ಕೊಲ್ಕತಾಗೆ ಇಂದು ಮುಯ್ಯಿ ತೀರಿಸಿಕೊಳ್ಳುವ ಸಮಯವಾದರೂ ಅದು ಸುಲಭವಲ್ಲ

13ನೇ ಅವೃತಿಯ ಇಂಡಿಯನ್ ಪ್ರಿಮೀಯರ್ ಲೀಗ್ ಕ್ರಮೇಣ ಮುಕ್ತಾಯದ ಹಂತದೆಡೆ ಸಾಗುತ್ತಿದೆ. ಟೂರ್ನಿಯ ಒಟ್ಟು 56 ಪಂದ್ಯಗಳ ಪೈಕಿ ಇಂದು 39ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವೆ ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡೂ ತಂಡಗಳು ತಲಾ 9 ಪಂದ್ಯಗಳನ್ನಾಡಿದ್ದು, 6ರಲ್ಲಿ ಜಯ ಸಾಧಿಸಿರುವ ಆರ್​ಸಿಬಿ 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ 5ರಲ್ಲಿ ಗೆದ್ದಿರುವ ಕೆಕೆಆರ್ 4ನೇ ಸ್ಥಾನದಲ್ಲಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿಯ ಪಡೆ, […]

ಕೊಲ್ಕತಾಗೆ ಇಂದು ಮುಯ್ಯಿ ತೀರಿಸಿಕೊಳ್ಳುವ ಸಮಯವಾದರೂ ಅದು ಸುಲಭವಲ್ಲ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಸಾಧು ಶ್ರೀನಾಥ್​

Updated on:Oct 21, 2020 | 4:32 PM

13ನೇ ಅವೃತಿಯ ಇಂಡಿಯನ್ ಪ್ರಿಮೀಯರ್ ಲೀಗ್ ಕ್ರಮೇಣ ಮುಕ್ತಾಯದ ಹಂತದೆಡೆ ಸಾಗುತ್ತಿದೆ. ಟೂರ್ನಿಯ ಒಟ್ಟು 56 ಪಂದ್ಯಗಳ ಪೈಕಿ ಇಂದು 39ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವೆ ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡೂ ತಂಡಗಳು ತಲಾ 9 ಪಂದ್ಯಗಳನ್ನಾಡಿದ್ದು, 6ರಲ್ಲಿ ಜಯ ಸಾಧಿಸಿರುವ ಆರ್​ಸಿಬಿ 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ 5ರಲ್ಲಿ ಗೆದ್ದಿರುವ ಕೆಕೆಆರ್ 4ನೇ ಸ್ಥಾನದಲ್ಲಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿಯ ಪಡೆ, ಟೀಮಿನ ಸ್ಟಾರ್ ಬ್ಯಾಟ್ಸ್​ಮನ್ ಎಬಿ ಡಿ ವಿಲಿಯರ್ಸ್ ಅವರ ಬಿರುಗಾಳಿ ವೇಗದ ಅರ್ಧಶತಕ (33 ಎಸೆತಗಳಲ್ಲಿ ಅಜೇಯ 73) ನೆರವಿನಿಂದ ಸುಲಭ ಗೆಲುವು ಸಾಧಿಸಿತ್ತು.

ಹಾಗೆಯೇ, ತನ್ನ ಕೊನೆಯ ಪಂದ್ಯವನ್ನು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೂಪರ್ ಓವರ್​ನಲ್ಲಿ ಗೆದ್ದ ಕೊಲ್ಕತಾ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಸಿನಿಮಾ ನಟ ಶಾರುಖ್ ಖಾನ್​ನ ಟೀಮನ್ನು ಕಳೆದೆರಡು ಪಂದ್ಯಗಳಿಂದ ಇಂಗ್ಲೆಂಡ್​ನ ಅಯಾನ್ ಮೊರ್ಗನ್ ಲೀಡ್ ಮಾಡುತ್ತಿದ್ದಾರೆ. ನಾಯಕತ್ವವನ್ನು ತ್ಯಜಿಸಿದ ದಿನೇಶ್ ಕಾರ್ತೀಕ್ ಕೇವಲ ಬ್ಯಾಟ್ಸ್​ಮನ್-ವಿಕೆಟ್​ಕೀಪರ್ ಸಾಮರ್ಥ್ಯದಲ್ಲಿ ಆಡುತ್ತಿದ್ದಾರೆ.

[yop_poll id=”17″]

ಬೆಂಗಳೂರು ಟೀಮು ಪಂದ್ಯದಿಂದ ಪಂದ್ಯಕ್ಕೆ ಬಲಿಷ್ಠವಾಗುತ್ತಾ ಸಾಗಿದೆ. ಅದರಲ್ಲೂ ಆಲ್​ರೌಂಡರ್ ಕ್ರಿಸ್ ಮೊರಿಸ್ ಅವರನ್ನು ಅಡುವ ಇಲೆವೆನ್​ನಲ್ಲಿ ಸೇರಿಸಿಕೊಂಡಾಗಿನಿಂದ ಫಲಿತಾಂಶಗಳು ಅದರ ಪರವಾಗಿ ಬರುತ್ತಿವೆ. ಕೆಲ ಪಂದ್ಯಗಳಲ್ಲಿ ಫೇಲಾದ ನಂತರ ಪುನಃ ತಮ್ಮ ಮ್ಯಾಜಿಕಲ್ ಟಚ್ ಕಂಡುಕೊಂಡಿರುವ ಡಿ ವಿಲಿಯರ್ಸ್ ರಾಜಸ್ತಾನದ ವಿರುದ್ಧ ಆಡಿದ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ ಅಜೇಯ 55 ನ್ ಬಾರಿಸಿ ಉಳಿದ ಟೀಮುಗಳಿಗೆ ಎಚ್ಚರಿಕೆಯ ಸಂದೇಶ ಕಳಿಸಿದ್ದಾರೆ. ಅವರು ಫಾರ್ಮ್​ಗೆ ಮರಳಿರುವುದು ಕೊಹ್ಲಿಯನ್ನು ನಿರಾಳವಾಗಿಸಿದೆ. ಹಾಗೆ ನೋಡಿದರೆ ಈ ಟೀಮಿಗೆ ಬ್ಯಾಟಿಂಗ್ ವಿಭಾಗದಲ್ಲಿ ಆತಂಕಪಡುವಂಥದ್ದೇನೂ ಇಲ್ಲ. ಕೊಹ್ಲಿ, ದೇವದತ್ ಪಡಿಕ್ಕಲ್, ಆರನ್ ಫಿಂಚ್ ಉತ್ತಮವಾಗಿ ಆಡುತ್ತಿದ್ದಾರೆ. ಕೆಳಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಕ್ರಿಸ್ ಮೊರಿಸ್ ಸಹ ಬ್ಯಾಟ್ ಬೀಸುತ್ತಿದ್ದಾರೆ. ಕೇವಲ ಗುರ್ಕೀರತ್ ಸಿಂಗ್ಮನ್​ಗೆ ಜಾಸ್ತಿ ಎಸೆತಗಳನ್ನಾಡುವ ಅವಕಾಶ ಸಿಗುತ್ತಿಲ್ಲ. 

ಇವತ್ತಿನ ಪಂದ್ಯದಲ್ಲಿ ಬೆಂಗಳೂರು ಮೂವರು ವೇಗದ ಬೌಲರ್​ಗಳು-ಮೊರಿಸ್, ಇಸುರು ಉಡಾನ ಮತ್ತು ನವದೀಪ್ ಸೈನಿ ಮತ್ತು ಮೂವರು ಸ್ಪಿನ್ನರ್​ಗಳನ್ನು-ಯುಜ್ವೇಂದ್ರ ಚಹಲ್, ಸುಂದರ್, ಮತ್ತು ಶಾಬಾಜ್ ಅಹ್ಮದ್ ಅವರನ್ನು ಆಡಿಸುವ ನಿರೀಕ್ಷೆಯಿದೆ.

ಮತ್ತೊಂದೆಡೆ, ಲಾಕಿ ಫರ್ಗ್ಯುಸನ್ ಅವರಿಗೆ ಆಡುವ ಇಲೆವೆನ್​ನಲ್ಲಿ ಅವಕಾಶ ಕಲ್ಪಿಸಿದ್ದು ಕೆಕೆಆರ್ ಟೀಮಿಗೆ ಭಾರಿ ಪ್ರಯೋಜನವಾಗಿದೆ. ಹೈದರಾಬಾದ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಫರ್ಗ್ಯುಸನ್ 3 ವಿಕೆಟ್ ಪಡೆದರಲ್ಲದೆ, ಸೂಪರ್ ಓವರನ್ನು ಬೌಲ್ ಮಾಡಿ, ಡೇವಿಡ್ ವಾರ್ನರ್ ಮತ್ತು ಅಬ್ದುಲ್ ಸಮದ್ ಅವರನ್ನು ಔಟ್ ಮಾಡಿ ಕೊಲ್ಕತಾಗೆ ಗೆಲುವು ತಂದುಕೊಟ್ಟರು.

ಸಾಮಾನ್ಯವಾಗಿ ತಮ್ಮ ನಿರ್ದಯಿ ಹೊಡೆತ ಹಾಗೂ ಶರವೇಗದ ಬ್ಯಾಟಿಂಗ್ ಮೂಲಕ ಮೈದಾನಗಳಿಗೆ ಕಿಚ್ಚು ಹೊತ್ತಿಸುವ ವೆಸ್ಟ್ ಇಂಡೀಸ್ ದೈತ್ಯ ಆಂದ್ರೆ ರಸ್ಸೆಲ್ ಸತತವಾಗಿ ನಿರಾಶೆ ಮೂಡಿಸುತ್ತಿರುವುದು ಕೆಕೆಆರ್ ತಂಡಕ್ಕೆ ನುಂಗಲಾಗದ ತುತ್ತಾಗಿದೆ. ಪ್ರಾಯಶಃ ಇವತ್ತಿನ ಪಂದ್ಯಕ್ಕೆ ಅವರನ್ನ ಕೈಬಿಟ್ಟು ಕ್ರಿಸ್ ಗ್ರೀನ್ ಅವರನ್ನು ಆಡಿಸಬಹುದು.

ಹಾಗೆಯೇ ಮತ್ತೊಬ್ಬ ಕೆರೀಬಿಯನ್, ಸುನಿಲ್ ನರೈನ್ ಅವರನ್ನು ಇಂದು ಸಹ ಆಡುವ ಹನ್ನೊಂದರಲ್ಲಿ ಸೇರಿಸದಿರಬಹುದು. ಹಿಂದೆಲ್ಲ ಮ್ಯಾಚ್ ವಿನ್ನರ್ ಆಗಿದ್ದ ನರೈನ್ ಈಗ ಟೀಮಿಗೆ ಹೊರೆಯೆನಿಸುತ್ತಿರುವುದು ನಿಜಕ್ಕೂ ವಿಪರ್ಯಾಸ.

ಶುಬ್​ಮನ್ ಗಿಲ್ ಜೊತೆ ಪುನಃ ರಾಹುಲ್ ತ್ರಿಪಾಠಿ ಇನ್ನಿಂಗ್ಸ್ ಆರಂಭಿಸಿದರೆ ಮೂರನೇ ಕ್ರಮಾಂಕದಲ್ಲಿ ನಿತಿಷ್ ರಾಣಾ ಆಡಲಿದ್ದಾರೆ. ಹೈದರಾಬಾದ್ ವಿರುದ್ಧ ಕಾರ್ತೀಕ್ ಮತ್ತು ಮೊರ್ಗನ್ 58 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡು ಟೀಮಿಗೆ ಆಸರೆಯಾಗಿದ್ದರು. ಇವತ್ತಿನ ಪಂದ್ಯದಲ್ಲೂ ಅವರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್​ನಲ್ಲಿ ಸಹ ಮಿಂಚುತ್ತಿರುವುದು ಕೆಕೆಆರ್​ ಟೀಮಿಗೆ ಆಶಾದಾಯಕ ಬೆಳವಣಿಗೆ.

ಆಗಲೇ ಚರ್ಚಿಸಿದಂತೆ ಫರ್ಗ್ಯುಸನ್ ಅವರ ಆಡುತ್ತಿರುವುದು ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ. ಸ್ಪಿನ್ನರ್​ಗಳಾದ ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಅವರಿಂದ ಮ್ಯಾಚ್ ವಿನ್ನಿಂಗ್ ಪರ್ಫಾಮನ್ಸ್​ಗಳು ಬರುತ್ತಿಲ್ಲ. ನರೈನ್ ಅನುಪಸ್ಥಿತಿಯಲ್ಲಿ ಅವರ ಮೇಲೆ ಟೀಮಿನ ನಿರೀಕ್ಷೆ ಹೆಚ್ಚಾಗಿರುವುದು ಸಹಜವೇ.

Published On - 4:26 pm, Wed, 21 October 20

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್