ಸಾವಲ್ಲೂ ಒಂದಾದ ಹಿರಿಯ ಜೋಡಿಗಳು: ಒಟ್ಟಿಗೆ ಅಂತ್ಯಕ್ರಿಯೆ ಮಾಡಲು ಸಿದ್ಧತೆ
ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೊಡ್ಡ ರಾಜಣ್ಣ (80) ನಿನ್ನೆ ತಡರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿದ ಮನೆಯಲ್ಲಿದ್ದ ಆತನ ಪತ್ನಿ ರುದ್ರಮ್ಮ(74) ಕೂಡ ಹೃದಯಾಘಾತದಿಂದ ಮೃತರಾಗಿದ್ದಾರೆ.
ಚಿಕ್ಕಮಗಳೂರು: ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಕೂಡ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಗಾಳಿಹಳ್ಳಿಯ ಬಳಿ ನಡೆದಿದೆ.
ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೊಡ್ಡ ರಾಜಣ್ಣ (80) ನಿನ್ನೆ ತಡರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿದ ಮನೆಯಲ್ಲಿದ್ದ ಆತನ ಪತ್ನಿ ರುದ್ರಮ್ಮ(74) ಕೂಡ ಹೃದಯಾಘಾತದಿಂದ ಮೃತರಾಗಿದ್ದಾರೆ.
ವಾರದ ಹಿಂದೆ ರುದ್ರಮ್ಮಾಗೆ ಸ್ಟ್ರೋಕ್ ಆಗಿತ್ತು ಎಂದು ತಿಳಿದು ಬಂದಿದ್ದು, ಗಂಡನ ಮೃತದೇಹ ಮನೆಗೆ ಬರುವಷ್ಟರಲ್ಲಿ ಹೆಂಡತಿಯೂ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಇವರಿಬ್ಬರಿಗೆ ಒಟ್ಟಿಗೆ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.
ಪತ್ನಿ ಸಾವು ಕೇಳಿ ಪತಿಗೂ ಹೃದಯಾಘಾತ, ಸಾವಿನಲ್ಲೂ ಒಂದಾದ ‘ಜನುಮದ ಜೋಡಿ’