ಡಿಕೆ ಶಿವಕುಮಾರ್​ಗೆ RCB ಛತ್ರಿ ಹಿಡಿದ ಅಭಿಮಾನಿಗಳು.. ಅದರಿಂದಲೇ RCBಗೆ ಒಲಿಯಿತಂತೆ ಅದೃಷ್ಟ!

ಡಿಕೆ ಶಿವಕುಮಾರ್​ಗೆ RCB ಛತ್ರಿ ಹಿಡಿದ ಅಭಿಮಾನಿಗಳು.. ಅದರಿಂದಲೇ RCBಗೆ ಒಲಿಯಿತಂತೆ ಅದೃಷ್ಟ!

ತುಮಕೂರು: ನವೆಂಬರ್ 03ರಂದು ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಪ್ರಚಾರ ನಡೆಸಿದ್ದರು. ಈ ವೇಳೆ ಡಿಕೆಶಿ ಬೆಂಬಲಿಗರು ಐಪಿಎಲ್​ ಪಂದ್ಯಾವಳಿಯ ಆರ್​ಸಿಬಿ ತಂಡದ ಲಾಂಚನವಿರುವ ಛತ್ರಿ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಡಿಕೆ ಶಿವಕುಮಾರ್​ಗೆ ಛತ್ರಿ ಹಿಡಿದ ಮೇಲೆ ಆರ್​ಸಿಬಿಗೆ ಒಲಿಯಿತು ಗೆಲುವಿನ ಲಕ್ಷ್ಮೀ..!?  ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡ ಆಲದ ಮರ ಬಳಿ ಪ್ರಚಾರ ನಡೆಸುವ ವೇಳೆ ದಿಢೀರಾಗಿ ತುಂತುರು ಮಳೆ ಬಂದ ಹಿನ್ನೆಲೆಯಲ್ಲಿ ಡಿಕೆಶಿ ಬೆಂಬಲಿಗರು ಸಮೀಪದಲ್ಲೇ ಇದ್ದ […]

Ayesha Banu

| Edited By: sadhu srinath

Oct 23, 2020 | 10:52 AM

ತುಮಕೂರು: ನವೆಂಬರ್ 03ರಂದು ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಪ್ರಚಾರ ನಡೆಸಿದ್ದರು. ಈ ವೇಳೆ ಡಿಕೆಶಿ ಬೆಂಬಲಿಗರು ಐಪಿಎಲ್​ ಪಂದ್ಯಾವಳಿಯ ಆರ್​ಸಿಬಿ ತಂಡದ ಲಾಂಚನವಿರುವ ಛತ್ರಿ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಡಿಕೆ ಶಿವಕುಮಾರ್​ಗೆ ಛತ್ರಿ ಹಿಡಿದ ಮೇಲೆ ಆರ್​ಸಿಬಿಗೆ ಒಲಿಯಿತು ಗೆಲುವಿನ ಲಕ್ಷ್ಮೀ..!?  ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡ ಆಲದ ಮರ ಬಳಿ ಪ್ರಚಾರ ನಡೆಸುವ ವೇಳೆ ದಿಢೀರಾಗಿ ತುಂತುರು ಮಳೆ ಬಂದ ಹಿನ್ನೆಲೆಯಲ್ಲಿ ಡಿಕೆಶಿ ಬೆಂಬಲಿಗರು ಸಮೀಪದಲ್ಲೇ ಇದ್ದ ಅಂಗಡಿಯಿಂದ ಆರ್.ಸಿ.ಬಿ ಕೊಡೆಯನ್ನು ತಂದು ಡಿಕೆ ಶಿವಕುಮಾರ್​ಗೆ ಹಿಡಿದಿದ್ದರು.

ಸದ್ಯ ಈಗ ಈ ಫೋಟೋ ವೈರಲ್ ಆಗಿದೆ. ಆರ್​ಸಿಬಿ ಅಭಿಮಾನಿಗಳು, ಡಿಕೆ ಶಿವಕುಮಾರ್​ಗೆ ಛತ್ರಿ ಹಿಡಿದ ಮೇಲೆ ಆರ್​ಸಿಬಿಗೆ ಒಲಿಯಿತು ಗೆಲುವಿನ ಲಕ್ಷ್ಮೀ ಅಂತ ಟೈಟಲ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada