ಭಿಕ್ಷೆ ಬೇಡುವ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದ ಬಿಬಿಎಂಪಿ..
ಶಿಕ್ಷಣ ಸಿಗದೆ ಹೊಟ್ಟೆ ಪಾಡಿಗಾಗಿ ಅನಿವಾರ್ಯದಿಂದ ಸಿಗ್ನಲ್ ಬಳಿ ಚಿಕ್ಕ ಚಿಕ್ಕ ವಸ್ತುಗಳನ್ನ ಮಾರಾಟ ಮಾಡುವ ಜೊತೆಗೆ ಭಿಕ್ಷೆ ಎತ್ತಲು ಮುಂದಾದ ಮಕ್ಕಳ ಸಂಖ್ಯೆ ಗಣನೀಯವಾಗಿದೆ. ಇಂತಹ ಮಕ್ಕಳಿಗೆ ಶಿಕ್ಷಣ ಕೊಡಿಸುವ ಉದ್ದೇಶದಿಂದ ಹೈಕೋರ್ಟ್ ಸೂಚನೆಯಂತೆ ಬಿಬಿಎಂಪಿ ಮಾಹಿತಿ ಪಡೆಯಲು ಹೆಜ್ಜೆಯಿಟ್ಟಿದೆ.
ಬೆಂಗಳೂರು: ನಗರದಲ್ಲಿ ಭಿಕ್ಷೆ ಬೇಡುವ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಶಿಕ್ಷಣದಿಂದ ವಂಚಿತರಾದ ಮಕ್ಕಳ ಬಗ್ಗೆ ಮಾಹಿತಿ ಕಲೆಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.
ಶಿಕ್ಷಣ ಸಿಗದೆ ಹೊಟ್ಟೆ ಪಾಡಿಗಾಗಿ ಅನಿವಾರ್ಯದಿಂದ ಸಿಗ್ನಲ್ ಬಳಿ ಚಿಕ್ಕ ಚಿಕ್ಕ ವಸ್ತುಗಳನ್ನ ಮಾರಾಟ ಮಾಡುವ ಜೊತೆಗೆ ಭಿಕ್ಷೆ ಎತ್ತಲು ಮುಂದಾದ ಮಕ್ಕಳ ಸಂಖ್ಯೆ ಗಣನೀಯವಾಗಿದೆ. ಇಂತಹ ಮಕ್ಕಳಿಗೆ ಶಿಕ್ಷಣ ಕೊಡಿಸುವ ಉದ್ದೇಶದಿಂದ ಹೈಕೋರ್ಟ್ ಸೂಚನೆಯಂತೆ ಬಿಬಿಎಂಪಿ ಮಾಹಿತಿ ಪಡೆಯಲು ಹೆಜ್ಜೆಯಿಟ್ಟಿದೆ.
ಮಕ್ಕಳು ಯಾಕೆ ಭಿಕ್ಷೆ ಬೇಡುತ್ತಿದ್ದಾರೆ? ಅವರಿಗೆ ಯಾವ ರೀತಿ ಶಿಕ್ಷಣ ನೀಡಬೇಕು? ಇದರ ಹಿಂದೆ ಮಾಫಿಯಾ ಇದೆಯಾ ಎಂಬೆಲ್ಲ ವಿಚಾರಗಳ ಬಗ್ಗೆ ಮಾಹಿತಿ ಕಲೆಹಾಕಿ ಒಂದು ವಾರದಲ್ಲಿ ವರದಿ ಸಿದ್ಧಪಡಿಸಲು ತಯಾರಿಗಳು ನಡೆಯುತ್ತಿದೆ. ಈ ಕುರಿತು ನಾಲ್ಕು ಎನ್ಜಿಒ ಜೊತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಭೆ ನಡೆಸಿದ್ದಾರೆ.
Published On - 1:03 pm, Fri, 18 December 20