ಬೆಂಗಳೂರು: KPTCL ಹಾಗೂ ರಾಜ್ಯದ 6 ವಿದ್ಯುತ್ ವಿತರಣಾ ನಿಗಮಗಳಲ್ಲಿ ಬಾಕಿಯಿರುವ 3,646 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಏಕಾಏಕಿ ರದ್ದುಪಡಿಸಿರುವನ್ನು ವಿರೋಧಿಸಿ ಉದ್ಯೋಗಾಕಾಂಕ್ಷಿಗಳು KPTCL ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ಇದ್ದ ಕೆಲಸ ಬಿಟ್ಟು ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಂಡಿದ್ದೆವು. ಸಾವಿರಾರು ರೂಪಾಯಿ ಕೊಟ್ಟು ಕೋಚಿಂಗ್ಗೆ ಹೋಗಿದ್ದೆವು. ನೇಮಕಾತಿ ರದ್ದು ಮಾಡುವ ಮೂಲಕ KPTCL ನಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನೇಮಕಾತಿ ರದ್ದು ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಶೀಘ್ರ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.