‘ವಿಧಾನ ಪರಿಷತ್​​ನಲ್ಲಿ ಇನ್ಮುಂದೆ ಮೊಬೈಲ್​ ಬಳಕೆ​ ಬ್ಯಾನ್​.. ಒಂದು ವೇಳೆ ನೋಡಬೇಕೆಂದ್ರೆ ಸಭಾಪತಿಯ ಅನುಮತಿ ಪಡೆಯಬೇಕು’

ವಿಧಾನ ಪರಿಷತ್​​ನಲ್ಲಿ ಇನ್ಮುಂದೆ ಮೊಬೈಲ್ ಬಳಕೆ​ ನಿಷೇಧ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮೊಬೈಲ್ ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ. ಕಲಾಪದ ವೇಳೆ ಅಶ್ಲೀಲ ವಿಡಿಯೋ ನೋಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿಯವರು ಈ ಆದೇಶ ಹೊರಡಿಸಿದ್ದಾರೆ.

‘ವಿಧಾನ ಪರಿಷತ್​​ನಲ್ಲಿ ಇನ್ಮುಂದೆ ಮೊಬೈಲ್​ ಬಳಕೆ​ ಬ್ಯಾನ್​.. ಒಂದು ವೇಳೆ ನೋಡಬೇಕೆಂದ್ರೆ ಸಭಾಪತಿಯ ಅನುಮತಿ ಪಡೆಯಬೇಕು’
ವಿಧಾನ ಪರಿಷತ್

Updated on: Feb 01, 2021 | 7:32 PM

ಬೆಂಗಳೂರು: ವಿಧಾನ ಪರಿಷತ್​​ನಲ್ಲಿ ಇನ್ಮುಂದೆ ಮೊಬೈಲ್ ಬಳಕೆ​ ನಿಷೇಧ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮೊಬೈಲ್ ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ. ಕಲಾಪದ ವೇಳೆ ಅಶ್ಲೀಲ ವಿಡಿಯೋ ನೋಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿಯವರು ಈ ಆದೇಶ ಹೊರಡಿಸಿದ್ದಾರೆ.

ಜೊತೆಗೆ, ಮಾಹಿತಿಗಾಗಿ ಮೊಬೈಲ್​ ನೋಡಬೇಕೆಂದ್ರೆ ಅನುಮತಿ ಬೇಕು. ಮೊಬೈಲ್ ನೋಡಲು ಸಭಾಪತಿಯ ಅನುಮತಿ ಪಡೆಯಬೇಕು ಎಂದು ಸಹ ಹೇಳಲಾಗಿದೆ.

ಪ್ರಕಟಣೆ ಮೂಲಕ ಸದನಕ್ಕೆ ಮಾಹಿತಿ ನೀಡಿದ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ 03/06/2011 ರಲ್ಲಿ ಸದನದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎಂದು ಆದೇಶವಾಗಿತ್ತು. ಅದ್ರೆ, ಸದನದೊಳಗೆ ಈಗಲೂ ಮೊಬೈಲ್‌ಗಳು ರಿಂಗಣಿಸುತ್ತಿದೆ. ಇದು ಕಡೆಯ ವಾರ್ನಿಂಗ್. ಇನ್ಮುಂದೆ ಸದನದೊಳಗೆ ಮೊಬೈಲ್ ತರುವಂತಿಲ್ಲ. ಒಂದು ವೇಳೆ ತಂದರೆ ಸೂಕ್ತ ಕ್ರಮ ಜರುಗಿಸಲಾಗುವುದು.

ಮೊಬೈಲ್ ತಂದರೆ, ಸ್ವಿಚ್ ಆಫ್ ಮಾಡಬೇಕು. ಮಾಹಿತಿಗಾಗಿ ಮೊಬೈಲ್ ತರುವುದಾದ್ರೆ ಸಭಾಪತಿಗಳ ಅನುಮತಿ ಪಡೆಯಬೇಕೆಂದು ಪ್ರತಾಪ್‌ ಚಂದ್ರ ಶೆಟ್ಟಿ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ನಿಲ್ಲದ ‘ಬ್ಲೂ ಬಾಯ್ಸ್’ ಕ್ವಾಟ್ಲೆ: ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್​ ಸದಸ್ಯನಿಂದ ನೀಲಿ ಚಿತ್ರ ವೀಕ್ಷಣೆ