VTU 2ನೇ ವರ್ಷದ ಇಂಜಿನಿಯರಿಂಗ್ 3ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

VTUನ 3ನೇ ಸೆಮಿಸ್ಟರ್ ಪರೀಕ್ಷೆಗಳು ಮುಂದೂಡಿಕೆಯಾಗಿದೆ. 2ನೇ ವರ್ಷದ ಇಂಜಿನಿಯರಿಂಗ್ 3ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆಯಾಗಿದೆ. ಮಾ.15ಕ್ಕೆ ಪರೀಕ್ಷೆ ಮುಂದೂಡಿ ವಿಟಿಯುನಿಂದ ಆದೇಶ ಹೊರಬಿದ್ದಿದೆ.

VTU 2ನೇ ವರ್ಷದ ಇಂಜಿನಿಯರಿಂಗ್ 3ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU)
Follow us
KUSHAL V
|

Updated on: Mar 01, 2021 | 5:44 PM

ಬೆಂಗಳೂರು: VTUನ 3ನೇ ಸೆಮಿಸ್ಟರ್ ಪರೀಕ್ಷೆಗಳು ಮುಂದೂಡಿಕೆಯಾಗಿದೆ. 2ನೇ ವರ್ಷದ ಇಂಜಿನಿಯರಿಂಗ್ 3ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆಯಾಗಿದೆ. ಮಾ.15ಕ್ಕೆ ಪರೀಕ್ಷೆ ಮುಂದೂಡಿ ವಿಟಿಯುನಿಂದ ಆದೇಶ ಹೊರಬಿದ್ದಿದೆ. ಮಾರ್ಚ್‌ 6ರಿಂದ ಆರಂಭವಾಗಬೇಕಿದ್ದ ಪರೀಕ್ಷೆಗಳು ಇದೀಗ ಮಾ.15ರಿಂದ ಮಾ.31ರವರೆಗೆ ಪರೀಕ್ಷೆ ನಡೆಯಲಿದೆ. ಇದರ ಜೊತೆಗೆ, ವಿಟಿಯುನಿಂದ ನೂತನ ವೇಳಾಪಟ್ಟಿ ಬಿಡುಗಡೆಯಾಗಿದೆ.

ಇತ್ತ, VTUನಡೆಯಿಂದ ಬೇಸತ್ತ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಸುದ್ದಿಯಿಂದ ಕೊಂಚ ರಿಲೀಫ್​ ಸಿಕ್ಕಂತಾಗಿದೆ. ಆನ್​ಲೈನ್​ನಲ್ಲಿ ಇಂಟರ್​ನಲ್ಸ್ ನಡೆಸಲಾಗಿದೆ. ಮೂರು ಇಂಟರ್​ನಲ್ಸ್ ಆನ್​ಲೈನ್​ನಲ್ಲೇ ನಡೆದಿದೆ. ಆನ್​ಲೈನ್ ಹಾಗೂ ಆಫ್​ಲೈನ್ ಇಂಟರ್​ನಲ್ಸ್​ನಲ್ಲಿ ವ್ಯತ್ಯಾಸ ಇರುತ್ತದೆ ಎಂದು ಕೆಲ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದರು.

ಆನ್​ಲೈನ್​ನಲ್ಲಿ ಪಾಠ ಮಾಡಿದ ಪಠ್ಯಕ್ರಮ ಸಹ ಅರ್ಥ ಆಗ್ತಿಲ್ಲ. ಆನ್​ಲೈನ್​ನಲ್ಲಿ ಎಲ್ಲವೂ ಅಸ್ಪಷ್ಟವಾಗಿದೆ. ನಾವು ಸರಿಯಾಗಿ ಪಾಠ ಕೇಳಲು ಆಗಿಲ್ಲ. ಇಂಟರ್​ನೆಟ್ ಸಮಸ್ಯೆ ಇದ್ದವರಿಗೆ ಯಾವುದೂ ಅರ್ಥ ಆಗಿಲ್ಲ. ಸಿಲೆಬಸ್​ಗಳೆಲ್ಲ ಅರ್ಧಂಬರ್ಧ ಆಗಿದೆ. ಈಗ ಎಕ್ಸಾಂ ಅಂದ್ರೆ ಏನು ಮಾಡೊದು ಅನ್ನೊ ಟೆನ್ಶನ್ ಆಗ್ತಿದೆ ಎಂದು ಕೆಲ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ದುಗುಡ ಹಂಚಿಕೊಂಡಿದ್ದರು.

ಇದನ್ನೂ ಓದಿ: ಎಕ್ಸಾಂ ಗೊಂದಲ? ವಿ.ವಿ.ಪುರಂ ಬಿಐಟಿ ಕಾಲೇಜು ಕಟ್ಟಡದಿಂದ ಜಿಗಿದು ರ‍್ಯಾಂಕ್ ವಿದ್ಯಾರ್ಥಿ ಸಾವು