ದೆಹಲಿ: ಮುಂದಿನ ಐಪಿಎಲ್ 14ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ಸಂಘಟಕರು ಘೋಷಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ.
ಫೆಬ್ರವರಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ನಡೆಯಲಿದ್ದು, ಮೊದಲ ಎರಡು ಟೆಸ್ಟ್ ಪಂದ್ಯಾವಳಿ ಬಳಿಕ ಒಂದು ದಿನದ ಹರಾಜು ಪ್ರಕ್ರಿಯೆ ನಡೆಯಲಿದೆ. ಫೆ. 5ರಿಂದ ಸರಣಿ ಪ್ರಾರಂಭವಾಗಲಿದ್ದು, ಫೆ. 13ರಿಂದ 17ರವರೆಗೆ ಎರಡನೇ ಟೆಸ್ಟ್ ನಡೆಯಲಿದೆ. ಅದಾದ ಮೇಲೆ ಆಟಗಾರರ ಹರಾಜು ನಡೆಯಲಿದೆ.
ಇನ್ನು ಈ ಬಾರಿ ಐಪಿಎಲ್ನ್ನು ಭಾರತದಲ್ಲಿ ನಡೆಸಬೇಕೋ.. ವಿದೇಶದಲ್ಲಿ ನಡೆಸಬೇಕೋ ಎಂಬುದನ್ನು ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ. ಆದಷ್ಟು ಪ್ರಯತ್ನಿಸಿ ಭಾರತದಲ್ಲಿಯೇ ನಡೆಸಲು ಪ್ರಯತ್ನ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರೂ, ಅದಿನ್ನೂ ನಿಶ್ಚಿತವಾಗಿಲ್ಲ. 2020ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ನಿಂದ-ನವೆಂಬರ್ವರೆಗೆ ಯುಎಇಯಲ್ಲಿ ನಡೆದಿತ್ತು.
Published On - 3:38 pm, Wed, 27 January 21