ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇನೆ – ಉದ್ಧಟತನ ಮಾತುಗಳನ್ನು ಉದುರಿಸಿದ ಉದ್ಧವ ಠಾಕ್ರೆ

ಬೆಳಗಾವಿಯಲ್ಲಿದ್ದಿದ್ದು ಎಂಇಎಸ್ ತಾಕತ್ ಅಲ್ಲ, ಮರಾಠಿಗರ ತಾಕತ್ತು. ಮೊದಲು ಬೆಳಗಾವಿಯಲ್ಲಿ ಐದಾರು ಶಾಸಕರು ಆಯ್ಕೆ ಆಗಿ ಬರುತ್ತಿದ್ದರು. ನಿಮ್ಮ ಕಾಲಿನ ಮೇಲೆ ನೀವೆ ಕಲ್ಲು ಬೀಳಿಸಿಕೊಂಡಿದ್ದೀರಿ ಎಂದು ಹೇಳುವ ಮೂಲಕ ಬೆಳಗಾವಿ ಎಂಇಎಸ್ ನಾಯಕರನ್ನುದ್ದೇಶಿಸಿ ಮಾತಾಡಿ ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನು ಉದ್ಧವ್ ಠಾಕ್ರೆ ಮಾಡಿದ್ದಾರೆ.

ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇನೆ - ಉದ್ಧಟತನ ಮಾತುಗಳನ್ನು ಉದುರಿಸಿದ ಉದ್ಧವ ಠಾಕ್ರೆ
ಉದ್ಧವ್ ಠಾಕ್ರೆ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Jan 27, 2021 | 2:44 PM

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಉದ್ಧಟತನ ತೋರಿದ್ದಾರೆ. ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ. ಮರಾಠ ಭಾಷಿಕರ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ. ಅಲ್ಲಿಯವರೆಗೂ ನಾನು ಸುಮ್ಮನೆ ಕೂರುವುದಿಲ್ಲವೆಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ ನುಡಿದಿದ್ದಾರೆ.

ಇಂದು ಮಹಾರಾಷ್ಟ್ರ ಕರ್ನಾಟಕ ಸೀಮಾ ವಿವಾದ ಸಂಘರ್ಷ ಅನಿ ಸಂಕಲ್ಪ ಹೆಸರಿನ ಮರಾಠಿ ಪುಸ್ತಕವನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಂಬೈನ ಮಲಬಾರ್ ಹಿಲ್‌ನಲ್ಲಿರುವ ಸಹ್ಯಾದ್ರಿ ರಾಜ್ಯ ಅತಿಥಿ ಗೃಹದಲ್ಲಿ ಬಿಡುಗಡೆ ಮಾಡಿದ್ರು. ಈ ಪುಸ್ತಕವು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕುರಿತು ಬರದಿರುವ ಪುಸ್ತಕ. ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ. ಮರಾಠ ಭಾಷಿಕರ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ. ಅಲ್ಲಿಯವರೆಗೂ ನಾನು ಸುಮ್ಮನೆ ಕೂರುವುದಿಲ್ಲವೆಂದು ಉದ್ಧಟತನ ತೋರಿದ್ದಾರೆ.

ಮತ್ತೆ ಮಾತನಾಡಿದ ಠಾಕ್ರೆ.. ಬೆಳಗಾವಿಯನ್ನು ಕರ್ನಾಟಕ ವ್ಯಾಪ್ತಿ ಮಹಾರಾಷ್ಟ್ರ ಎಂದು ಮತ್ತೆ ಪುನರುಚ್ಚರಿಸಿದ್ರು. ನಾವು ನ್ಯಾಯಾಂಗ ನಿಂದನೆ ಮಾಡ್ತಿಲ್ಲ, ಕರ್ನಾಟಕ ಸರ್ಕಾರ ಮಾಡ್ತಿದೆ. ಬೆಳಗಾವನ್ನು ‘ಬೆಳಗಾವಿ’ ಎಂದು ಮರುನಾಮಕರಣ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿಸಿ ಅಧಿವೇಶನ ನಡೆಸುತ್ತಿದ್ದಾರೆ. ಬೆಳಗಾವಿ ಎರಡನೇ ರಾಜಧಾನಿ ಅಂತಾ ಘೋಷಿಸಿದ್ದಾರೆ ಇದು ನ್ಯಾಯಾಂಗ ನಿಂದನೆ ಅಲ್ವಾ? ಕರ್ನಾಟಕ ಸರ್ಕಾರ ಕಾನೂನು ಪಾಲನೆ ಮಾಡ್ತಿಲ್ಲ. ಕರ್ನಾಟಕ ಸರ್ಕಾರ ಮರಾಠಿಗರ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿದೆ. ಅಲ್ಲಿಯ ಮರಾಠಿಗರು ಮರಾಠಿ ಶಾಲೆ ಸ್ಥಾಪಿಸಿ ಅಂತಾರೆ ಆದ್ರೆ ಅದರ ಅವಶ್ಯಕತೆ ಇಲ್ಲ. ಬೆಳಗಾಂನ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಯೇ ತೀರುತ್ತೇವೆ ಎಂದು ಬಹಿರಂಗವಾಗಿ ವಿವಾದ ಹುಟ್ಟಿಸುವಂತ ಮಾತುಗಳನ್ನು ಠಾಕ್ರೆಯಾಡಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಒಡೆದಿದ್ದು ಹೇಗೆ? ಬೆಳಗಾವಿಯಲ್ಲಿದ್ದಿದ್ದು ಎಂಇಎಸ್ ತಾಕತ್ ಅಲ್ಲ, ಮರಾಠಿಗರ ತಾಕತ್ತು. ಮೊದಲು ಬೆಳಗಾವಿಯಲ್ಲಿ ಐದಾರು ಶಾಸಕರು ಆಯ್ಕೆ ಆಗಿ ಬರುತ್ತಿದ್ದರು. ನಿಮ್ಮ ಕಾಲಿನ ಮೇಲೆ ನೀವೆ ಕಲ್ಲು ಬೀಳಿಸಿಕೊಂಡಿದ್ದೀರಿ ಎಂದು ಹೇಳುವ ಮೂಲಕ ಬೆಳಗಾವಿ ಎಂಇಎಸ್ ನಾಯಕರನ್ನುದ್ದೇಶಿಸಿ ಮಾತಾಡಿ ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನು ಉದ್ಧವ್ ಠಾಕ್ರೆ ಮಾಡಿದ್ದಾರೆ. ಇನ್ನು ಮರಾಠಿ ಅಸ್ಮಿತೆ, ಮರಾಠಿಗರ ತಾಖತ್ ತೋರಿಸುವ ಕಾಲ ಬಂದಿದೆ. ಭಾಷಾವಾರು ಪ್ರಾಂತ್ಯ ರಚನೆ ವೇಳೆ ಅನ್ಯಾಯವಾಗಿದೆ. ಕನ್ನಡಿಗರು ಮಾಡುತ್ತಿರುವ ದೌರ್ಜನ್ಯ ನಾವು ಸಹಿಸಲ್ಲ. ಮರಾಠಿಗರ ಮೇಲೆ ದೌರ್ಜನ್ಯ ಆದ್ರೆ ನಾವು‌ ಗಲಾಟೆ ಮಾಡೋರೆ. ನೀವು ಎಲ್ಲರೂ ಒಗ್ಗೂಡಿ ಹೋರಾಡಿ ಬೆಳಗಾವಿಯಲ್ಲಿ ಮರಾಠಿ ಭಾಷಿಕ ಶಾಸಕ ಮತ್ತೆ ಆಯ್ಕೆ ಆಗಿ ಬರಬೇಕು. ಕರ್ನಾಟಕ ಸರ್ಕಾರ ಬೆನ್ನಿಗೆ ಚೂರಿ ಹಾಕುತ್ತಿದೆ ತಿಳಿದುಕೊಳ್ಳಿ ಎಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಮತ್ತೆ ಉದ್ಧಟತನ ಮೆರೆದ ಮಹಾರಾಷ್ಟ್ರ.. ಗಡಿ ವಿವಾದ ಕುರಿತು ಪುಸ್ತಕ ಬಿಡುಗಡೆ

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ