ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಪತ್ರಿಕೋದ್ಯಮ ಕುರಿತಾಗಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಎಂ. ವಿ ಕಾಮತ್ ಅವರ 6ನೇ ಆವೃತ್ತಿ ಉಪನ್ಯಾಸ ಇದಾಗಿದ್ದು, ‘ಪತ್ರಿಕೋದ್ಯಮ ಭೂತಕಾಲ, ವರ್ತಮಾನ ಮತ್ತು ಭವಿಷ್ಯ’ದ ಕುರಿತಾಗಿ ಶುಕ್ರವಾರ(ಡಿ.18) ವಿಡಿಯೋ ಮೂಲಕ ಮಣಿಪಾಲ ಅಕಾಡೆಮಿ ಉನ್ನತ ಶಿಕ್ಷಣ ಸಂಸ್ಥೆ ಕಾರ್ಯಕ್ರಮ ಆಯೋಜಿಸಲಿದೆ.
ಇಂದು ಬೆಳಿಗ್ಗೆ 10.30 ರಿಂದ 11ರ ವರೆಗೆ ಈ ಕಾರ್ಯಕ್ರಮ ನಡೆಯಲಿದ್ದು. ಮುಖ್ಯ ಅತಿಥಿಗಳಾಗಿ ಭಾರತದ ಉಪಾಧ್ಯಕ್ಷ ಶ್ರೀ ಎಂ.ವಿ ವೆಂಕಯ್ಯ ನಾಯ್ಡು ಪಾಲ್ಗೊಳ್ಳಲಿದ್ದಾರೆ. ಉಪನ್ಯಾಸ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
Published On - 8:22 am, Fri, 18 December 20