ಮೈಸೂರು ದಸರಾ 2020: ಅರಮನೆಯ ಆವರಣದಲ್ಲಿ ಜಂಬೂಸವಾರಿ ತಾಲೀಮು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅರಮನೆಯ ಆವರಣದಲ್ಲಿ ಭರ್ಜರಿ ತಯಾರಿ, ತಲೀಮು ನಡೆಯುತ್ತಿದೆ. ಇಂದಿನಿಂದ ಜಂಬೂಸವಾರಿ ರಿಹರ್ಸಲ್ ಶುರುವಾಗಿದ್ದು, ಮೂರು ದಿನ ನಡೆಯಲಿದೆ. ಸರಳ ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣಕ್ಕೆ ಮಾತ್ರ ಮೆರವಣಿಗೆ ಸೀಮಿತವಾಗಿದೆ. ಹೀಗಾಗಿ ತಾಲೀಮು ಕೂಡ ಅರಮನೆ ಆವರಣದಲ್ಲೇ ನಡೆಯುತ್ತಿದೆ. ಗಜಪಡೆ ಕ್ಯಾಪ್ಟನ್, ಅಭಿಮನ್ಯು ನೇತೃತ್ವದಲ್ಲಿ ತಾಲೀಮು‌ ನಡೆಯುತ್ತಿದೆ. 20ಕ್ಕೂ ಹೆಚ್ಚು ಕುದರೆಗಳು ಗಾಡ್ ಆಫ್ ಹಾನರ್​ನ ತಾಲೀಮಿನಲ್ಲಿ ಭಾಗಿಯಾಗಿವೆ. ಡಿಸಿಪಿ ಶೈಲೇಂದ್ರರಿಂದ ಗಜಪಡೆಗೆ ಪುಷ್ಪಾರ್ಚನೆ ಮಾಡಲಾಯಿತು. ಇನ್ನು ರಿಹರ್ಸಲ್ ವೇಳೆ ಕುದುರೆಯೊಂದು […]

ಮೈಸೂರು ದಸರಾ 2020: ಅರಮನೆಯ ಆವರಣದಲ್ಲಿ ಜಂಬೂಸವಾರಿ ತಾಲೀಮು

Updated on: Oct 22, 2020 | 9:43 AM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅರಮನೆಯ ಆವರಣದಲ್ಲಿ ಭರ್ಜರಿ ತಯಾರಿ, ತಲೀಮು ನಡೆಯುತ್ತಿದೆ. ಇಂದಿನಿಂದ ಜಂಬೂಸವಾರಿ ರಿಹರ್ಸಲ್ ಶುರುವಾಗಿದ್ದು, ಮೂರು ದಿನ ನಡೆಯಲಿದೆ. ಸರಳ ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣಕ್ಕೆ ಮಾತ್ರ ಮೆರವಣಿಗೆ ಸೀಮಿತವಾಗಿದೆ. ಹೀಗಾಗಿ ತಾಲೀಮು ಕೂಡ ಅರಮನೆ ಆವರಣದಲ್ಲೇ ನಡೆಯುತ್ತಿದೆ.

ಗಜಪಡೆ ಕ್ಯಾಪ್ಟನ್, ಅಭಿಮನ್ಯು ನೇತೃತ್ವದಲ್ಲಿ ತಾಲೀಮು‌ ನಡೆಯುತ್ತಿದೆ. 20ಕ್ಕೂ ಹೆಚ್ಚು ಕುದರೆಗಳು ಗಾಡ್ ಆಫ್ ಹಾನರ್​ನ ತಾಲೀಮಿನಲ್ಲಿ ಭಾಗಿಯಾಗಿವೆ. ಡಿಸಿಪಿ ಶೈಲೇಂದ್ರರಿಂದ ಗಜಪಡೆಗೆ ಪುಷ್ಪಾರ್ಚನೆ ಮಾಡಲಾಯಿತು. ಇನ್ನು ರಿಹರ್ಸಲ್ ವೇಳೆ ಕುದುರೆಯೊಂದು ಗಾಬರಿಗೊಂಡು ಸಾವರನನ್ನ ಕೆಳಗೆ ಬೀಳಿಸಿದ ಘಟನೆ ನಡೆದಿದೆ.

300ಮೀ‌ ಜಂಬೂ ಸವಾರಿ ತಾಲೀಮು ನಡೆಸುತ್ತಿದ್ದೇವೆ
ಇಂದಿನಿಂದ ಜಂಬೂಸವಾರಿ ತಾಲೀಮು ಶುರು ಮಾಡಿದ್ದೇವೆ. ಇವತ್ತು ತಾಲೀಮಿನಲ್ಲಿ ಗಜಪಡೆ ಕುದುರೆ, ಪೊಲೀಸ್ ಬ್ಯಾಂಡ್ ಭಾಗಿಯಾಗಿದೆ. ಇನ್ನು 2 ಬಾರಿ ಈ‌ ಜಂಬೂಸವಾರಿ ರಿಹರ್ಸಲ್ ನಡೆಯಲಿದೆ. 300ಮೀ‌ ಜಂಬೂ ಸವಾರಿ ತಾಲೀಮು ನಡೆಸುತ್ತಿದ್ದೇವೆ. ಇದೇ ಮಾದರಿಯಲ್ಲಿ ಜಂಬೂಸವಾರಿ ನಡೆಯಲಿದೆ. ಅಶ್ವದಳ, ಆನೆಗಳು ಹೇಗೆ ಸಾಗಬೇಕೆಂದು ರಿಹರ್ಸಲ್‌ ಮಾಡುತ್ತೇವೆ.

ಮರದ‌ ಅಂಬಾರಿಯನ್ನು ಹೊರಿಸಿ ಜಂಬೂಸವಾರಿ ತಾಲೀಮು ನಡೆಸುತ್ತೇವೆ. ಇದು ನಮಗೆ ವಿಜಯದಶಮಿಯಂದು ಅನುಕೂಲ‌ ಆಗಲಿದೆ. ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಹಾಕಿದ್ದೇವೆ. ಆನೆಗಳು ಆರೋಗ್ಯವಾಗಿದ್ದು ಯಾವುದೇ ಸಮಸ್ಯೆ ಇಲ್ಲ. ಜಂಬೂಸವಾರಿ ರಿಹರ್ಸಲ್ ಬಳಿಕ ಪಶು ವೈದ್ಯ ಡಾ.ನಾಗರಾಜ್ ಹೇಳಿಕೆ ನೀಡಿದ್ರು.

Published On - 9:39 am, Thu, 22 October 20