ಬೆಂಗಳೂರಿಗೆ ಕುತ್ತು ತರುತ್ತಾ ಪಾದರಾಯನಪುರ ಗೂಂಡಾಗಿರಿ ಘಟನೆ?

|

Updated on: Apr 20, 2020 | 9:31 AM

ಬೆಂಗಳೂರು: ಪಾದರಾಯನಪುರದಲ್ಲಿ ತಡರಾತ್ರಿ ಸಂಘಟಿತ ಗೂಂಡಾಗಿರಿ ನಡೆದಿರುವುದು ಬೆಂಗಳೂರಿಗೆ ಕುತ್ತು ತರುತ್ತಾ? ಈ ಘಟನೆಯಿಂದ ಕೊರೊನಾ ವೈರಸ್ 3ನೇ ಹಂತಕ್ಕೆ ತಲುಪುತ್ತಾ? ಸಮುದಾಯಕ್ಕೆ ಮಹಾಮಾರಿ ಹರಡುತ್ತಾ? ಎಂಬ ಆತಂಕ ಕಾಡುತ್ತಿದೆ. ಏಕೆಂದ್ರೆ ನಿನ್ನೆ ನಡೆದ ಗೂಂಡಾಗಿರಿಯಲ್ಲಿ ‌200ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ರು. ಗಲಾಟೆ ವೇಳೆ ಯಾವುದೇ ಸಮಾಜಿಕ ಅಂತರವಿಲ್ಲ, ಮಾಸ್ಕ್ ಸಹ ಯಾರೂ ಬಳಕೆ ಮಾಡಿಲ್ಲ. ಅಲ್ಲದೆ ಗಲಾಟೆಯಲ್ಲಿ ಕೊರೊನಾ ಪಾಸಿಟಿವ್ ಸಂಪರ್ಕ ಹೊಂದಿದವರೂ ಭಾಗಿಯಾಗಿದ್ರು. ದ್ವಿತೀಯ ಸಂಪರ್ಕ ಹೊಂದಿದವರೂ ಇದ್ರು. ಹಾಗಾಗಿ ಒಬ್ಬರಿಗೆ ಕೊರೊನಾ ಸೋಂಕು […]

ಬೆಂಗಳೂರಿಗೆ ಕುತ್ತು ತರುತ್ತಾ ಪಾದರಾಯನಪುರ ಗೂಂಡಾಗಿರಿ ಘಟನೆ?
Follow us on

ಬೆಂಗಳೂರು: ಪಾದರಾಯನಪುರದಲ್ಲಿ ತಡರಾತ್ರಿ ಸಂಘಟಿತ ಗೂಂಡಾಗಿರಿ ನಡೆದಿರುವುದು ಬೆಂಗಳೂರಿಗೆ ಕುತ್ತು ತರುತ್ತಾ? ಈ ಘಟನೆಯಿಂದ ಕೊರೊನಾ ವೈರಸ್ 3ನೇ ಹಂತಕ್ಕೆ ತಲುಪುತ್ತಾ? ಸಮುದಾಯಕ್ಕೆ ಮಹಾಮಾರಿ ಹರಡುತ್ತಾ? ಎಂಬ ಆತಂಕ ಕಾಡುತ್ತಿದೆ.

ಏಕೆಂದ್ರೆ ನಿನ್ನೆ ನಡೆದ ಗೂಂಡಾಗಿರಿಯಲ್ಲಿ ‌200ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ರು. ಗಲಾಟೆ ವೇಳೆ ಯಾವುದೇ ಸಮಾಜಿಕ ಅಂತರವಿಲ್ಲ, ಮಾಸ್ಕ್ ಸಹ ಯಾರೂ ಬಳಕೆ ಮಾಡಿಲ್ಲ. ಅಲ್ಲದೆ ಗಲಾಟೆಯಲ್ಲಿ ಕೊರೊನಾ ಪಾಸಿಟಿವ್ ಸಂಪರ್ಕ ಹೊಂದಿದವರೂ ಭಾಗಿಯಾಗಿದ್ರು. ದ್ವಿತೀಯ ಸಂಪರ್ಕ ಹೊಂದಿದವರೂ ಇದ್ರು. ಹಾಗಾಗಿ ಒಬ್ಬರಿಗೆ ಕೊರೊನಾ ಸೋಂಕು ಇದ್ರೂ ಅದು 200ಕ್ಕೂ ಹೆಚ್ಚು ಜನ್ರಿಗೆ ಕೊರೊನಾ ಅಟ್ಯಾಕ್ ಆಗುವ ಸಾಧ್ಯತೆ ಇದೆ.

ಹಾಗಾಗಿ ಆ 200 ಜನರಿಂದ ಸಮುದಾಯಕ್ಕೆ ಕೊರೊನಾ ಸೋಂಕು ಹಬ್ಬುವ ಸಾಧ್ಯತೆ ಇದೆ. ಕೊಂಚ ಎಡವಟ್ಟು ಆದ್ರೂ ಸಿಲಿಕಾನ್ ಸಿಟಿಯಲ್ಲಿ 200ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಹೀಗಾಗಿ ಪಾದರಾಯನಪುರದಲ್ಲಿ ನಡೆದ ಘಟನೆ ಬೆಂಗಳೂರಿಗರಿಗೆ ಆತಂಕಕ್ಕೆ ಕಾರಣವಾಗಿದೆ.

Published On - 9:27 am, Mon, 20 April 20