ಎಸ್​ಆರ್​ಹೆಚ್-ಆರ್​ಆರ್ ಪಂದ್ಯ: ಗೆದ್ದವರ ಆಸೆ ಮಾತ್ರ ಜೀವಂತ

ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿಯ 40 ನೇ ಪಂದ್ಯ ಇಂದು ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಕ್ರಮವಾಗಿ 7ಮತ್ತು 6ನೇ ಸ್ಥಾನದಲ್ಲಿರುವ ಹೈದರಾಬಾದ್ ಮತ್ತು ರಾಯಲ್ಸ್ ಎರಡು ತಂಡಗಳಿಗೂ ಪ್ಲೇ ಆಫ್​ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಬೇಕಾದರೆ ಇಂದು ಗೆಲ್ಲಲೇಬೇಕಾದ ಸ್ಥಿತಿಯಿದೆ. ಸ್ಟಿವೆನ್ ಸ್ಮಿತ್ ನಾಯಕತ್ವದ ರಾಯಲ್ಸ್ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 8 ಅಂಕ ಗಳಿಸಿದ್ದರೆ, 9ರಲ್ಲಿ 3 ಗೆದ್ದು 6 ರಲ್ಲಿ […]

ಎಸ್​ಆರ್​ಹೆಚ್-ಆರ್​ಆರ್ ಪಂದ್ಯ: ಗೆದ್ದವರ ಆಸೆ ಮಾತ್ರ ಜೀವಂತ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಸಾಧು ಶ್ರೀನಾಥ್​

Updated on:Oct 22, 2020 | 5:04 PM

ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿಯ 40 ನೇ ಪಂದ್ಯ ಇಂದು ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಕ್ರಮವಾಗಿ 7ಮತ್ತು 6ನೇ ಸ್ಥಾನದಲ್ಲಿರುವ ಹೈದರಾಬಾದ್ ಮತ್ತು ರಾಯಲ್ಸ್ ಎರಡು ತಂಡಗಳಿಗೂ ಪ್ಲೇ ಆಫ್​ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಬೇಕಾದರೆ ಇಂದು ಗೆಲ್ಲಲೇಬೇಕಾದ ಸ್ಥಿತಿಯಿದೆ. ಸ್ಟಿವೆನ್ ಸ್ಮಿತ್ ನಾಯಕತ್ವದ ರಾಯಲ್ಸ್ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 8 ಅಂಕ ಗಳಿಸಿದ್ದರೆ, 9ರಲ್ಲಿ 3 ಗೆದ್ದು 6 ರಲ್ಲಿ ಸೋಲುಂಡಿರುವ ಹೈದರಾಬಾದ್ ಬುಟ್ಟಿಯಲ್ಲಿ ಕೇವಲ 6 ಅಂಕಗಳಿವೆ.

ಇವರೆಡು ತಂಡಗಳು ಮೊದಲ ಸುತ್ತಿನಲ್ಲಿ ಎದುರಾದಾಗ ದಕ್ಷಿಣ ಭಾರತದ ತಂಡಕ್ಕೆ ಗೆಲ್ಲುವ ಸುವರ್ಣಾವಕಾಶವಿತ್ತು. ಆದರೆ ರಾಹುಲ್ ತೆವಾಟಿಯ ಮತ್ತು ರಿಯಾನ್ ಪರಾಗ್ ಮಿಂಚಿನ ಗತಿಯ 85ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡು ಅಸಂಭವವೆನಿಸಿದ್ದ ಗೆಲುವನ್ನು ಸಾಧ್ಯವಾಗಿಸಿದರು. ಗೆಲುವಿನ ಹೊಡೆತ ಬಾರಿಸಿದ ನಂತರ 18 ವರ್ಷ ವಯಸ್ಸಿನ ಪರಾಗ್ ಆಸ್ಸಾಮಿನ ಸಾಂಪ್ರದಾಯಿಕ ಬಿಹು ನೃತ್ಯ ಮಾಡಿದ್ದು ಟಿವಿ ವೀಕ್ಷಕರ ಮನಸೆಳೆದಿತ್ತು. [yop_poll id=”19″]

ಎರಡು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಮಾಜಿ ಆಟಗಾರರಿಂದ ಮೆಚ್ಚುಗೆ ಗಿಟ್ಟಿಸಿದ್ದ ಸಂಜು ಸ್ಯಾಮ್ಸನ್ ಆಮೇಲೆ ಆಡಿರುವ ಎಲ್ಲ ಮ್ಯಾಚ್​ಗಳಲ್ಲಿ ವಿಫಲರಾಗಿರುವುದು ರಾಯಲ್ಸ್ ತಂಡದ ನೀರಸ ಪ್ರದರ್ಶನಗಳಿಗೆ ಕಾರಣವಾಗಿದೆ. ಈ ಟೀಮಿಗೆ ಈಗ ಕೇವಲ 4 ಪಂದ್ಯಗಳು ಮಾತ್ರ ಉಳಿದಿವೆ. ಎಲ್ಲ ನಾಲ್ಕರಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್​ನಲ್ಲಿ ಸ್ಥಾನ ಸಿಗುತ್ತದೆ. ತಂಡದ ಪ್ರಸ್ತುತ ಮನಸ್ಥಿತಿ ನೋಡಿದರೆ ಇದು ದುಸ್ಸಾಧ್ಯ ಎಂದೆನಿಸದಿರದು. ಯಾಕೆಂದರೆ ಬ್ಯಾಟಿಂಗ್​ನಲ್ಲಿ ಜೊಸ ಬಟ್ಲರ್ ಮತ್ತು ಸ್ಮಿತ್ ಬಿಟ್ಟರೆ ಉಳಿದವರು ರನ್ ಸ್ಕೋರ್ ಮಾಡುತ್ತಿಲ್ಲ. ಕಳೆದ ಪಂದ್ಯದಲ್ಲಿ ಆರಂಭ ಆಟಗಾರನಾಗಿ ಆಡಿದ ರಾಬಿನ್ ಉತ್ತಪ್ಪ ಮಿಂಚಿದರು. ಆದರೆ, ಬೆನ್ ಸ್ಟೋಕ್ಸ್ ಅವರನ್ನು ನಂಬರ್ 2 ಸ್ಥಾನದಲ್ಲಿ ಆಡಿಸುತ್ತಿರುವ ಮರ್ಮ ಯಾರಿಗೂ ಅರ್ಥವಾಗುತ್ತಿಲ್ಲ. ಬೆನ್, ಮಧ್ಯಮ ಕ್ರಮಾಂಕದ ಆಟಗಾರ ಮತ್ತು ಅವರ ಬ್ಯಾಟಿಂಗ್ ಶೈಲಿಗೆ 5ನೇ ಕ್ರಮಾಂಕ ಸೂಟ್ ಆಗುತ್ತದೆ. ಟೀಮ್ ಮ್ಯಾನೇಜ್ಮೆಂಟ್ ಇದನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ಬಹಳ ತಡವಾಗಬಹುದು. ತೆವಾಟಿಯ ಮತ್ತು ಪರಾಗ್ ಪ್ರದರ್ಶನಗಳಲ್ಲಿ ಸ್ಥಿರತೆಯಿಲ್ಲ.

ಬೌಲಿಂಗ್ ವಿಭಾಗದಲ್ಲೂ ರಾಯಲ್ಸ್​ಗೆ ಸಮಸ್ಯೆಗಳಿವೆ. ಜೊಫ್ರಾ ಆರ್ಚರ್ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಬೌಲರ್​ನಿಂದ ಉಲ್ಲೇಖಾರ್ಹ ಸಾಧನೆ ಆಗುತ್ತಿಲ್ಲ. ಜಯದೇವ ಉನಾಡ್ಕಟ್, ಅಂಕಿತ್ ರಜಪೂತ್, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ ಮೊದಲಾದವರೆಲ್ಲ ಉತ್ತಮ ಬೌಲರ್​ಗಳೇ, ಆದರೆ ಮರಳುಗಾಡಿನ ಪಿಚ್​ಗಳಲ್ಲಿ ಅವರು ಲಯ, ದಿಶೆ, ನಿಯಂತ್ರಣ ಎಲ್ಲ ಕಳೆದುಕೊಂಡಿದ್ದಾರೆ.

ಹೈದರಾಬಾದ್, ರಾಯಲ್ಸ್​ಗಿಂತ ಒಂದು ಸ್ಥಾನ ಕೆಳಗಿರುವುದರಿಂದ ಅದರ ಸ್ಥಿತಿಯೂ ದಯನೀಯವಾಗಿದೆ. ವಾರ್ನರ್, ಜಾನಿ ಬೇರ್​ಸ್ಟೋ, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ ಮತ್ತು ರಶೀದ್ ಖಾನ್ ಮೊದಲಾದ ಚಾಂಪಿಯನ್ ಪರ್ಫಾಮರ್​ಗಳು ತಂಡದಲ್ಲಿದ್ದರೂ ಅದು 13ನೇ ಅವೃತ್ತಿಯಿಂದ ಹೊರಬೀಳುವ ಸ್ಥಿತಿಯಲ್ಲಿದೆ. ಒಂದು ಓವರ್​ನಲ್ಲಿ 6 ಎಸೆತಗಳನ್ನು ಯಾರ್ಕರ್ ಎಸೆಯಬಲ್ಲ ಖ್ಯಾತಿಯ ಟಿ ನಟರಾಜನ್ ಅವರಿಂದಲೂ ಟೀಮನ್ನು ಶೋಚನೀಯ ಸ್ಥಿತಿಯಿಂದ ಮೇಲೆತ್ತಲಾಗುತ್ತಿಲ್ಲ

2019ರ ಐಪಿಎಲ್ ಸೀಸನ್​ನಲ್ಲಿ 1 ಶತಕ ಮತ್ತು 8 ಅರ್ಧ ಶತಕ ಸೇರಿ ಒಟ್ಟು 692 ರನ್ ಗಳಿಸಿದ್ದ ನಾಯಕ ವಾರ್ನರ್ ಈ ಸಲ ಕೇವಲ 2 ಫಿಫ್ಟಿಗಳನ್ನು ಬಾರಿಸುವಲ್ಲಿ ಮಾತ್ರ ಸಫಲರಾಗಿದ್ದಾರೆ. ಅವರ ಓಪನಿಂಗ್ ಜೊತೆಗಾರ ಬೇರ್​ಸ್ಟೋ ಒಮ್ಮೆ ಶತಕದ ಅಂಚಿನಲ್ಲಿ ಔಟಾದರು. ಅದಾದ ನಂತರ ಅವರು ಸ್ಟಾರ್ಟ್​ಗಳನ್ನು ಪಡೆದರೂ ಅವುಗಳನ್ನು ಬಿಗ್ ಇನ್ನಿಂಗ್ಸ್​ಗಳಲ್ಲಿ ಪರಿವರ್ತಿಸಲು ವಿಫಲರಾಗಿದ್ದಾರೆ. ವಿಲಿಯಮ್ಸನ್ ಮತ್ತು ರಶೀದ್ ತಮ್ಮ ಖ್ಯಾತಿಗೆ ತಕ್ಕ ಪರ್ಫಾಮನ್ಸ್​ಗಳನ್ನು ನೀಡುತ್ತಿದ್ದಾರೆ.

ಒಟ್ಟಿನಲ್ಲಿ, ಹೈದರಾಬಾದ್ ಮತ್ತು ರಾಯಲ್ಸ್ ಎರಡಕ್ಕೂ ಇವತ್ತು ಮಾಡು ಇಲ್ಲವೇ ಮಡಿ ಸ್ಥಿತಿ, ಗೆದ್ದ ಟೀಮು ಟೂರ್ನಿಯಲ್ಲಿ ಮುಂದೆ ಸಾಗುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುತ್ತದೆ. ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಸ್ಥಾನಕ್ಕೆ ಬಂದಿರುವ ಜೇಸನ್ ಹೋಲ್ಡರ್​ರನ್ನು ಹೈದರಾಬಾದ ಇಂದು ಆಡಿಸುವ ನಿರೀಕ್ಷೆಯಿದೆ. 

Published On - 4:59 pm, Thu, 22 October 20

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ