ಬೈ ಎಲೆಕ್ಷನ್ ಭರಾಟೆ ಜೋರು, ಕೈ ನಾಯಕರ ಪ್ರಚಾರ ಮಾತ್ರ ನಾಮ್​ ಕೆ ವಾಸ್ತೆ!

|

Updated on: Nov 21, 2019 | 12:55 PM

ಬೆಂಗಳೂರು: ಡಿಸೆಂಬರ್15ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ವಾಪಸ್​ಗೆ ಕೊನೆಯ ದಿನವಾಗಿದೆ. ಅಖಾಡದಲ್ಲಿ ಯಾರೆಲ್ಲ ಸೆಣೆಸಲಿದ್ದಾರೆ ಎಂಬ ಚಿತ್ರಣ ಸ್ಪಷ್ಟವಾಗಲಿದೆ. ಉಪಚುನಾವಣೆ ಸಿದ್ಧತೆ ಭರದಿಂದ ಸಾಗುತ್ತಿದ್ದರೂ ಪ್ರಮುಖ ಪಕ್ಷವಾದ ಕಾಂಗ್ರೆಸ್ ಹೆಚ್ಚು ಆಸಕ್ತಿಯಿಂದ ಸಕ್ರಿಯವಾಗಿಲ್ಲ ಎಂಬುದು ಗೋಚರವಾಗುತ್ತಿದೆ. ಪಕ್ಷದ ನಾಯಕರಿಗೆ ಯಾವುದೇ ರೀತಿಯ ಹುಮ್ಮಸ್ಸು ಇದ್ದಂತಿಲ್ಲ. ಇನ್ನೂ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡದ ಕಾಂಗ್ರೆಸ್, ಈಗ ಕೇವಲ ಇಬ್ಬರು ನಾಯಕರ ಪ್ರವಾಸ ಮಾತ್ರ ನಿಗದಿ ಮಾಡಿದೆ. ಸಿದ್ದರಾಮಯ್ಯ ಮತ್ತು ದಿನೇಶ್ […]

ಬೈ ಎಲೆಕ್ಷನ್ ಭರಾಟೆ ಜೋರು, ಕೈ ನಾಯಕರ ಪ್ರಚಾರ ಮಾತ್ರ ನಾಮ್​ ಕೆ ವಾಸ್ತೆ!
Follow us on

ಬೆಂಗಳೂರು: ಡಿಸೆಂಬರ್15ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ವಾಪಸ್​ಗೆ ಕೊನೆಯ ದಿನವಾಗಿದೆ. ಅಖಾಡದಲ್ಲಿ ಯಾರೆಲ್ಲ ಸೆಣೆಸಲಿದ್ದಾರೆ ಎಂಬ ಚಿತ್ರಣ ಸ್ಪಷ್ಟವಾಗಲಿದೆ. ಉಪಚುನಾವಣೆ ಸಿದ್ಧತೆ ಭರದಿಂದ ಸಾಗುತ್ತಿದ್ದರೂ ಪ್ರಮುಖ ಪಕ್ಷವಾದ ಕಾಂಗ್ರೆಸ್ ಹೆಚ್ಚು ಆಸಕ್ತಿಯಿಂದ ಸಕ್ರಿಯವಾಗಿಲ್ಲ ಎಂಬುದು ಗೋಚರವಾಗುತ್ತಿದೆ. ಪಕ್ಷದ ನಾಯಕರಿಗೆ ಯಾವುದೇ ರೀತಿಯ ಹುಮ್ಮಸ್ಸು ಇದ್ದಂತಿಲ್ಲ.

ಇನ್ನೂ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡದ ಕಾಂಗ್ರೆಸ್, ಈಗ ಕೇವಲ ಇಬ್ಬರು ನಾಯಕರ ಪ್ರವಾಸ ಮಾತ್ರ ನಿಗದಿ ಮಾಡಿದೆ. ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಮಾತ್ರ ಪ್ರವಾಸಗಳಲ್ಲಿ ಸಕ್ರಿಯರಾಗಿದ್ದು, ಉಳಿದಂತೆ ಬಹುತೇಕ ‘ಕೈ’ ನಾಯಕರು ಪ್ರಚಾರದಿಂದ ದೂರವೇ ಉಳಿದಿದ್ದಾರೆ.

ಡಿ.ಕೆ. ಶಿವಕುಮಾರ್‌ರಿಂದ ನಾಮಕಾವಸ್ತೆ ಮಾತ್ರ ಪ್ರಚಾರ ನಡೆದಿದೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಸಹ ಚುನಾವಣಾ ಪ್ರಚಾರದಿಂದ ದೂರ ದೂರವೇ ಇದ್ದಾರೆ.

Published On - 11:12 am, Thu, 21 November 19