ಬಾನಂಗಳದಲ್ಲಿ ಬಣ್ಣದ ಚಿತ್ತಾರ, ಬೆಳಗಾವಿ, ಮಂಗಳೂರಲ್ಲಿ ಗಾಳಿಪಟ ಉತ್ಸವದ ರಂಗು

ಬೆಳಗಾವಿ: ಗಾಳಿಪಟ… ಈ ಹೆಸರು ಕೇಳಿದ್ರೆ ಸಾಕು ಬಾಲ್ಯದ ಸವಿ ನೆನಪು ನೆನಪಾಗುತ್ತೆ. ಚಿಕ್ಕ ಮಕ್ಕಳಿನ ತುಂಟಾಟ ಕಣ್ಮುಂದೆ ಬರುತ್ತೆ. ಗಾಳಿ ಪಟಕ್ಕಾಗಿ ಫ್ರೆಂಡ್ಸ್ ನಡುವೆ ಕಿತ್ತಾಡಿರೋ ಸಂಗತಿಯೂ ಒಮ್ಮೆ ನೆನಪಾಗುತ್ತೆ. ಅಸಲಿಗೆ, ನಾವ್ ಯಾಕ್ ಗಾಳಿಪಟದ ಬಗ್ಗೆ ಹೇಳ್ತಿದ್ದೀವಿ ಗೊತ್ತಾ..? ಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ಕಲರವ. ವಿವಿಧ ಬಗೆಯ ಗಾಳಿಪಟಗಳ ಚಿತ್ತಾರ. ಆಕಾಶದಲ್ಲಿ ತ್ರಿವರ್ಣ ಧ್ವಜದ ಚಮತ್ಕಾರ. ಗಾಳಿಯಲ್ಲಿ ತೇಲ್ಕೊಂಡು ಬಸುಗುಡ್ತಿರೋ ಕಾಳಿಂಗ ಸರ್ಪ. ಈ ರೇಂಜ್​ಗೆ ಗಾಳಿಪಟಗಳು ಹವಾ ಮಾಡ್ತಿರೋದು ಬೆಳಗಾವಿ ನಗರದ […]

ಬಾನಂಗಳದಲ್ಲಿ ಬಣ್ಣದ ಚಿತ್ತಾರ, ಬೆಳಗಾವಿ, ಮಂಗಳೂರಲ್ಲಿ ಗಾಳಿಪಟ ಉತ್ಸವದ ರಂಗು
Follow us
ಸಾಧು ಶ್ರೀನಾಥ್​
|

Updated on:Jan 21, 2020 | 1:40 PM

ಬೆಳಗಾವಿ: ಗಾಳಿಪಟ… ಈ ಹೆಸರು ಕೇಳಿದ್ರೆ ಸಾಕು ಬಾಲ್ಯದ ಸವಿ ನೆನಪು ನೆನಪಾಗುತ್ತೆ. ಚಿಕ್ಕ ಮಕ್ಕಳಿನ ತುಂಟಾಟ ಕಣ್ಮುಂದೆ ಬರುತ್ತೆ. ಗಾಳಿ ಪಟಕ್ಕಾಗಿ ಫ್ರೆಂಡ್ಸ್ ನಡುವೆ ಕಿತ್ತಾಡಿರೋ ಸಂಗತಿಯೂ ಒಮ್ಮೆ ನೆನಪಾಗುತ್ತೆ. ಅಸಲಿಗೆ, ನಾವ್ ಯಾಕ್ ಗಾಳಿಪಟದ ಬಗ್ಗೆ ಹೇಳ್ತಿದ್ದೀವಿ ಗೊತ್ತಾ..?

ಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ಕಲರವ. ವಿವಿಧ ಬಗೆಯ ಗಾಳಿಪಟಗಳ ಚಿತ್ತಾರ. ಆಕಾಶದಲ್ಲಿ ತ್ರಿವರ್ಣ ಧ್ವಜದ ಚಮತ್ಕಾರ. ಗಾಳಿಯಲ್ಲಿ ತೇಲ್ಕೊಂಡು ಬಸುಗುಡ್ತಿರೋ ಕಾಳಿಂಗ ಸರ್ಪ.

ಈ ರೇಂಜ್​ಗೆ ಗಾಳಿಪಟಗಳು ಹವಾ ಮಾಡ್ತಿರೋದು ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮೈದಾನದಲ್ಲಿ. 10ನೇ ಅಂತರಾಷ್ಟ್ರೀಯ ಗಾಳಿ ಪಟ ಉತ್ಸವ ಇದಾಗಿದ್ದು, ಈ ಉತ್ಸವಕ್ಕೆ ನಿನ್ನೆಯೇ ಚಾಲನೆ ಸಿಕ್ಕಿದೆ. ಈ ಕಾರ್ಯಕ್ರಮದಲ್ಲಿ 15ವಿದೇಶಿ ಪಟುಗಳು, 25 ಅಂತರ್ ರಾಜ್ಯ ಸೇರಿ 50 ಹೆಚ್ಚು ಪಟಗಳು ಉತ್ಸವದಲ್ಲಿ ಭಾಗವಹಿಸಿದ್ವು. ಪ್ರತಿಯೊಬ್ಬರೂ ಡಿಫರೆಂಟ್ ಆಗಿರೋ ಬೃಹತ್ ಗಾಳಿಪಟಗಳನ್ನ ಹಾರಿಸಿ, ಗಮನ ಸೆಳೆದರು. ವಿಶೇಷ ಅಂದ್ರೆ, 150ಕೆಜಿ ತೂಕದ ಬೃಹತ್ ಗಾತ್ರದ ಡ್ರ್ಯಾಗನ್ ಗಾಳಿ ಪಟ, ಮಹಾತ್ಮ ಗಾಂಧೀಜಿ, ಶಿವಾಜಿ ಮಹಾರಾಜ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರಿರುವ ಗಾಳಿಪಟ ಹಾರಿಸಲಾಯಿತು.

ಇತ್ತ, ಕರಾವಳಿ ಉತ್ಸವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನ ಮಂಗಳೂರಿನಲ್ಲೂ ನಡೆಸಲಾಯ್ತು. ಮೊನ್ನೆಯಿಂದ ನಡೆದ ಗಾಳಿಪಟ ಉತ್ಸವದಲ್ಲಿ ಯು.ಎಸ್.ಎ, ಥೈಲ್ಯಾಂಡ್, ಇಸ್ರೇಲ್, ಇಂಡೋನೇಷಿಯಾ, ಮಲೆಷಿಯಾ, ನೆದರ್ ಲ್ಯಾಂಡ್ ಸೇರಿದಂತೆ 8 ರಾಷ್ಟ್ರಗಳು ಭಾಗವಹಿಸಿದ್ವು. ಇದ್ರಿಂದ ಪಣಂಬೂರಿನ ಕಡಲಕಿನಾರೆಯಲ್ಲಿ ಗಾಳಿಪಟಗಳು ಬಾನಂಗಳದಲ್ಲಿ ಹೊಸತೊಂದು ಲೋಕವನ್ನೇ ಸೃಷ್ಟಿಸಿದ್ದವು. ಒಟ್ನಲ್ಲಿ, ಗಾಳಿಪಟ ತಯಾರಿಸೋದು ಒಂದು ಕಲೆಯಾಗಿದ್ರೆ, ಗಾಳಿಪಟ ಹಾರಿಸೋದು ಕೂಡ ಒಂದು ಕಲೆ. ಹೀಗಾಗಿ ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿದ್ದವರು ಫುಲ್ ಖುಷಿಯಾಗಿ ಕಾಲ ಕಳೆದ್ರು.

Published On - 7:56 am, Sun, 19 January 20

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ