IPL 2020: ಹೈದ್ರಾಬಾದ್-ರಾಜಸ್ಥಾನ್ ನಡುವಿನ ಪಂದ್ಯದ ರೋಚಕ ದೃಶ್ಯಾವಳಿಗಳು..
ಸನ್ರೈಸರ್ಸ್ ಹೈದ್ರಾಬಾದ್ 18.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸ್ತು. ಇದ್ರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇ ಲಗ್ಗೆಯಿಟ್ಟಿತು. ರಾಜಸ್ಥಾನ ರಾಯಲ್ಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಮಾಡಿದ್ದ ಕನ್ನಡಿಗ ಮನೀಶ್ ಪಾಂಡೆ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಪಡೆದುಕೊಂಡ್ರು. ರಾಯಲ್ಸ್ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಪಾಂಡೆ, 47 ಎಸೆತಗಳಲ್ಲ 8 ಸಿಕ್ಸರ್ಗಳ ನೆರವಿನಿಂದಾಗಿ ಅಜೇಯ 83 ರನ್ ಗಳಿಸಿದ್ರು. ನಿನ್ನೆಯ ಪಂದ್ಯದಲ್ಲಿ 4 ರನ್ ಗಳಿಸಿದ್ದ ಡೇವಿಡ್ ವಾರ್ನರ್, ಡೆಡ್ಲಿ ಯಾರ್ಕರ್ ಜೋಫ್ರಾ ಅರ್ಚರ್ಗೆ […]
ಸನ್ರೈಸರ್ಸ್ ಹೈದ್ರಾಬಾದ್ 18.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸ್ತು. ಇದ್ರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇ ಲಗ್ಗೆಯಿಟ್ಟಿತು.
ರಾಜಸ್ಥಾನ ರಾಯಲ್ಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಮಾಡಿದ್ದ ಕನ್ನಡಿಗ ಮನೀಶ್ ಪಾಂಡೆ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಪಡೆದುಕೊಂಡ್ರು. ರಾಯಲ್ಸ್ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಪಾಂಡೆ, 47 ಎಸೆತಗಳಲ್ಲ 8 ಸಿಕ್ಸರ್ಗಳ ನೆರವಿನಿಂದಾಗಿ ಅಜೇಯ 83 ರನ್ ಗಳಿಸಿದ್ರು.
ನಿನ್ನೆಯ ಪಂದ್ಯದಲ್ಲಿ 4 ರನ್ ಗಳಿಸಿದ್ದ ಡೇವಿಡ್ ವಾರ್ನರ್, ಡೆಡ್ಲಿ ಯಾರ್ಕರ್ ಜೋಫ್ರಾ ಅರ್ಚರ್ಗೆ ವಿಕೆಟ್ ಒಪ್ಪಿಸಿದ್ರು. ಇದ್ರೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಎರಡನೇ ಪಂದ್ಯದಲ್ಲೂ ಡೇವಿಡ್ ವಾರ್ನರ್, ಜೋಫ್ರಾ ಬೌಲಿಂಗ್ನಲ್ಲಿ ಔಟಾದ್ರು.
ಈ ಬಾರಿಯ ಐಪಿಎಲ್ನಲ್ಲಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್, ಮೊದಲ ಪಂದ್ಯವನ್ನ ಆಡಿದ್ರು. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಹೋಲ್ಡರ್, 33 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದು ಮಿಂಚಿದ್ರು.
ಕಳೆದ ಆರು ಪಂದ್ಯಗಳಿಂದ ಫಾರ್ಮ್ ಕಳೆದುಕೊಂಡಿದ್ದ ಸಂಜು ಸ್ಯಾಮ್ಸನ್, ಹೈದ್ರಾಬಾದ್ ವಿರುದ್ಧ ಕಳಪೆ ಫಾರ್ಮ್ನಿಂದ ಹೊರಬಂದ್ರು. 36 ರನ್ ಗಳಿಸಿದ್ದ ಸ್ಯಾಮ್ಸನ್ ಜೇಸನ್ ಹೋಲ್ಡರ್ ಎಸೆತದಲ್ಲಿ ಬೌಲ್ಡ್ ಆದ್ರು
ರಾಜಸ್ಥಾನ ವಿರುದ್ಧ ಗೆದ್ದ ನಂತ್ರ ಹೈದ್ರಾಬಾದ್ ನಾಯಕ ಡೇವಿಡ್ ವಾರ್ನರ್ ಸಂತಸ ವ್ಯಕ್ತಪಡಿಸಿದ್ದಾರೆ. ಪಂದ್ಯವನ್ನ ನಾವು ಆರಂಭಿಸಿದ ರೀತಿ ಅದ್ಭುತವಾಗಿತ್ತು. ಇಬ್ಬರು ಆಟಗಾರರು ಗೆಲುವಿಗೆ ಕಾರಣವಾದ್ರ ಎಂದು ವಾರ್ನರ್ ಹೇಳಿದ್ದಾರೆ.
ಐಪಿಎಲ್ ಕರಿಯರ್ನಲ್ಲಿ ಆಲ್ರೌಂಡರ್ ವಿಜಯ್ ಶಂಕರ್, ಮೂರನೇ ಅರ್ಧಶತಕ ಬಾರಿಸಿದ್ರು. ರಾಯಲ್ಸ್ ವಿರುದ್ಧ 51 ಬಾಲ್ಗಳಲ್ಲಿ 4 ಬೌಂಡರಿ ಬಾರಿಸೋದ್ರೊಂದಿಗೆ ಅರ್ಧಶತಕ ಬಾರಿಸಿದ ಸಾಧನೆ ಮಾಡಿದ್ರು.