ಮೈಲಾರ ಲಿಂಗೇಶ್ವರನಿಗೆ ಡಿ.ಕೆ. ಶಿವಕುಮಾರ್ ಕಾಣಿಕೆ.. ಬೆಳ್ಳಿ ಹೆಲಿಕಾಪ್ಟರ್ ಗಿಫ್ಟ್​! ಕಾರಣವೇನು ಗೊತ್ತಾ?

ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿರುವ ಸುಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಿಕುಮಾರ್​ ಭೇಟಿಕೊಟ್ಟರು. ಶಿವಕುಮಾರ್​ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಹ ಸಲ್ಲಿಸಿದರು.ಇದೇ ವೇಳೆ, ದೇಗುಲಕ್ಕೆ ಡಿ.ಕೆ.ಶಿವಕುಮಾರ್​ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡಿದರು.

ಮೈಲಾರ ಲಿಂಗೇಶ್ವರನಿಗೆ ಡಿ.ಕೆ. ಶಿವಕುಮಾರ್ ಕಾಣಿಕೆ.. ಬೆಳ್ಳಿ ಹೆಲಿಕಾಪ್ಟರ್ ಗಿಫ್ಟ್​! ಕಾರಣವೇನು ಗೊತ್ತಾ?
ಮೈಲಾರಲಿಂಗೇಶ್ವರನಿಗೆ ಕಾಣಿಕೆಯಾಗಿ ಬೆಳ್ಳಿ ಹೆಲಿಕಾಪ್ಟರ್ ಗಿಫ್ಟ್​ ನೀಡಿದ ಡಿಕೆಶಿ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Dec 18, 2020 | 12:07 PM

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿರುವ ಸುಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಿಕುಮಾರ್​ ಭೇಟಿ ಕೊಟ್ಟರು. ಶಿವಕುಮಾರ್​ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಹ ಸಲ್ಲಿಸಿದರು. ಇದೇ ವೇಳೆ, ದೇಗುಲಕ್ಕೆ ಡಿ.ಕೆ. ಶಿವಕುಮಾರ್​ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡಿದರು.

ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡಿದ್ದಕ್ಕೆ ಕಾರಣವೇನು? ಅಂದ ಹಾಗೆ, 2018ರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಡಿ.ಕೆ. ಶಿವಕುಮಾರ್​ ಅವರ ಹೆಲಿಕಾಪ್ಟರ್ ಹಾದುಹೋಗಿತ್ತಂತೆ. ಹೀಗಾಗಿ, ಇದರಿಂದಲೇ, ದೇವರಿಗೆ ಅಪಚಾರ ಆಗಿತ್ತೆಂದು ಮತ್ತು ಡಿ.ಕೆ.ಶಿವಕುಮಾರ್​ಗೆ ಭಾರಿ ಸಮಸ್ಯೆಗಳು ಎದುರಾಗಿದ್ದವು ಎಂದು ಕೇಳಿಬಂದಿತ್ತು. ಹೀಗಾಗಿ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾಣಿಕೆ ನೀಡಿದರು. ಕಾರ್ಯಕರ್ತರು ಹಾಗೂ ದೇಗುಲದ ಗುರುಗಳ ಸಲಹೆ ಮೇರೆಗೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.

ದೇವಸ್ಥಾನದ ಆವರಣದಲ್ಲಿ 5 ಬಾರಿ ದೀರ್ಘದಂಡ ನಮಸ್ಕಾರ ಹಾಕಿದ ಶಿವಕುಮಾರ್​ ಬಳಿಕ ರುದ್ರಸ್ನಾನದ ವಿಧಿ ನೆರವೇರಿಸಿ, ಪೂಜೆ ಸಲ್ಲಿಸಿದರು. ಮೈಲಾರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ ಬೆಳ್ಳಿಯ ಹೆಲಿಕ್ಯಾಪ್ಟರ್ ನೀಡಿ ಹರಕೆ ತೀರಿಸಿದರು. ಸುಮಾರು 1 ಕೆ.ಜಿ‌ ತೂಕದ ಬೆಳ್ಳಿಯಿಂದ ಮಾಡಿರುವ ಹೆಲಿಕಾಪ್ಟರ್​ನ ಶಿವಕುಮಾರ್​ ಕಾಣಿಕೆಯಾಗಿ ನೀಡಿದರು.

ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ