IPL 2020: ಕೊಲ್ಕತ್ತಾ ಮೇಲೆ ಕೊಹ್ಲಿ ಹುಡುಗರು ದರ್ಬಾರ್ ನಡೆಸಿದ ಫೋಟೋಗಳಿವು..
ಅಬು ಧಾಬಿಯಲ್ಲಿ ನಡೆದ ಕೊಲ್ಕತ್ತಾ ಹಾಗೂ ಬೆಂಗಳೂರು ನಡುವಿನ ಸೇಡಿನ ಸಮರದಲ್ಲಿ ಬೆಂಗಳೂರು 8 ವಿಕೆಟ್ಗಳ ಭರ್ಜರಿ ಜಯ ಸಾದಿಸಿದೆ. ಕೆ.ಕೆ.ಆರ್. ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. 10 ಪಂದ್ಯಗಳಲ್ಲಿ 7 ಪಂದ್ಯಗಳನ್ನ ಗೆದ್ದಿರೋ ಆರ್.ಸಿ.ಬಿ. 14 ಅಂಕಗಳನ್ನ ಕಲೆಹಾಕಿ, ಎರಡನೇ ಸ್ಥಾನವನ್ನ ಅಲಂಕರಿಸಿದೆ. ಆರ್.ಸಿ.ಬಿ. ವಿರುದ್ಧ ಕೆ.ಕೆ.ಆರ್. ಪವರ್ ಪ್ಲೇನಲ್ಲಿ 17 ರನ್ಗೆ 4 ವಿಕೆಟ್ ಕಳೆದುಕೊಳ್ತು. ಇದು ಐಪಿಎಲ್ ಇತಿಹಾಸದಲ್ಲೇ ಪವರ್ ಪ್ಲೇನಲ್ಲಿ ದಾಖಲಿಸಿದ […]
ಅಬು ಧಾಬಿಯಲ್ಲಿ ನಡೆದ ಕೊಲ್ಕತ್ತಾ ಹಾಗೂ ಬೆಂಗಳೂರು ನಡುವಿನ ಸೇಡಿನ ಸಮರದಲ್ಲಿ ಬೆಂಗಳೂರು 8 ವಿಕೆಟ್ಗಳ ಭರ್ಜರಿ ಜಯ ಸಾದಿಸಿದೆ.
ಕೆ.ಕೆ.ಆರ್. ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. 10 ಪಂದ್ಯಗಳಲ್ಲಿ 7 ಪಂದ್ಯಗಳನ್ನ ಗೆದ್ದಿರೋ ಆರ್.ಸಿ.ಬಿ. 14 ಅಂಕಗಳನ್ನ ಕಲೆಹಾಕಿ, ಎರಡನೇ ಸ್ಥಾನವನ್ನ ಅಲಂಕರಿಸಿದೆ.
ಆರ್.ಸಿ.ಬಿ. ವಿರುದ್ಧ ಕೆ.ಕೆ.ಆರ್. ಪವರ್ ಪ್ಲೇನಲ್ಲಿ 17 ರನ್ಗೆ 4 ವಿಕೆಟ್ ಕಳೆದುಕೊಳ್ತು. ಇದು ಐಪಿಎಲ್ ಇತಿಹಾಸದಲ್ಲೇ ಪವರ್ ಪ್ಲೇನಲ್ಲಿ ದಾಖಲಿಸಿದ ಅತಿ ಕಡಿಮೆ ಸ್ಕೋರ್ ಆಗಿದೆ.
ಕೊಲ್ಕತ್ತಾ ವಿರುದ್ಧ ಮ್ಯಾಚ್ ವಿನ್ನಿಂಗ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಪಡೆದುಕೊಂಡ್ರು. 4 ಓವರ್ಗಳಲ್ಲಿ ಎರಡು ಓವರ್ ಮೇಡನ್ ಮಾಡಿದ ಸಿರಾಜ್, 8 ರನ್ ನೀಡಿ ಮೂರು ವಿಕೆಟ್ ಪಡೆದ ಸಾಧನೆ ಮಾಡಿದ್ರು.
ಕೊಲ್ಕತ್ತಾ ವಿರುದ್ಧ ಎರಡು ಬೌಂಡರಿಗಳನ್ನ ಬಾರಿಸಿದ ವಿರಾಟ್ ಕೊಹ್ಲಿ, ಐಪಿಎಲ್ ಕರಿಯರ್ನಲ್ಲಿ ಒಟ್ಟು 500ನೇ ಬೌಂಡರಿ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ರು. 187 ಪಂದ್ಯಗಳಲ್ಲಿ ಕೊಹ್ಲಿ 500 ಬೌಂಡರಿ ಬಾರಿಸಿದ್ರೆ, 199 ಸಿಕ್ಸರ್ಗಳನ್ನ ಸಿಡಿಸಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಕೆಕೆಆರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ಗೆ ಲೆಗ್ ಸ್ಪಿನ್ನರ್ಗಳೇ ಕಂಕಟವಾಗಿದ್ದಾರೆ. ಸೀಸನ್ 13 ರಲ್ಲಿ 18 ಲೆಗ್ ಸ್ಪಿನ್ ಬಾಲ್ಗಳನ್ನ ಎದುರಿಸಿದ ದಿನೇಶ್ ಕಾರ್ತಿಕ್ 14 ರನ್ ಗಳಿಸಿದ್ರೆ, 5 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
8 ವರ್ಷಗಳ ಬಳಿಕ ಕೊಲ್ಕತ್ತಾ ತಂಡ ಌಂಡ್ರೋ ರಸ್ಸೆಲ್ ಹಾಗೂ ಸುನಿಲ್ ನರೈನ್ರನ್ನ ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಟ್ಟಿದೆ. 2012 ರಲ್ಲಿಯೂ ಕೆಕೆಆರ್, ಆರ್ಸಿಬಿ ವಿರುದ್ಧ ಇಬ್ಬರು ವೆಸ್ಟ್ ಇಂಡೀಸ್ ಕ್ರಿಕೆಟಿಗರನ್ನ ತಂಡದಿಂದ ಹೊರಗಿಟ್ಟಿತ್ತು.
ಆರ್.ಸಿ.ಬಿ. ತಂಡದ ವಿಕೆಟ್ ಕೀಪರ್ ಎಬಿ ಡಿವಿಲಿಯರ್ಸ್ ಐಪಿಎಲ್ನಲ್ಲಿ 100ನೇ ಕ್ಯಾಚ್ ಹಿಡಿದಿದ್ದಾರೆ. ಕೆಕೆಆರ್ ಪಂದ್ಯಕ್ಕೂ ಮುನ್ನ ಎಬಿಡಿಗೆ ಎರಡು ಕ್ಯಾಚ್ ಅವಶ್ಯಕತೆಯಿತ್ತು. ಟಾಮ್ ಬೆಂಟನ್, ರಾಹುಲ್ ತ್ರಿಪಾಟಿ ಕ್ಯಾಚ್ ಹಿಡಿದ ಎಬಿಡಿ ನೂರರ ಕ್ಲಬ್ ಸೇರದ್ರು.
Published On - 9:28 am, Thu, 22 October 20