ಕೃಷ್ಣ ಮಠದ 250 ನೇ ಪರ್ಯಾಯ ಸಂಪನ್ನ: ಪೀಠಾಧಿಪತಿಯಾಗಿ ಅದಮಾರು ಕಿರಿಯ ಶ್ರೀ ಪೀಠಾರೋಹಣ

|

Updated on: Jan 18, 2020 | 9:18 AM

ಉಡುಪಿ: ಕಣ್ಣಿಗೆ ಹಬ್ಬ ನೀಡುತ್ತಿರುವ ಜಾನಪದ ಕಲಾ ತಂಡಗಳ ಮೆರಗು. ಮನಸ್ಸಿಗೆ ಹಿತ ನೀಡುತ್ತಿರುವ ಬೆಂಕಿ ಆಟ. ಉತ್ತಮ ಸಂದೇಶ ಸಾರುತ್ತಿರುವ ಸ್ತಬ್ಧ ಚಿತ್ರಗಳು. ಸಾಲುಗಟ್ಟಿ ಕುಳಿತ ಯತಿಗಳು. ಅಲಂಕಾರಿಕ ವಸ್ತುಗಳಿಂದ ನವವಧುವಿನಂತೆ ಶೃಂಗಾರಗೊಂಡಿರುವ ಕೃಷ್ಣ ಮಠ. ಕೃಷ್ಣನೂರಿನ ಅದಮಾರು ಪರ್ಯಾಯ ಸಂಭ್ರಮದಲ್ಲಿ ಕಿಕ್ಕಿರಿದು ಸೇರಿದ ಜನ ಸಾಗರ. ಉಡುಪಿಯ ಕೃಷ್ಣಮಠದ ನೂತನ ಪರ್ಯಾಯ ಪೀಠಾಧಿಪತಿಯಾಗಿ ಅದಮಾರು ಕಿರಿಯ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಿದರು. ತಡರಾತ್ರಿ 1.30ಗೆ ನೂತನ ಪರ್ಯಾಯ ಪೀಠಾಧಿಪತಿ ಅದಮಾರು ಮಠದ ಈಶಪ್ರಿಯ ತೀರ್ಥರು […]

ಕೃಷ್ಣ ಮಠದ 250 ನೇ ಪರ್ಯಾಯ ಸಂಪನ್ನ: ಪೀಠಾಧಿಪತಿಯಾಗಿ ಅದಮಾರು ಕಿರಿಯ ಶ್ರೀ ಪೀಠಾರೋಹಣ
Follow us on

ಉಡುಪಿ: ಕಣ್ಣಿಗೆ ಹಬ್ಬ ನೀಡುತ್ತಿರುವ ಜಾನಪದ ಕಲಾ ತಂಡಗಳ ಮೆರಗು. ಮನಸ್ಸಿಗೆ ಹಿತ ನೀಡುತ್ತಿರುವ ಬೆಂಕಿ ಆಟ. ಉತ್ತಮ ಸಂದೇಶ ಸಾರುತ್ತಿರುವ ಸ್ತಬ್ಧ ಚಿತ್ರಗಳು. ಸಾಲುಗಟ್ಟಿ ಕುಳಿತ ಯತಿಗಳು. ಅಲಂಕಾರಿಕ ವಸ್ತುಗಳಿಂದ ನವವಧುವಿನಂತೆ ಶೃಂಗಾರಗೊಂಡಿರುವ ಕೃಷ್ಣ ಮಠ. ಕೃಷ್ಣನೂರಿನ ಅದಮಾರು ಪರ್ಯಾಯ ಸಂಭ್ರಮದಲ್ಲಿ ಕಿಕ್ಕಿರಿದು ಸೇರಿದ ಜನ ಸಾಗರ.

ಉಡುಪಿಯ ಕೃಷ್ಣಮಠದ ನೂತನ ಪರ್ಯಾಯ ಪೀಠಾಧಿಪತಿಯಾಗಿ ಅದಮಾರು ಕಿರಿಯ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಿದರು. ತಡರಾತ್ರಿ 1.30ಗೆ ನೂತನ ಪರ್ಯಾಯ ಪೀಠಾಧಿಪತಿ ಅದಮಾರು ಮಠದ ಈಶಪ್ರಿಯ ತೀರ್ಥರು ದಂಡ ತೀರ್ಥದಲ್ಲಿ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದರು. ಸುಮಾರು 2.30 ರ ಸಮಯದಲ್ಲಿ 100 ಕ್ಕೂ ಅಧಿಕ ಕಲಾತಂಡಗಳ ಸಹಿತ ವೈವಿದ್ಯಮಯ ಶೋಭಾಯಾತ್ರೆ ಆರಂಭಗೊಂಡಿತು. ಡೋಲು, ವೀರಗಾಸೆ, ಸೋಮನಕುಣಿತ, ಕೋಲಾಟ, ಭಜನೆ ಸೇರಿದಂತೆ ವಿವಿಧ ಕಲಾಪ್ರಾಕಾರಗಳು ಶೋಭಾ ಯಾತ್ರೆಗೆ ಮೆರುಗು ನೀಡಿದ್ವು. ಬಳಿಕ ಉತ್ತಮ ಸಂದೇಶ ಸಾರುವ 50 ಕ್ಕೂ ಅಧಿಕ ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಜನಮನ ಸೆಳೆದವು.

ಪೂಜಾ ಅಧಿಕಾರ ಹಸ್ತಾಂತರ:
ವೈಭವದ ಶೋಭಾಯಾತ್ರೆ ಬಳಿಕ ಅದಮಾರು ಮಠದ ಈಶಪ್ರಿಯ ತೀರ್ಥರು ರಥಬೀದಿಗೆ ಆಗಮಿಸಿದ್ರು. ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರು. ಬಳಿಕ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವರ ದರ್ಶನ ಪಡೆದು ಕೃಷ್ಣ ಮಠ ಪ್ರವೇಶ ಮಾಡಿದ್ರು. ನಂತ್ರ ಶ್ರೀಗಳಿಗೆ ಫಲಿಮಾರು ಶ್ರೀಗಳು ಅಕ್ಷಯ ಪಾತ್ರೆ ಹಸ್ತಾಂತರಿಸಿದ್ರು. ಈ ಮೂಲಕ ಕೃಷ್ಣನ ಪೂಜಾ ಅಧಿಕಾರ ವಿದ್ಯುಕ್ತವಾಗಿ ಹಸ್ತಾಂತರವಾಯಿತು.

ಇಂದು ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕ ದರ್ಬಾರ್ ನಡೆಯಲಿದ್ದು, ಕೇಂದ್ರ ಸಚಿವೆ ನಿರ್ಮಲಾ‌ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಒಟ್ನಲ್ಲಿ ಕೃಷ್ಣ ಮಠದ 250 ನೇ ಪರ್ಯಾಯ ಸಂಪನ್ನಗೊಂಡಿದೆ. ಅದಮಾರು ಮಠದ 34 ನೇ ಯತಿ ಎರಡು ವರ್ಷಗಳ ಕೃಷ್ಣ ಪೂಜಾ ಅಧಿಕಾರ ವಹಿಸಿಕೊಂಡ ಗಳಿಗೆಯನ್ನ ಜನ ಕಣ್ತುಂಬಿಕೊಂಡು ಸಂಭ್ರಮಿಸಿದ್ರು.