ಸರಿಯಾದ ರಸ್ತೆ ಹಾಗಂದ್ರೇನು ಅಂತಾರೆ ಉಡುಪಿ ಜಿಲ್ಲೆಯ ಈ ಗ್ರಾಮಸ್ಥರು
ಉಡುಪಿ: ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಅಂತಾ ಹೇಳಿ ಅಧಿಕಾರಕ್ಕೆ ಬರೋ ರಾಜಕಾರಣಿಗಳು, ಅಧಿಕಾರ ಸಿಕ್ಕ ತಕ್ಷಣವೇ ಗ್ರಾಮಗಳನ್ನ ಮರೆತು ಸಿಟಿಯ ಎಸಿ ಕಚೇರಿಯಲ್ಲಿ ಮೈಮರೆಯುತ್ತಾರೆ. ಹೀಗೆ ನಿರ್ಲಕ್ಷ್ಯಕ್ಕೊಳಗಾದ ಗ್ರಾಮವೊಂದು ಉಡುಪಿ ಜಿಲ್ಲೆಯಲ್ಲಿದೆ. ಈ ಊರಿಗೆ ಹೋದ್ರೆ ಮೈಯಲ್ಲಿನ ನರನಾಡಿಗಳಿಗೆ ವ್ಯಾಯಾಮದ ಅನುಭವವಾಗುತ್ತೆ. ಗ್ರಾಮಸ್ಥರು ವೋಟು ಹಾಕಿ ಸುಸ್ತಾದರೇ ಹೊರತು ಗ್ರಾಮದ ಅಭಿವೃದ್ಧಿ ಆಗಲಿಲ್ಲ ಹೌದು ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿತ್ರೋಡಿ ಗ್ರಾಮ ಕಳೆದ ಹಲವಾರು ದಶಕಗಳಿಂದ ಅಭಿವೃದ್ದಿಯನ್ನೇ ಕಂಡಿಲ್ಲ. ಅಭಿವೃದ್ಧಿಯ ಹೆಸರಲ್ಲಿ […]
ಉಡುಪಿ: ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಅಂತಾ ಹೇಳಿ ಅಧಿಕಾರಕ್ಕೆ ಬರೋ ರಾಜಕಾರಣಿಗಳು, ಅಧಿಕಾರ ಸಿಕ್ಕ ತಕ್ಷಣವೇ ಗ್ರಾಮಗಳನ್ನ ಮರೆತು ಸಿಟಿಯ ಎಸಿ ಕಚೇರಿಯಲ್ಲಿ ಮೈಮರೆಯುತ್ತಾರೆ. ಹೀಗೆ ನಿರ್ಲಕ್ಷ್ಯಕ್ಕೊಳಗಾದ ಗ್ರಾಮವೊಂದು ಉಡುಪಿ ಜಿಲ್ಲೆಯಲ್ಲಿದೆ. ಈ ಊರಿಗೆ ಹೋದ್ರೆ ಮೈಯಲ್ಲಿನ ನರನಾಡಿಗಳಿಗೆ ವ್ಯಾಯಾಮದ ಅನುಭವವಾಗುತ್ತೆ.
ಗ್ರಾಮಸ್ಥರು ವೋಟು ಹಾಕಿ ಸುಸ್ತಾದರೇ ಹೊರತು ಗ್ರಾಮದ ಅಭಿವೃದ್ಧಿ ಆಗಲಿಲ್ಲ ಹೌದು ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿತ್ರೋಡಿ ಗ್ರಾಮ ಕಳೆದ ಹಲವಾರು ದಶಕಗಳಿಂದ ಅಭಿವೃದ್ದಿಯನ್ನೇ ಕಂಡಿಲ್ಲ. ಅಭಿವೃದ್ಧಿಯ ಹೆಸರಲ್ಲಿ ವೋಟು ಹಾಕಿಸಿಕೊಂಡ ಜನಪ್ರತಿನಿಧಿಗಳು ಚುನಾವಣೆಯ ನಂತರ ಗ್ರಾಮದತ್ತ ಸುಳಿದೇ ಇಲ್ಲ. ಗ್ರಾಮಸ್ಥರು ವೋಟು ಹಾಕಿ ಹಾಕಿ ಸುಸ್ತಾದರೇ ಹೊರತು ಗ್ರಾಮದ ಅಭಿವೃದ್ಧಿ ಆಗಲಿಲ್ಲ. ಅದ್ರಲ್ಲೂ ಗ್ರಾಮದ ಜನರಿಗೆ ಹೊರ ಊರಿಗೆ ಹೋಗಲು ಬರಲು ಅವಶ್ಯವಿರುವ ಮೂಲ ಸೌಕರ್ಯಗಳಲ್ಲಿ ಒಂದಾದ ರಸ್ತೆ ಭಾಗ್ಯ ಇಲ್ಲವೇ ಇಲ್ಲ.
ರಸ್ತೆಯಲ್ಲಿವೆ ಮೀನುಗಾರಿಕೆ ಹೊಂಡಗಳು ದಿನನಿತ್ಯ ಸಾವಿರಾರು ಜನರು ಮತ್ತು ವಾಹನ ಓಡಾಟ ಮಾಡುವ ಈ ರಸ್ತೆಯಲ್ಲಿ ಅನಾರೋಗ್ಯ ಪೀಡಿತರು ಹಾಗೂ ಶಾಲಾ ಮಕ್ಕಳು ದಿನನಿತ್ಯ ಗೋಳು ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯಾವರ ಪೇಟೆಯಿಂದ ಪಿತ್ರೋಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಈಗ ಮೀನುಗಾರಿಕೆಗೆ ಉಪಯೋಗಿಸಬಹುದಾದ ರಸ್ತೆಯಾಗಿದೆ. ಅಷ್ಟೋಂದು ಹೊಂಡಗಳಿವೆ ಈ ರಸ್ತೆಯಲ್ಲಿ.
ಶಾಸಕರ ಹಿಂಬಾಲಕರ ಮನೆ ರಸ್ತೆಗಳು ಮಾತ್ರ ಅಭಿವೃದ್ಧಿ ಸ್ಥಳೀಯ ಶಾಸಕರಿಂದ ಹಿಡಿದು ಗ್ರಾಮ ಪಂಚಾಯತಿ ಸದಸ್ಯರವರೆಗೂ ದಿನನಿತ್ಯ ಈ ರಸ್ತೆಯಲ್ಲಿ ಓಡಾಟ ಮಾಡುತ್ತಾರೆ. ಆದರೂ ಈ ರಸ್ತೆಯನ್ನು ಸರಿಪಡಿಸುವುದಕ್ಕೆ ಹೋಗಿಲ್ಲ. ಸ್ಥಳೀಯ ಶಾಸಕರ ಕೆಲ ಆಪ್ತರು ಮಾತ್ರ ತಮ್ಮ ಮನೆಗೆ ಹೋಗುವ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಿಸಿಕೊಂಡರೇ ಹೊರತು ಸಾರ್ವಜನಿಕರು ಓಡಾಡುವ ರಸ್ತೆಯನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಜನರಿಗೆ ಮಾತ್ರ ಅದೇ ರಸ್ತೆ, ಅದೇ ಗೋಳು, ಅದೇ ಹುಸಿ ಭರವಸೆ ಈ ನಡುವೆ ಮತ್ತೆ ಗ್ರಾಮ ಪಂಚಾಯಿತಿ ಚುನಾವಣೆಗೆ ಜನನಾಯಕರು ತಯಾರಿ ನಡೆಸಿದ್ದಾರೆ. ಅಧಿಕಾರದಲ್ಲಿದ್ದವರು ಇನ್ನಿಲ್ಲದ ಕುಂಟು ನೆಪ ಹೇಳುತ್ತಿದ್ರೆ, ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿರೋರು ಸ್ವರ್ಗವನ್ನೇ ಭೂಮಿಗೆ ಇಳಿಸುವ ಮಾತನಾಡುತ್ತಿದ್ದಾರೆ.
ಆದ್ರೆ ಗ್ರಾಮಕ್ಕೆ ಅವಶ್ಯವಿರುವ ರಸ್ತೆ ಮಾತ್ರ ಅದೇ ದುಸ್ಥಿತಿಯಲ್ಲಿದೆ. ಜನರಿಗೆ ಮಾತ್ರ ಅದೇ ರಸ್ತೆ, ಅದೇ ಗೋಳು, ಅದೇ ಹುಸಿ ಭರವಸೆ. ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ -ಹರೀಶ್ ಪಾಲೆಚ್ಚಾರ್
Published On - 7:25 pm, Fri, 10 July 20