ಕೋಲಾರದಲ್ಲಿ ಸಿದ್ದು ಸ್ಪರ್ಧೆ ಘೋಷಣೆಯಿಂದ ಬಿಜೆಪಿ ನಾಯಕರಿಗೆ ನಡುಕ ಶುರುವಾಗಿದೆ: ನಂಜೇಗೌಡ ಟಾಂಗ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 10, 2023 | 7:55 PM

ಕೋಲಾರದಲ್ಲಿ ಸಿದ್ದು ಸ್ಪರ್ಧೆ ಘೋಷಣೆ ಕುರಿತು ವ್ಯಂಗ ಮಾಡಿದ ಬಿಜೆಪಿ ಸಂಸದ ಮುನಿಸ್ವಾಮಿ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ವಿರುದ್ಧ ಮಾಲೂರಿನಲ್ಲಿ ಕೈ ಶಾಸಕ ಕೆ.ವೈ.ನಂಜೇಗೌಡ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ಸಿದ್ದು ಸ್ಪರ್ಧೆ ಘೋಷಣೆಯಿಂದ ಬಿಜೆಪಿ ನಾಯಕರಿಗೆ ನಡುಕ ಶುರುವಾಗಿದೆ: ನಂಜೇಗೌಡ ಟಾಂಗ್
ಕೈ ಶಾಸಕ ಕೆ.ವೈ.ನಂಜೇಗೌಡ
Follow us on

ಕೋಲಾರ: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ವಿಚಾರವಾಗಿ ವ್ಯಂಗ್ಯ ಮಾಡಿದ್ದ ಬಿಜೆಪಿ ಸಂಸದ ಮುನಿಸ್ವಾಮಿ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ವಿರುದ್ಧ ಮಾಲೂರಿನಲ್ಲಿ ಕೈ ಶಾಸಕ ಕೆ.ವೈ.ನಂಜೇಗೌಡ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುತ್ತಾರೆ ಎಂದಾಕ್ಷಣ ಬಿಜೆಪಿ ನಾಯಕರಿಗೆ ನಡುಕ ಶುರುವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಒಬ್ಬ ನಾಯಕನ ಬಗ್ಗೆ ಮಾತನಾಡ್ಬೇಕು ಅಂದರೆ ನಮ್ಮ ಯೋಗ್ಯತೆ ಏನು ಎಂದು ತಿಳಿದುಕೊಳ್ಳಬೇಕು, ನೀವು ಸಿದ್ದರಾಮಯ್ಯ ಅವರ ಬಗ್ಗೆ ಮಾತಾಡುವಷ್ಟು ದೊಡ್ಡ ನಾಯಕರಾ? ಜಿಲ್ಲೆಯಲ್ಲಿ ಲೋಕಸಭಾ ಸದಸ್ಯರು ಅನ್ನೊದಕ್ಕೆ ಗೌರವ ಇಲ್ಲದಂತಾಗಿದೆ, ಮೊದಲು ಸಿದ್ದರಾಮಯ್ಯ ಅವರ ಬಗ್ಗೆ ವ್ಯಂಗ್ಯವಾಗಿ ಮಾತನಾಡೊದನ್ನ ಬಿಡ್ಬೇಕು, ಸಿದ್ದರಾಮಯ್ಯ ಅವರು ಪ್ರಶ್ನಾತೀತ ನಾಯಕ ಎನ್ನುವ ಮೂಲಕ ಶಾಸಕ ಕೆ.ವೈ.ನಂಜೇಗೌಡ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಸಿದ್ದರಾಮಯ್ಯಗೆ ಯಾವುದೇ ಜಿಡಿಎಸ್, ಬಿಜೆಪಿ ಸರಿಸಾಟಿ ಇಲ್ಲ, ಕೋಲಾರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ. ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿ ಬಿಜೆಪಿಯಲ್ಲಿರುವಂತಹ ಬಣ ರಾಜಕೀಯ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ, ಮೊದಲು ನಿಮ್ಮ ಬಿಜೆಪಿ ಪಕ್ಷದಲ್ಲಿರುವ ಭಿನ್ನಮತ ಸರಿ ಮಾಡಿಕೊಳ್ಳಿ ಎಂದು ಬಿಜೆಪಿ ಸಂಸದರಿಗೆ ನಂಜೇಗೌಡ ಟಾಂಗ್​ ಕೊಟ್ಟರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Tue, 10 January 23