JEE Main Result 2021: ಇಂದು ಬಿಡುಗಡೆ ಆಗದ ಫೆಬ್ರವರಿ ಪರೀಕ್ಷೆಯ ಫಲಿತಾಂಶ

| Updated By: ganapathi bhat

Updated on: Apr 06, 2022 | 7:23 PM

JEE Main Result 2021: ಪರೀಕ್ಷಾ ಫಲಿತಾಂಶ ಬಿಡುಗಡೆಗೊಂಡ ನಂತರ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ವೆಬ್​ಸೈಟ್​ನಲ್ಲಿ ನೋಡಬಹುದಾಗಿದೆ. jeemain.nta.nic.in ವೆಬ್​ಸೈಟ್​ಗೆ ಲಾಗ್​ಇನ್ ಆಗುವ ಮೂಲಕ ತಮ್ಮ ಫಲಿತಾಂಶ ತಿಳಿಯಬಹುದು.

JEE Main Result 2021: ಇಂದು ಬಿಡುಗಡೆ ಆಗದ ಫೆಬ್ರವರಿ ಪರೀಕ್ಷೆಯ ಫಲಿತಾಂಶ
JEE MAIN RESULT 2021
Follow us on

JEE Main 2021 Result: ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್ (JEE) ಮೈನ್ ಪರೀಕ್ಷೆ 2021ರ ಫಲಿತಾಂಶವನ್ನು ನೇಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಇಂದು ಬಿಡಗಡೆ ಆಗುವ ನಿರೀಕ್ಷೆ ಇದ್ದರೂ ಬಿಡುಗಡೆಗೊಂಡಿಲ್ಲ. JEE Main 2021ರ ಪರೀಕ್ಷೆಗೆ ಸುಮಾರು 22 ಲಕ್ಷ ಅಭ್ಯರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದರು. ಪರೀಕ್ಷೆಗೆ ನೋಂದಾಯಿಸಿಕೊಂಡ ಅಷ್ಟು ಜನರಲ್ಲಿ 6.05 ಲಕ್ಷ ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಎದುರಿಸಿದ್ದರು. ಉಳಿದ ಅಭ್ಯರ್ಥಿಗಳು ಮಾರ್ಚ್, ಏಪ್ರಿಲ್ ಹಾಗೂ ಮೇ ಅವಧಿಯಲ್ಲಿ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಪರೀಕ್ಷಾ ಫಲಿತಾಂಶವನ್ನು ಅಭ್ಯರ್ಥಿಗಳು ತಮ್ಮ ಅಂಕಗಳನ್ನು ವೆಬ್​ಸೈಟ್​ನಲ್ಲಿ ನೋಡಬಹುದಾಗಿದೆ. jeemain.nta.nic.in ವೆಬ್​ಸೈಟ್​ಗೆ ಲಾಗ್​ಇನ್ ಆಗುವ ಮೂಲಕ ತಮ್ಮ ಫಲಿತಾಂಶ ತಿಳಿಯಬಹುದು. ಪರೀಕ್ಷಾ ಫಲಿತಾಂಶದೊಂದಿಗೆನೇಷನಲ್ ಟೆಸ್ಟಿಂಗ್ ಏಜೆನ್ಸಿ (NTA)ಯು ಅಭ್ಯರ್ಥಿ ಪಡೆದ ಅಂಕಗಳು ಮತ್ತು ಶ್ರೇಣಿಯನ್ನು ಕೂಡ ತಿಳಿಸುತ್ತದೆ.

JEE Main Result ಬಗ್ಗೆ ನೀವು ತಿಳಿದಿರಬೇಕಾದ ಮುಖ್ಯಾಂಶಗಳು
ಕೇವಲ 6 ಅಭ್ಯರ್ಥಿಗಳಿಗೆ ಮಾತ್ರ 100 ಪರ್ಸೆಂಟೈಲ್ ರ‍್ಯಾಂಕ್​ ನೀಡಲಾಗುತ್ತದೆ. JEE Main ರ‍್ಯಾಂಕ್​ಗಳನ್ನು ಮಾರ್ಚ್, ಏಪ್ರಿಲ್ ಮತ್ತು ಮೇ ಸೆಷನ್​ಗಳು ಪೂರ್ಣಗೊಂಡ ನಂತರ ಬಿಡುಗಡೆಗೊಳಿಸಲಾಗುತ್ತದೆ. ನೇಷನಲ್ ಟೆಸ್ಟಿಂಗ್ ಏಜೆನ್ಸಿ (NTA) JEE Advanced 2021ಯ ಕಟ್ ಆಫ್ ಅಂಕಗಳನ್ನು ತಿಳಿಸುತ್ತದೆ. JEE Main 2021 ಫಲಿತಾಂಶ ಬಂದ ಬಳಿಕವಷ್ಟೇ ಕಟ್ ಆಫ್ ಹೇಳಲಾಗುತ್ತದೆ. ನೇಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಜೂನ್​ನಲ್ಲಿ ಈ ಮಾಹಿತಿ ನೀಡುವ ಬಗ್ಗೆ ಅಂದಾಜಿಸಲಾಗಿದೆ.

ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ನಡೆಯುವ ಜೆಇಇ ಪರೀಕ್ಷೆಯ 2021ನೇ ಸಾಲಿನ ವೇಳಾಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್  ಬಿಡುಗಡೆಗೊಳಿಸಿದ್ದರು. ಫೆ.23 ರಿಂದ 26 ರವರೆಗೆ ಜೆಇಇ ಮುಖ್ಯ ಪರೀಕ್ಷೆ ನಡೆದಿತ್ತು. ಇದೇ ಮೊದಲ ಬಾರಿಗೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಪೋಖ್ರಿಯಾಲ್ ತಿಳಿಸಿದ್ದರು.

ಜತೆಗೆ, ಈ ವರ್ಷ ಒಟ್ಟು ನಾಲ್ಕು ಬಾರಿ ಪರೀಕ್ಷೆ ನಡೆಸಲು ಕೇಂದ್ರ ನಿರ್ಧರಿಸಿತ್ತು. ಅದರಂತೆ, ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಜೆಇಇ ಮುಖ್ಯ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪರೀಕ್ಷೆ ಬರೆಯಬಹುದು.

ಇದನ್ನೂ ಓದಿ: JEE-NEET 2020: ಪರೀಕ್ಷೆ ಎದುರಿಸಲು ಹೆಚ್ಚುವರಿ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

VTU 2ನೇ ವರ್ಷದ ಇಂಜಿನಿಯರಿಂಗ್ 3ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

Published On - 11:15 am, Sun, 7 March 21