AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸೆಂಬರ್​ 1ರಿಂದ ದೇಶದಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳುತ್ತಾ? -ಇಲ್ಲಿದೆ ನೋಡಿ ಸತ್ಯಾಂಶ​

ದೆಹಲಿ: ಡಿಸೆಂಬರ್​ 1ರಿಂದ ಭಾರತೀಯ ರೈಲ್ವೆ ಇಲಾಖೆ ದೇಶದಲ್ಲಿ ಮತ್ತೊಮ್ಮೆ ರೈಲು ಸಂಚಾರ ನಿಲ್ಲಿಸಲಿದೆ. ಜೊತೆಗೆ, ಬಹುತೇಕ ಕೊವಿಡ್ ವಿಶೇಷ ಟ್ರೇನ್​ಗಳೂ ಕೂಡ ಸಂಚಾರ ಮಾಡುವುದಿಲ್ಲ ಎಂಬ ಒಂದು ಮೆಸೇಜ್​ ಇತ್ತೀಚೆಗೆ WhatsApp​ನಲ್ಲಿ ಹರಿದಾಡುತ್ತಿದೆ. ಅದನ್ನು ನೋಡಿದ ಜನರು ಹಾಗೂ ಡಿಸೆಂಬರ್​ನಲ್ಲಿ ಪ್ರಯಾಣಿಸಲು ಮುಂಗಡವಾಗಿ ಟಿಕೆಟ್​ ಬುಕ್​ ಮಾಡಿದ್ದವರು  ಗಾಬರಿಯಾಗಿದ್ದಾರೆ ಎಂದು ಹೇಳಲಾಗಿದೆ. ಏನಿದು ಏಕಾಏಕಿ ನಿರ್ಧಾರ ಎಂಬರ್ಥದ ಚರ್ಚೆಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ನಡೆಸುತ್ತಿದ್ದಾರೆ. ಹಾಗೊಮ್ಮೆ ನಿಮಗೂ ಈ ಮೆಸೇಜ್​ ಬಂದಿದ್ದರೆ ಇದನ್ನು ಖಂಡಿತ ನಂಬಬೇಡಿ. ಯಾಕಂದ್ರೆ, […]

ಡಿಸೆಂಬರ್​ 1ರಿಂದ ದೇಶದಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳುತ್ತಾ? -ಇಲ್ಲಿದೆ ನೋಡಿ ಸತ್ಯಾಂಶ​
KUSHAL V
|

Updated on:Nov 23, 2020 | 7:24 PM

Share

ದೆಹಲಿ: ಡಿಸೆಂಬರ್​ 1ರಿಂದ ಭಾರತೀಯ ರೈಲ್ವೆ ಇಲಾಖೆ ದೇಶದಲ್ಲಿ ಮತ್ತೊಮ್ಮೆ ರೈಲು ಸಂಚಾರ ನಿಲ್ಲಿಸಲಿದೆ. ಜೊತೆಗೆ, ಬಹುತೇಕ ಕೊವಿಡ್ ವಿಶೇಷ ಟ್ರೇನ್​ಗಳೂ ಕೂಡ ಸಂಚಾರ ಮಾಡುವುದಿಲ್ಲ ಎಂಬ ಒಂದು ಮೆಸೇಜ್​ ಇತ್ತೀಚೆಗೆ WhatsApp​ನಲ್ಲಿ ಹರಿದಾಡುತ್ತಿದೆ.

ಅದನ್ನು ನೋಡಿದ ಜನರು ಹಾಗೂ ಡಿಸೆಂಬರ್​ನಲ್ಲಿ ಪ್ರಯಾಣಿಸಲು ಮುಂಗಡವಾಗಿ ಟಿಕೆಟ್​ ಬುಕ್​ ಮಾಡಿದ್ದವರು  ಗಾಬರಿಯಾಗಿದ್ದಾರೆ ಎಂದು ಹೇಳಲಾಗಿದೆ. ಏನಿದು ಏಕಾಏಕಿ ನಿರ್ಧಾರ ಎಂಬರ್ಥದ ಚರ್ಚೆಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ನಡೆಸುತ್ತಿದ್ದಾರೆ. ಹಾಗೊಮ್ಮೆ ನಿಮಗೂ ಈ ಮೆಸೇಜ್​ ಬಂದಿದ್ದರೆ ಇದನ್ನು ಖಂಡಿತ ನಂಬಬೇಡಿ. ಯಾಕಂದ್ರೆ, ಇದೊಂದು ಪಕ್ಕಾ ಸುಳ್ಳು ಸುದ್ದಿ.

ಹೌದು, ರೈಲು ಸಂಚಾರ ಸ್ಥಗಿತಗೊಳ್ಳುವ ಬಗ್ಗೆ PIB (ಪ್ರೆಸ್​ ಇನ್​ಫರ್ಮೇಶನ್ ಬ್ಯೂರೋ) ಫ್ಯಾಕ್ಟ್​ಚೆಕ್​ ನಡೆಸಿದ್ದು ಅದರ ಅಸಲಿಯತ್ತನ್ನು ತನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿಕೊಂಡಿದೆ. ಕೊವಿಡ್​ ಹಿನ್ನೆಲೆಯಲ್ಲಿ ಶುರುವಾದ ವಿಶೇಷ ರೈಲುಗಳು ಸೇರಿ ಯಾವ ರೈಲುಗಳ ಸಂಚಾರವೂ ಸ್ಥಗಿತಗೊಳ್ಳುವುದಿಲ್ಲ. ಭಾರತೀಯ ರೈಲ್ವೆ ಇಲಾಖೆ ಅಂಥ ನಿರ್ಧಾರಗಳನ್ನು ಕೈಗೊಂಡಿಲ್ಲ. ಯಾರೂ ಹೆದರುವ ಅಥವಾ ಗಾಬರಿಯಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೇ, ಸುಳ್ಳು WhatsApp​ ಮೆಸೇಜ್​ನ ಸ್ಕ್ರೀನ್​ಶಾಟ್​ ಕೂಡ ಶೇರ್ ಮಾಡಿಕೊಂಡಿದೆ.

ಕೊವಿಡ್​ ಬಿಕ್ಕಟ್ಟು ಶುರುವಾದಾಗಿನಿಂದ ಒಂದಲ್ಲ ಒಂದು ಸುಳ್ಳುಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಲೇ ಇವೆ. ಈ ಹಿಂದೆಯೂ ಹಲವು ವದಂತಿ​ಗಳು ಹರಿದಾಡಿದ್ದು ಜನರು ಗಲಿಬಿಲಿಗೊಳ್ಳುವಂಥ ಘಟನೆಗಳು ಸಹ ನಡೆದಿತ್ತು. 2019ರ ಡಿಸೆಂಬರ್​ನಲ್ಲಿ ಫ್ಯಾಕ್ಟ್​ಚೆಕ್​ ವಿಭಾಗವನ್ನು ಶುರು ಮಾಡಿದ PIB ಕೊವಿಡ್, ಲಾಕ್​ಡೌನ್​, ವಾಹನಗಳ ಸಂಚಾರ ಸೇರಿ ಅನೇಕ ವಿಚಾರಗಳಲ್ಲಿ ಹರಡಿದ್ದ ಸುಳ್ಳುಸುದ್ದಿಗಳ ಬಗ್ಗೆ ಫ್ಯಾಕ್ಟ್​​ಚೆಕ್​ ನಡೆಸಿ, ಜನರಿಗೆ ಸತ್ಯಾಂಶ ತಿಳಿಸುವ ಕೆಲಸದಲ್ಲಿ ತೊಡಗಿದೆ.

Published On - 7:10 pm, Mon, 23 November 20

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ