ಜಯನಗರ ಆಸ್ಪತ್ರೆ ಆವರಣದಲ್ಲಿ ಇದೆಂತ ಫಜೀತಿ! ಎಲ್ಲೆಲ್ಲೂ ಮಾಸ್ಕ್, ಗ್ಲೌಸ್​ಗಳೇ..

| Updated By: ಸಾಧು ಶ್ರೀನಾಥ್​

Updated on: Jul 07, 2020 | 12:50 PM

ಬೆಂಗಳೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಕಿಲ್ಲರ್ ವೈರಸ್ ಹೇಗೆ ಬೇಕಾದ್ರು ಹರಡುತ್ತೆ ಎಂಬ ಸಂಗತಿ ತಿಳಿದಿದ್ದರು ವೈದ್ಯರೇ ನಿರ್ಲಕ್ಷ್ಯವಹಿಸಿದ್ದಾರೆ. ಬೆಂಗಳೂರಿನ ಜಯನಗರದ ಜನರಲ್ ಆಸ್ಪತ್ರೆಯ ಆವರಣದಲ್ಲಿ ಬಳಸಿದ ಮಾಸ್ಕ್, ಗ್ಲೌಸ್​ಗಳು ತುಂಬಿ ತುಳುಕುತ್ತಿವೆ. ಆಸ್ಪತ್ರೆ ಗೇಟ್​ನಿಂದ ಮುಖ್ಯ ದ್ವಾರದ ತನಕ ಗ್ಲೌಸ್​ಗಳು ಸಾಲಾಗಿ ಬಿದ್ದಿವೆ. ಸಾರ್ವಜನಿಕರು, ರೋಗಿಗಳು ಓಡಾಡೋ ಜಾಗದಲ್ಲಿ, ಜನರು ಕುಳಿತುಕೊಳ್ಳುವ ಬೆಂಚ್​ಗಳ ಬಳಿ ಮಾಸ್ಕ್, ಗ್ಲೌಸ್​ಗಳು ಹರಡಿವೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿರೋ ಗಿಡಗಳಲ್ಲೂ ಗ್ಲೌಸ್​ಗಳು ನೇತಾಡುತ್ತಿವೆ. ಇನ್ನೂ ಆಸ್ಪತ್ರೆಯ ಹೊರಗಿನ ಎರಡೂ […]

ಜಯನಗರ ಆಸ್ಪತ್ರೆ ಆವರಣದಲ್ಲಿ ಇದೆಂತ ಫಜೀತಿ! ಎಲ್ಲೆಲ್ಲೂ ಮಾಸ್ಕ್, ಗ್ಲೌಸ್​ಗಳೇ..
Follow us on

ಬೆಂಗಳೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಕಿಲ್ಲರ್ ವೈರಸ್ ಹೇಗೆ ಬೇಕಾದ್ರು ಹರಡುತ್ತೆ ಎಂಬ ಸಂಗತಿ ತಿಳಿದಿದ್ದರು ವೈದ್ಯರೇ ನಿರ್ಲಕ್ಷ್ಯವಹಿಸಿದ್ದಾರೆ. ಬೆಂಗಳೂರಿನ ಜಯನಗರದ ಜನರಲ್ ಆಸ್ಪತ್ರೆಯ ಆವರಣದಲ್ಲಿ ಬಳಸಿದ ಮಾಸ್ಕ್, ಗ್ಲೌಸ್​ಗಳು ತುಂಬಿ ತುಳುಕುತ್ತಿವೆ.

ಆಸ್ಪತ್ರೆ ಗೇಟ್​ನಿಂದ ಮುಖ್ಯ ದ್ವಾರದ ತನಕ ಗ್ಲೌಸ್​ಗಳು ಸಾಲಾಗಿ ಬಿದ್ದಿವೆ. ಸಾರ್ವಜನಿಕರು, ರೋಗಿಗಳು ಓಡಾಡೋ ಜಾಗದಲ್ಲಿ, ಜನರು ಕುಳಿತುಕೊಳ್ಳುವ ಬೆಂಚ್​ಗಳ ಬಳಿ ಮಾಸ್ಕ್, ಗ್ಲೌಸ್​ಗಳು ಹರಡಿವೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿರೋ ಗಿಡಗಳಲ್ಲೂ ಗ್ಲೌಸ್​ಗಳು ನೇತಾಡುತ್ತಿವೆ.

ಇನ್ನೂ ಆಸ್ಪತ್ರೆಯ ಹೊರಗಿನ ಎರಡೂ ಬದಿಯ ಫುಟ್ ಪಾತ್ ಅಂತೂ ಕಸದ ರಾಶಿಯಿಂದ ತುಂಬಿ ಹೋಗಿದೆ. ಈ ರೀತಿಯ ಚಿತ್ರಣ ಜಯನಗರದ ಜನರಲ್ ಆಸ್ಪತ್ರೆಯ ಎದುರು ಕಂಡು ಬಂದಿದೆ. ಆಸ್ಪತ್ರೆಯಲ್ಲೇ ಈ ರೀತಿಯ ವ್ಯವಸ್ಥೆ ಇದ್ದರೆ ಮುಂದೆ ಏನು ಗತಿ? ಎಂಬ ಆತಂಕದಲ್ಲಿ ಅಲ್ಲಿನ ಜನರಿದ್ದಾರೆ. ಈ ರೀತಿ ಬಳಸಿದ ಮಾಸ್ಕ್, ಗ್ಲೌಸ್​ಗಳಿಂದ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ.