ಇದು ರೈತರ ಆಂದೋಲನ, ರೈತರ ಆಂದೋಲನವಾಗಿಯೇ ಉಳಿಯುತ್ತದೆ: ಮತ್ತೆ ಗುಡುಗಿದ ರಾಕೇಶ್ ಟಿಕಾಯತ್

ಕೆಂಪು ಕೋಟೆಯಲ್ಲಿ ಹಿಂಸಾಚಾರ ಮತ್ತು ಧ್ವಜ ಹಾರಿಸಿದ್ದು ತಪ್ಪು. ಹಿಂಸಾಚಾರದಲ್ಲಿ ಭಾಗಿಯಾದವರು ತಮ್ಮ ಕಾರ್ಯಗಳಿಗೆ ದಂಡ ತೆರಲೆಬೇಕು ಎಂದು ಟಿಕಾಯತ್ ಮಾತನಾಡಿದ್ದಾರೆ.

  • TV9 Web Team
  • Published On - 18:21 PM, 27 Jan 2021
ಇದು ರೈತರ ಆಂದೋಲನ, ರೈತರ ಆಂದೋಲನವಾಗಿಯೇ ಉಳಿಯುತ್ತದೆ: ಮತ್ತೆ ಗುಡುಗಿದ ರಾಕೇಶ್ ಟಿಕಾಯತ್
ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ (ಸಂಗ್ರಹ ಚಿತ್ರ)

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಟ್ರಾಕ್ಟರ್ ಮೆರವಣಿಗೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಭಾರತೀಯ ಕಿಸಾನ್ ಯೂನಿಯನ್(BKU) ನಾಯಕ ರಾಕೇಶ್ ಟಿಕಾಯತ್ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಾಕ್ಟರ್ ಚಳುವಳಿಯಲ್ಲಿ ಅನಕ್ಷರಸ್ಥರು ಟ್ರಾಕ್ಟರ್​ಗಳನ್ನು ಓಡಿಸಿದ್ದರು. ಅವರಿಗೆ ರೂಪಿಸಿಕೊಂಡಿದ್ದ ಮಾರ್ಗಗಳು ಗೊತ್ತಿರಲಿಲ್ಲ. ಪೊಲೀಸರು ದೆಹಲಿ ಕಡೆಗೆ ಹೋಗುವ ಮಾರ್ಗ ತಿಳಿಸಿದ್ದರು. ಹೀಗಾಗಿ ರೈತರು ದೆಹಲಿಗೆ ಹೋಗಿ ಮನೆಗೆ ವಾಪಸಾಗಿದ್ದಾರೆ ಎಂದು ಹೇಳಿದ್ದಾರೆ.

ಕೆಲ ರೈತರು ತಿಳಿಯದೆ ಕೆಂಪುಕೋಟೆ ಕಡೆ ಹೋಗಿದ್ದಾರೆ. ಆದರೆ, ಕೆಂಪು ಕೋಟೆಯಲ್ಲಿ ಹಿಂಸಾಚಾರ ಮತ್ತು ಧ್ವಜ ಹಾರಿಸಿದ್ದು ತಪ್ಪು. ಹಿಂಸಾಚಾರದಲ್ಲಿ ಭಾಗಿಯಾದವರು ತಮ್ಮ ಕಾರ್ಯಗಳಿಗೆ ದಂಡ ತೆರಲೆಬೇಕು ಎಂದು ಟಿಕಾಯತ್ ಮಾತನಾಡಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ನಿರ್ದಿಷ್ಟ ಸಮುದಾಯದ ವಿರುದ್ಧ ಪಿತೂರಿ ನಡೆಯುತ್ತಿದೆ. ಕಳೆದ 2 ತಿಂಗಳಿಂದ ಪಿತೂರಿ ನಡೆಯುತ್ತಿದೆ ಎಂದೂ ಚಳುವಳಿ ಹಾದಿ ತಪ್ಪಿದ ಬಗ್ಗೆ ಅವರು ಆರೋಪ ಮಾಡಿದ್ದಾರೆ.

ಇದು ಸಿಖ್ಖರ ಚಳುವಳಿಯಲ್ಲ, ರೈತರ ಚಳುವಳಿ
ಕೆಂಪುಕೋಟೆ ಮೇಲೆ ಸಿಖ್ ಧರ್ಮ ಧ್ವಜ ಹಾರಿಸಿದ ಬಗ್ಗೆ ಕೂಡ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದಾರೆ. ಕೆಂಪುಕೋಟೆ ಮೇಲೆ ಸಿಖ್ ಧರ್ಮ ಧ್ವಜ ಹಾರಿಸಿದ್ದು ತಪ್ಪು. ಬ್ಯಾರಿಕೇಡ್ ಮುರಿದವರು ಚಳವಳಿಯಲ್ಲಿ ಭಾಗಿಯಾಗಲ್ಲ. ಅವರು ತಾವು ಮಾಡಿದ ತಪ್ಪಿಗೆ ದಂಡ ತೆರಲೇಬೇಕು ಎಂದು ತಿಳಿಸಿದ್ದಾರೆ. ಜೊತೆಗೆ, ಕೆಂಪುಕೋಟೆಯ ಮೇಲೆ ಬಾವುಟ ಹಾರಿಸಿದ ದೀಪ್ ಸಿಧು ಸಿಖ್ ಅಲ್ಲ. ಆತ ಬಿಜೆಪಿಯ ಕಾರ್ಯಕರ್ತ ಎಂದು ಟಿಕಾಯತ್ ಹೇಳಿದ್ದಾರೆ. ದೀಪ್ ಸಿಧು ಪ್ರಧಾನಿ ಮೋದಿ ಜತೆ ಇರುವ ಭಾವಚಿತ್ರವಿದೆ. ಇದು ಕೇವಲ ರೈತರ ಆಂದೋಲನ, ರೈತರ ಆಂದೋಲನವಾಗಿಯೇ ಉಳಿಯುತ್ತದೆ ಎಂದು ಟಿಕಾಯತ್ ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ಟ್ರ್ಯಾಕ್ಟರ್ ಚಳುವಳಿ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ, ರೈತ ಸಂಘಟನೆಗಳ ಐವರು ಮುಖಂಡರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ರೈತ ಸಂಘಟನೆಗಳ ಮುಖಂಡರಾದ ಡಾ.ದರ್ಶನ್​ ಪಾಲ್, ರಾಕೇಶ್ ಟಿಕಾಯತ್, ಜೋಗಿಂದರ್, ಬೂಟಾ ಸಿಂಗ್ ಹಾಗೂ ರಾಜೇಂದ್ರ ಸಿಂಗ್ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.