ಮರೀನಾ ಬೀಚ್ನಲ್ಲಿ ಜಯಲಲಿತಾ ಸ್ಮಾರಕ ಉದ್ಘಾಟನೆ; ನಾಳೆಯಿಂದ ಸಾರ್ವಜನಿಕ ಪ್ರವೇಶಕ್ಕೆ ವೇದ ನಿಲಯಂ ಮುಕ್ತ
ಜಯಲಲಿತಾರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಅವರ ಸೋದರಳಿಯ ಜೆ.ದೀಪಕ್ ಹಾಗೂ ಜೆ.ದೀಪಾ ವಿರೋಧ ವ್ಯಕ್ತಪಡಿಸಿದ್ದರು. ಹಾಗೇ ಮದ್ರಾಸ್ ಹೈಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಿದ್ದರು.

ಚೆನ್ನೈ: ಇಲ್ಲಿನ ಮರೀನಾ ಬೀಚ್ನಲ್ಲಿ ನಿರ್ಮಿಸಲಾದ ಜಯಲಲಿತಾ ಸ್ಮಾರಕವವನ್ನು ಇಂದು ಮುಖ್ಯಮಂತ್ರಿ ಇ.ಕೆ.ಪಳಿನಿಸ್ವಾಮಿ ಉದ್ಘಾಟಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಓ. ಪನೀರಸೆಲ್ವಂ ಹಾಜರಿದ್ದರು. ನಂತರ ಗಣ್ಯರು ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಮರೀನಾ ಬೀಚ್ನಲ್ಲಿ 50,000 ಚದರ ಅಡಿ ವಿಸ್ತೀಣದಲ್ಲಿ 79.75 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಇದು ಫೀನಿಕ್ಸ್ ಆಕಾರದಲ್ಲಿದೆ. ಹಾಗೇ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ 35ವರ್ಷ ವಾಸವಾಗಿದ್ದ ನಿವಾಸ ವೇದ ನಿಲಯಂ ಸ್ಮಾರಕವಾಗಿ ಪರಿವರ್ತನೆಯಾಗಿದ್ದು, ನಾಳೆಯಿಂದ (ಜ. 28) ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.
ಜಯಲಲಿತಾರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಅವರ ಸೋದರಳಿಯ ಜೆ.ದೀಪಕ್ ಹಾಗೂ ಜೆ.ದೀಪಾ ವಿರೋಧ ವ್ಯಕ್ತಪಡಿಸಿದ್ದರು. ಹಾಗೇ ಮದ್ರಾಸ್ ಹೈಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಇಂದು ಅದರ ಅಂತಿಮ ವಿಚಾರಣೆ ನಡೆಯಲಿದೆ. ಕಳೆದ ವರ್ಷ ರಾಜ್ಯ ಸರ್ಕಾರ 67.9 ಕೋಟಿ ರೂ. ಪರಿಹಾರ ನೀಡಿ, ವೇದ ನಿಲಯಂನ್ನು ತನ್ನ ಸ್ವಾಧೀನ ಪಡಿಸಿಕೊಂಡಿತ್ತು.
ಚೆನ್ನೈಗೆ ಮರಳಿದ ಬಳಿಕ ಎಲ್ಲಿಗೆ ಹೋಗ್ತಾರೆ ಶಶಿಕಲಾ? ಜಯಲಲಿತಾ ನಿವಾಸಕ್ಕಂತೂ ಕಾಲಿಡುವಂತಿಲ್ಲ!



