ಜಪಾನ್​ ನೆಲದಿಂದ ಆಗಸಕ್ಕೆ ಚಿಮ್ಮಲಿದೆ ‘‘ಮರದ’’ ಸ್ಯಾಟಲೈಟ್!

| Updated By: ಸಾಧು ಶ್ರೀನಾಥ್​

Updated on: Dec 30, 2020 | 3:21 PM

ಈಗ ಕ್ಯೋಟೋ ವಿಶ್ವವಿದ್ಯಾಲಯ ಮತ್ತು ಸುಮಿಟೋಮೊ ಅರಣ್ಯ ತಜ್ಞರು ಆಲ್ಯೂಮಿನಿಯಂ ಬದಲಾಗಿ ಮರವನ್ನು ಬಳಕೆ ಮಾಡಲು ಚಿಂತನೆ ನಡೆಸಿದ್ದಾರೆ. ಇದು ಪರಿಸರ ಸ್ನೆಹಿ ಕೃತಕ ಉಪಗ್ರಹವಾಗಿರಲಿದೆ.

ಜಪಾನ್​ ನೆಲದಿಂದ ಆಗಸಕ್ಕೆ ಚಿಮ್ಮಲಿದೆ ‘‘ಮರದ’’ ಸ್ಯಾಟಲೈಟ್!
ಸಾಂದರ್ಭಿಕ ಚಿತ್ರ
Follow us on

ಟೊಕಿಯೋ: ಲೋಹಗಳನ್ನು ಬಳಕೆ ಮಾಡಿ ಕೃತಕ ಉಪಗ್ರಹ ಸಿದ್ಧಪಡಿಸೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಮರದ ಸ್ಯಾಟಲೈಟ್​ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ತಂತ್ರಜ್ಞಾನದಲ್ಲಿ ಮುಂದಿರುವ ಜಪಾನ್​ ಹೀಗೊಂದು ಪ್ರಯೋಗಕ್ಕೆ ಮುಂದಾಗಿದೆ. 2023ರ ವೇಳೆಗೆ ಮರದ ಸ್ಯಾಟಲೈಟ್ ಜಪಾನ್​ ನೆಲದಿಂದ​ ಗಗನಕ್ಕೆ ಚಿಮ್ಮಲಿದೆ.

ಈಗ ಸಿದ್ಧಪಡಿಸುತ್ತಿರುವ ಸ್ಯಾಟಲೈಟ್​ನಲ್ಲಿ ಆಲ್ಯೂಮಿನಿಯಂ ಲೋಹವನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಈ ಕಾರಣಕ್ಕೆ ಕೃತಕ ಉಪಗ್ರಹ ಕಡಿಮೆ ಭಾರ ಇರುತ್ತದೆ. ಅಲ್ಲದೆ, ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಆದರೆ, ಈ ರೀತಿಯ ಉಪಗ್ರಹ ವಿಭಜನೆಯಾದಾಗ ಆಲ್ಯೂಮಿನಿಯಂ ಕಣಗಳು ಬಿಡುಗಡೆ ಆಗುತ್ತವೆ. ಇದು ಅನೇಕ ವರ್ಷಗಳ ಕಾಲ ವಾತಾವರಣದಲ್ಲೇ ಇರುತ್ತದೆ. ಕೆಲವೊಮ್ಮೆ ರಿಯಾಕ್ಷನ್​ ಉಂಟಾಗಿ, ಓಜೋನ್​ ಪದರ​ ಹಾಳಾಗುವ ಸಾಧ್ಯತೆ ಇರುತ್ತದೆ.

ಈಗ ಕ್ಯೋಟೋ ವಿಶ್ವವಿದ್ಯಾಲಯ ಮತ್ತು ಸುಮಿಟೋಮೊ ಅರಣ್ಯ ತಜ್ಞರು ಆಲ್ಯೂಮಿನಿಯಂ ಬದಲಾಗಿ ಮರವನ್ನು ಬಳಕೆ ಮಾಡಲು ಚಿಂತನೆ ನಡೆಸಿದ್ದಾರೆ. ಇದು ಪರಿಸರ ಸ್ನೆಹಿ ಕೃತಕ ಉಪಗ್ರಹವಾಗಿರಲಿದೆ. ಈ ಉಪಗ್ರಹ ಆಗಸಕ್ಕೆ ಚಿಮ್ಮುವಾಗ ಮರದ ಭಾಗ ಸಂಪೂರ್ಣ ಸುಟ್ಟು ಭಸ್ಮವಾಗುತ್ತದೆ. ಇದರಿಂದ ಸ್ಯಾಟಲೈಟ್​ನ ಯಾವುದೇ ಕಣ ವಾತಾವರಣಕ್ಕೆ ಸೇರುವುದಿಲ್ಲ.

ಈಗಾಗಲೇ ಕ್ಯೋಟೋ ವಿಶ್ವವಿದ್ಯಾಲಯ ಮತ್ತು ಸುಮಿಟೋಮೊ ಅರಣ್ಯ ತಜ್ಞರು ಸಂಶೋಧನೆ ಆರಂಭಿಸಿದ್ದಾರೆ. ಸ್ಯಾಟಲೈಟ್​ಗೆ ಯಾವ ಮರ ಬಳಕೆ ಮಾಡಿದರೆ ಉತ್ತಮ ಎನ್ನುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ.

 

ಅಮೆಜಾನ್ ಮಳೆಕಾಡಿನ ಮೇಲೆ ಚೀನಾ, ಬ್ರೆಜಿಲ್ ಸ್ಯಾಟಲೈಟ್ ನಿಗಾ