ಆಲಮೇಲ ಪಟ್ಟಣದ 2 ದೇವಸ್ಥಾನ ಮತ್ತು 8 ಮನೆಗಳಲ್ಲಿ ಕಳ್ಳತನ
ಕರಿದೇವರ ಗುಡಿಯಿಂದ 40 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ ಬೆಳ್ಳಿ, ವೀರನಾಗಮ್ಮನ ಗುಡಿಯಿಂದ 40 ಗ್ರಾಂ ಚಿನ್ನ ಕಾಣೆಯಾಗಿದೆ. ಸುತ್ತಲಿನ ಮನೆಗಳಲ್ಲಿ ಒಟ್ಟು 80ಗ್ರಾಂ ಚಿನ್ನ ಮತ್ತು 3ಲಕ್ಷ ರೂಪಾಯಿ ನಗದು ಕಾಣೆಯಾಗಿದೆ

ಆಲಮೇಲ ಪಟ್ಟಣದ ದೇವಸ್ಥಾನದಲ್ಲಿ ಕಳ್ಳತನ
ವಿಜಯಪುರ: ಸಿಂದಗಿ ತಾಲ್ಲೂಕಿನ ಆಲಮೇಲ ಪಟ್ಟಣದ ಕರಿದೇವ ಹಾಗೂ ವೀರನಾಗಮ್ಮ ದೇವಸ್ಥಾನದಲ್ಲಿದ್ದ ಚಿನ್ನಾಭರಣಗಳನ್ನು ಕದ್ದ ಬಳಿಕ, ಗ್ರಾಮದ 8 ಮನೆಗಳಲ್ಲಿ ಕಳ್ಳತನವೆಸಗಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ಕರಿದೇವರ ಗುಡಿಯಿಂದ 40 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ ಬೆಳ್ಳಿ, ವೀರನಾಗಮ್ಮನ ಗುಡಿಯಿಂದ 40 ಗ್ರಾಂ ಚಿನ್ನ ಕಾಣೆಯಾಗಿದೆ. ಸುತ್ತಲಿನ ಮನೆಗಳಲ್ಲಿ ಒಟ್ಟು 80 ಗ್ರಾಂ ಚಿನ್ನ ಮತ್ತು 3 ಲಕ್ಷ ರೂಪಾಯಿ ನಗದು ಕಾಣೆಯಾಗಿದೆ.
ಇತ್ತೀಚೆಗೆ ಅಪರಿಚಿತರ ತಂಡವೊಂದು ಪಟ್ಟಣದಲ್ಲಿ ಅಲೆದಾಡುತ್ತಿದ್ದರು. ಇದೇ ತಂಡ ಕಳ್ಳತನ ಮಾಡಿರಬಹುದು ಎಂಬ ಸಂಶಯ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ನಿಂಗಪ್ಪ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.