತಿರುತ್ತಾರೆ. ಪ್ರಸ್ತುತ ಅವರು ಒಂದು ವಿಶೇಷ ಸಂದರ್ಭಕ್ಕೆ ಶುಭ ಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸುವ ರೂಪದಲ್ಲಿ ಸುಂದರವಾದ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ನಟ ದಿ.ಚಿರಂಜೀವಿ ಸರ್ಜಾ ಹಾಗೂ ಮೇಘನಾ ಪುತ್ರ ರಾಯನ್ ರಾಜ್ ಸರ್ಜಾಗೆ 11 ತಿಂಗಳು ತುಂಬಿದೆ. ಈ ವಿಶೇಷ ಸಂದರ್ಭದಂದು ಚಿರು ಹಾಗೂ ಮೇಘನಾ ಅಭಿಮಾನಿ ಬಳಗಗಳು ವಿಶೇಷ ಹಾರೈಕೆ ಹಾಗೂ ಚಿತ್ರಗಳ ಮುಖಾಂತರ ಸಂಭ್ರಮಾಚರಣೆಯನ್ನು ಆಚರಿಸಿದ್ದರು. ಇದೀಗ ಅವರೆಲ್ಲರ ಖುಷಿಗೆ ಮೇಘನಾ ರಾಜ್ ವಿಶೇಷ ವಿಡಿಯೋ ತುಣುಕಿನ ಮುಖಾಂತರ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ರಾಯನ್ ರಾಜ್ ಸರ್ಜಾ ಮಾತನಾಡಲು ಯತ್ನಿಸುತ್ತಿರುವ, ನಗುತ್ತಿರುವ ಮುದ್ದಾದ ವಿಡಿಯೋವೊಂದನ್ನು ಹಂಚಿಕೊಂಡಿರುವ ಮೇಘನಾ, ಇದರ ಮುಖಾಂತರ ರಾಯನ್ ತನ್ನದೇ ಭಾಷೆಯಲ್ಲಿ ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದಾನೆ. ನಮ್ಮೊಂದಿಗೆ ಪ್ರತಿ ತಿಂಗಳಿನ ಖುಷಿಯನ್ನು ಆಚರಿಸುತ್ತಿರುವ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ವಿಡಿಯೋವನ್ನು ವೀಕ್ಷಿಸಿದ ಅಭಿಮಾನಿಗಳು ರಾಯನ್​ ನಗುವಿಗೆ ಫಿದಾ ಆಗಿದ್ದಾರೆ. ಮತ್ತು ಆತನಿಗೆ ಶುಭ ಹಾರೈಸಿದ್ದಾರೆ.

ಮೇಘನಾ ಹಂಚಿಕೊಂಡ ವಿಡಿಯೋ:

 

View this post on Instagram

 

A post shared by Meghana Raj Sarja (@megsraj)

ರಾಯನ್ ರಾಜ್ 11ನೇ ತಿಂಗಳ ಸಂಭ್ರಮಕ್ಕೆ ಅಭಿಮಾನಿ ಬಳಗಗಳು ಸೃಜನಾತ್ಮಕವಾಗಿ ಪೋಸ್ಟರ್​ಗಳನ್ನು ರಚಿಸಿ ಶುಭ  ಕೋರಿದ್ದವು. ಇದು ಎಲ್ಲರ ಗಮನ ಸೆಳೆದಿತ್ತು. ಸ್ವತಃ ಮೇಘನಾ ಇದನ್ನು ಸ್ಟೋರಿಯಲ್ಲಿ ಹಂಚಿಕೊಂಡು ಧನ್ಯವಾದ ಸಲ್ಲಿಸಿದ್ದರು.

ಅಭಿಮಾನಿಗಳು ಹಂಚಿಕೊಂಡ ಪೋಸ್ಟ್:

ಚಿರು ಹಾಗೂ ಮೇಘನಾ ಪುತ್ರನಿಗೆ ಇತ್ತೀಚೆಗಷ್ಟೇ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿತ್ತು. ಅದಕ್ಕೂ ಮುನ್ನ ಮಗುವನ್ನು ಹಲವು ಹೆಸರಿನಿಂದ ಕರೆಯಲಾಗುತ್ತಿತ್ತು. ಅಭಿಮಾನಿಗಳು ಜ್ಯೂ.ಚಿರು ಎಂದು ಕರೆಯುತ್ತಿದ್ದರೆ, ತಾತ ಸುಂದರ್ ರಾಜ್ ಚಿಂಟು ಎಂದು ಕರೆಯುತ್ತಿದ್ದರು.

ಇದನ್ನೂ ಓದಿ:

ಡಿವೋರ್ಸ್​ ಪಡೆದರೆ ಸಮಂತಾಗೆ ಸಿಗುವ ಹಣ ಎಷ್ಟು? ಅಕ್ಕಿನೇನಿ ಸೊಸೆಯ ಬಹುಕೋಟಿ ಕಹಾನಿ

ಹಾಟ್​ ಫೋಟೋಗಳ ಮೂಲಕ ಗಮನ ಸೆಳೆದ ಬರ್ತ್​ಡೇ ಗರ್ಲ್​ ಶಾಲಿನಿ ಪಾಂಡೆ

‘ಅವುಗಳಿಂದ ಬಹಳ ನೋವಾಗಿದೆ’; ವೈಯಕ್ತಿಕ ಜೀವನದ ಗಾಸಿಪ್​ಗಳ ಕುರಿತು ಕೊನೆಗೂ ಮೌನ ಮುರಿದ ನಾಗ ಚೈತನ್ಯ

(Meghana Raj Sarja shares Raayan Raj Sarja video and says thanks to fans for 11 month celebration)

Read Full Article

Click on your DTH Provider to Add TV9 Kannada