ಕೊರೊನಾ ಸೋಂಕಿತರ ಸಾವು, ತಪ್ಪಿತಸ್ಥ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ

| Updated By:

Updated on: Jul 10, 2020 | 9:34 PM

ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲೆಂದೆರಲ್ಲಿ ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗದೆ ಸೋಂಕಿತರು ಸಾಯುತ್ತಿರುವುದರ ಕುರಿತು, ಅದರಲ್ಲೂ ಇತ್ತೀಚೆಗೆ ಒಂಬತ್ತು ಆಸ್ಪತ್ರೆಗಳಿಗೆ ಅಲೆದು ಸೋಂಕಿತರೊಬ್ಬರು ಸಾವನ್ನಪ್ಪಿರುವ ಘಟನೆ ಬಗ್ಗೆ ಕರ್ನಾಟಕ ಹೈಕೋರ್ಟ್‌ ಗರಂ‌ ಆಗಿದೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ವಿಚಾರಣೆ ನಡೆಸಿದ ಹೈಕೋರ್ಟ್‌, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆಸ್ಪತ್ರೆಗಳಿಗೆ ಕಠಿಣ ಸಂದೇಶ ರವಾನಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಚಿಕಿತ್ಸೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ  ಎ.ಎಸ್. ಒಕಾ […]

ಕೊರೊನಾ ಸೋಂಕಿತರ ಸಾವು, ತಪ್ಪಿತಸ್ಥ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ
ಕರ್ನಾಟಕ ಹೈಕೋರ್ಟ್​
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲೆಂದೆರಲ್ಲಿ ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗದೆ ಸೋಂಕಿತರು ಸಾಯುತ್ತಿರುವುದರ ಕುರಿತು, ಅದರಲ್ಲೂ ಇತ್ತೀಚೆಗೆ ಒಂಬತ್ತು ಆಸ್ಪತ್ರೆಗಳಿಗೆ ಅಲೆದು ಸೋಂಕಿತರೊಬ್ಬರು ಸಾವನ್ನಪ್ಪಿರುವ ಘಟನೆ ಬಗ್ಗೆ ಕರ್ನಾಟಕ ಹೈಕೋರ್ಟ್‌ ಗರಂ‌ ಆಗಿದೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ವಿಚಾರಣೆ ನಡೆಸಿದ ಹೈಕೋರ್ಟ್‌, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆಸ್ಪತ್ರೆಗಳಿಗೆ ಕಠಿಣ ಸಂದೇಶ ರವಾನಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಚಿಕಿತ್ಸೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ  ಎ.ಎಸ್. ಒಕಾ ಮತ್ತು ನ್ಯಾ.ಅರವಿಂದ್ ಕುಮಾರ್ ರವರ ವಿಭಾಗೀಯ ಪೀಠ,  ಕೊರೊನಾ ಟೆಸ್ಟ್ ಆದವರಿಗೆ ವರದಿ‌ ನೀಡಲು ಆಗುತ್ತಿರುವ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಅಷ್ಟೇ ಅಲ್ಲ ಟೆಸ್ಟ್‌ ವರದಿ ವಿಳಂಬದಿಂದಾಗಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದೆ.

ಇಚ್ಚೀಚೆಗೆ ನ್ಯಾಯಾಧೀಶರೊಬ್ಬರ ತಂದೆಗೆ ಕೊರೊನಾ ಪಾಸಿಟಿವ್ ಇತ್ತು. ಪರಿಣಾಮ ವಸತಿ ಸಮುಚ್ಚಯದದಲ್ಲಿ ವಾಸಿಸುವ 14 ನ್ಯಾಯಾಧೀಶರು ಈಗ ಕ್ವಾರಂಟೈನ್ ಆಗಿದ್ದಾರೆ. ಜುಲೈ 4 ರಂದೇ ಟೆಸ್ಟ್ ಮಾಡಿಸಿದ್ದರೂ ಇನ್ನೂ ವರದಿ ಬಂದಿಲ್ಲ. ಜನಸಾಮಾನ್ಯರು ಟೆಸ್ಟ್ ಮಾಡಿಸಿದರೆ ವರದಿಗೆ ಎಷ್ಟು ಸಮಯ ಬೇಕು.  ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲಿಸಲು ಎಷ್ಟು ಸಮಯ ಬೇಕು. ಈ ಬಗ್ಗೆ ಸಮಗ್ರ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಹೈಕೋರ್ಟ್‌, ಕೊರೊನಾ ಸಂಕಷ್ಟವನ್ನ ಸಮರ್ಪಕವಾಗಿ ನಿರ್ವಹಿಸಲು ಒಂದು ವೆಬ್ ಸೈಟ್ ಆರಂಭಿಸಲು ಸಲಹೆ ನೀಡಿದೆ. ಇದರಲ್ಲಿ ಆಗಿಂದಾಗ್ಗೆ, ಖಾಲಿಯಾಗಿರುವ ಬೆಡ್ ಮತ್ತು ಆಸ್ಪತ್ರೆಗಳ ವಿವರ ನೀಡಿ. ಹಾಗೇನೇ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿ ಎಂದು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Published On - 6:10 pm, Fri, 10 July 20