19 ವರ್ಷ ನಂತರ.. ವಾಪಸಾದ ಮೊದಲ ಹೆಂಡತಿ ಸಂಸಾರ ನಡೆಸುವಂತೆ ಪತಿಗೆ ದುಂಬಾಲು! ಕೋರ್ಟ್​ಗೆ ಮೊರೆ

ಚಿಕ್ಕಬಳ್ಳಾಪುರ: ಮದುವೆಯಾಗಿ ಒಂದು ವರ್ಷಕ್ಕೆಲ್ಲ ತವರು ಮನೆ ಸೇರಿದ್ದ ಹೆಂಡತಿ 19 ವರ್ಷಗಳ ನಂತರ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ. ಆದರೆ ಏಕೆ.. ಏನಾಯ್ತು ಅಂದ್ರೆ ಈ ಸ್ಟೋರಿ ಓದಿ.. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಿರೇಬಿದನೂರು ನಿವಾಸಿ ಹಾಗೂ ಜಿ.ಪಂ. ಸದಸ್ಯ ಕೂಡ ಆಗಿರುವ ಡಿ. ನರಸಿಂಹಮೂರ್ತಿ 20 ವರ್ಷಗಳ ಹಿಂದೆ ಗೌರಿಬಿದನೂರು ತಾಲೂಕಿನ ರೆಡ್ಡಿ ದ್ಯಾವರಹಳ್ಳಿ ನಿವಾಸಿ ಸುಜಾತಾರನ್ನು ಮದುವೆಯಾಗಿದ್ದ. ಮದುವೆಯಾಗಿ ಕೆಲ ವರ್ಷಗಳ ಕಾಲ ಚೆನ್ನಾಗಿದ್ದ ನರಸಿಂಹಮೂರ್ತಿ. ಹಂತ ಹಂತವಾಗಿ ರಾಜಕೀಯದಲ್ಲಿ ಗುರುತಿಸಿಕೊಂಡು, ಸದ್ಯ ಜಿಲ್ಲಾ […]

19 ವರ್ಷ ನಂತರ.. ವಾಪಸಾದ ಮೊದಲ ಹೆಂಡತಿ ಸಂಸಾರ ನಡೆಸುವಂತೆ ಪತಿಗೆ ದುಂಬಾಲು! ಕೋರ್ಟ್​ಗೆ ಮೊರೆ
Edited By:

Updated on: Oct 01, 2020 | 9:33 AM

ಚಿಕ್ಕಬಳ್ಳಾಪುರ: ಮದುವೆಯಾಗಿ ಒಂದು ವರ್ಷಕ್ಕೆಲ್ಲ ತವರು ಮನೆ ಸೇರಿದ್ದ ಹೆಂಡತಿ 19 ವರ್ಷಗಳ ನಂತರ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ. ಆದರೆ ಏಕೆ.. ಏನಾಯ್ತು ಅಂದ್ರೆ ಈ ಸ್ಟೋರಿ ಓದಿ..

ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಿರೇಬಿದನೂರು ನಿವಾಸಿ ಹಾಗೂ ಜಿ.ಪಂ. ಸದಸ್ಯ ಕೂಡ ಆಗಿರುವ ಡಿ. ನರಸಿಂಹಮೂರ್ತಿ 20 ವರ್ಷಗಳ ಹಿಂದೆ ಗೌರಿಬಿದನೂರು ತಾಲೂಕಿನ ರೆಡ್ಡಿ ದ್ಯಾವರಹಳ್ಳಿ ನಿವಾಸಿ ಸುಜಾತಾರನ್ನು ಮದುವೆಯಾಗಿದ್ದ. ಮದುವೆಯಾಗಿ ಕೆಲ ವರ್ಷಗಳ ಕಾಲ ಚೆನ್ನಾಗಿದ್ದ ನರಸಿಂಹಮೂರ್ತಿ.

ಹಂತ ಹಂತವಾಗಿ ರಾಜಕೀಯದಲ್ಲಿ ಗುರುತಿಸಿಕೊಂಡು, ಸದ್ಯ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದಾನೆ. ಮೊದಲ ಹೆಂಡತಿ ಸುಜಾತಾ ಈತನ ಜೊತೆ 1 ವರ್ಷ ಮಾತ್ರ ಜೀವನ ಮಾಡಿದ್ದು, ನಂತರ ತವರು ಮನೆಗೆ ಹೋಗಿದ್ಲು.. ಹೆಂಡತಿ ಬರದೆ ಇದ್ದಾಗ ಈತ ಮತ್ತೊಂದು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾನೆ. ಆದ್ರೆ 19 ವರ್ಷದ ಹಿಂದೆ ಬಿಟ್ಟು ಹೋದ ಮೊದಲ ಹೆಂಡತಿ ಸುಜಾತಾ ಈಗ ಬಂದು ನನಗೆ ಅನ್ಯಾಯವಾಗಿದೆ, ನ್ಯಾಯಕೊಡಿ ಎಂದು ಅಂಗಲಾಚುತ್ತಿದ್ದಾಳೆ.

ಸುಜಾತಾ ಮದುವೆಯಾಗಿ ಕೆಲ ತಿಂಗಳುಗಳು ಮಾತ್ರ ಡಿ.ನರಸಿಂಹಮೂರ್ತಿ ಜೊತೆ ವಾಸವಿದ್ದಳಂತೆ. ನಂತರ ತವರು ಮನೆಗೆ ಹೋದವಳು ವಾಪಸ್ ಬಂದಿಲ್ಲ. ಡಿ.ನರಸಿಂಹಮೂರ್ತಿ ಗಂಗರತ್ನಮ್ಮ ಎಂಬಾಕೆಯನ್ನ ಎರಡನೇ ಮದುವೆ ಆಗಿದ್ದು, ಒಂದು ಗಂಡು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಈ ಬಗ್ಗೆ ನರಸಿಂಹಮೂರ್ತಿಯನ್ನ ಕೇಳಿದ್ರೆ, ನನ್ನ ಮೊದಲನೆೇ ಹೆಂಡತಿ ಸತ್ತಿದ್ದಾಳಾ? ಬದುಕಿದ್ದಾಳಾ? ಅನ್ನೊ ವಿಚಾರವೇ ಗೊತ್ತಿರಲಿಲ್ಲ. ಈಗ ಆಕೆ ಬಂದು ಸಂಸಾರ ಮಾಡುವುದಾದ್ರೆ ತಾನು ರೆಡಿ, ಇಲ್ಲ ಖರ್ಚು ವೆಚ್ಚಕ್ಕೆ ಹಣ ಕೊಡಲು ರೆಡಿ ಎನ್ನುತ್ತಿದ್ದಾನೆ.

ಒಟ್ನಲ್ಲಿ ಮದುವೆಯಾಗಿ ಒಂದು ವರ್ಷಕ್ಕೆ ತವರು ಮನೆ ಸೇರಿದ್ದ ಸುಜಾತಾ 19 ವರ್ಷಗಳ ನಂತ್ರ ನ್ಯಾಯ ಕೊಡಿಸಿ ಅಂತ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಆದ್ರೆ ಇಷ್ಟು ವರ್ಷ ಸುಮ್ಮನೆ ಇದ್ದ ಈಕೆ ಈಗ ಬಂದಿದ್ದು ಯಾಕೆ ಅನ್ನೋದು ಎಲ್ಲರ ಪ್ರಶ್ನೆ.