ಉಜಿರೆಯಲ್ಲಿ 8ವರ್ಷದ ಬಾಲಕನ ಅಪಹರಣ, 17ಕೋಟಿಗೆ ಬೇಡಿಕೆ: ಚಾರ್ಮಾಡಿ ಘಾಟ್ನಲ್ಲಿ ನಾಕಾಬಂದಿ
8 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ, 17 ಕೋಟಿ ರೂಪಾಯಿ ಕೊಡುವಂತೆ ಬೇಡಿಕೆ ಒಡ್ಡಿದ ಘಟನೆ ಉಜಿರೆಯಲ್ಲಿ ನಡೆದಿದೆ
ದಕ್ಷಿಣ ಕನ್ನಡ: 8 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ 17 ಕೋಟಿ ರೂ. ಬೇಡಿಕೆ ಇಟ್ಟಿರುವ ಘಟನೆ ಉಜಿರೆಯಲ್ಲಿ ನಡೆದಿದೆ. ಅನುಭವ್, ಕಿಡ್ನಾಪ್ ಆದ ಬಾಲಕ.
ಉಜಿರೆ ರಥಬೀದಿ ನಿವಾಸಿ ಬಿಜೋಯ್ ಮತ್ತು ಸರಿಯಾ ಎಂಬುವವರ ಪುತ್ರ ಅನುಭವ್ ನಿನ್ನೆ ಸಂಜೆ 6.30 ರ ಸಮಯದಲ್ಲಿ ಕಿಡ್ನಾಪ್ ಆಗಿದ್ದಾನೆ. ಅನುಭವ್ ತಂದೆ ಹಾರ್ಡ್ವೇರ್ ಬಿಸಿನೆಸ್ ಮಾಡಿಕೊಂಡಿದ್ದಾರೆ. ಸಂಜೆ ಅನುಭವ್ನನ್ನು ಕಿಡ್ನಾಪ್ ಮಾಡುತ್ತಿದ್ದಂತೆ ಕಿಡ್ನಾಪರ್ಸ್ ಬಾಲಕನ ತಂದೆ ಬಿಜೋಯ್ ಕರೆ ಮಾಡಿ 17 ಕೋಟಿ ರೂ. ನೀಡುವಂತೆ ಬೆದರಿಕೆಹಾಕಿದ್ದಾರೆ.
ಸದ್ಯ ಈ ಬಗ್ಗೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಕಿಡ್ನಾಪರ್ಸ್ ಇರುವ ಶಂಕೆ ವ್ಯಕ್ತವಾಗಿದೆ.
ಹಳದಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ಇಂಡಿಕಾ ಕಾರ್ನಲ್ಲಿ ಅನುಭವ್ ಕಿಡ್ನಾಪ್ ಆಗಿರುವುದಾಗಿ ತಿಳಿದುಬಂದಿದೆ. ಪೊಲೀಸ್ ತಂಡಗಳಿಂದ ಶೋಧ ಕಾರ್ಯಚರಣೆ ನಡೆಯುತ್ತಿದೆ.
Published On - 8:46 am, Fri, 18 December 20