ಕಮಿಷನ್ ಕೊಡದಿದ್ರೆ ಕಂಟ್ರಾಕ್ಟರ್ ವಿತರಿಸುವ ಅನ್ನಕ್ಕೆ ವಿಷ ಹಾಕುವ ಮಾತು.. ಜಿಲ್ಲಾ ಪಂಚಾಯತ್ ಸದಸ್ಯನ ಆಡಿಯೋ ಫುಲ್ ವೈರಲ್
ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದ ಅಲ್ ಕಾರ್ಗೋ ಕಂಪನಿ ಕಾರ್ಮಿಕರಿಗೆ ಊಟ ಸರಬರಾಜು ಮಾಡಲು ಗುತ್ತಿಗೆ ಪಡೆದಿರುವ ಮಾಲೀಕನಿಗೆ ಪೋನ್ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೋಲಾರ: ಕಮಿಷನ್ ಕೊಡಬೇಕು, ಇಲ್ಲದಿದ್ದರೆ ತಾನು ವಿತರಿಸುವ ಅನ್ನಕ್ಕೆ ವಿಷ ಹಾಕುತ್ತೇನೆ ಎಂದು ಊಟ ಸರಬರಾಜು ಮಾಡುತ್ತಿದ್ದ ಗುತ್ತಿಗೆದಾರನಿಗೆ ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿದ್ದು, ಜಿಲ್ಲಾ ಪಂಚಾಯತ್ ಸದಸ್ಯನ ಆಟಾಟೋಪ ಎದ್ದು ಕಾಣುತ್ತಿದೆ.
ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದ ಅಲ್ ಕಾರ್ಗೋ ಕಂಪನಿ ಕಾರ್ಮಿಕರಿಗೆ ಊಟ ಸರಬರಾಜು ಮಾಡಲು ಗುತ್ತಿಗೆ ಪಡೆದಿರುವ ಮಾಲೀಕನಿಗೆ ಪೋನ್ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಖರ್ಚಿಗೆ ಹಣವಿಲ್ಲ. ಲೋಕಲ್ನಲ್ಲಿ ಎಲ್ಲವನ್ನೂ ನಾನೇ ನೋಡಿಕೊಳ್ಳಬೇಕು. ಹೀಗಾಗಿ ಕಮಿಷನ್ ಹಣ ನೀಡುವಂತೆ ಒತ್ತಾಯಿಸಿದ ಆಡಿಯೋ ಸಂಭಾಷಣೆ ಜಿಲ್ಲಾ ಪಂಚಾಯತಿ ಸದಸ್ಯ, ಮತ್ತು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ ಗೌಡನದೆಂದು ಕೇಳಿ ಬರುತ್ತಿದೆ. ಸದ್ಯ ಈ ಪ್ರಕರಣ ಸಂಬಂಧ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಮುಂಗಳಮುಖಿಯರ ಜೊತೆ ಗ್ರಾ. ಪಂ. ಉಪಾಧ್ಯಕ್ಷ ಅಸಭ್ಯ ಕುಣಿತ, ಫುಲ್ ವೈರಲ್